ಗುರು ದೇಶ್​ಪಾಂಡೆ ‘ಪೆಂಟಗನ್’​ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರ

‘ಜಂಟಲ್​ಮನ್’​ ಸಿನಿಮಾ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್​ಪಾಂಡೆ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಐದು ಕಥೆಗಳನ್ನ ಒಳಗೊಂಡ ‘ಪೆಂಟಗನ್' ಚಿತ್ರವನ್ನು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

published : 03 Mar 2021

ಮಾರ್ಚ್ 18ಕ್ಕೆ 'ಮುಂದುವರೆದ ಅಧ್ಯಾಯ' ಬಿಡುಗಡೆ!

ಬಹುಸಮಯದ ಬಳಿಕ ನಟ ಆದಿತ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮುಂದುವರೆದ ಅಧ್ಯಾಯ ಚಿತ್ರ ಮಾರ್ಚ್ 18ರಂದು ಬಿಡುಗಡೆಯಾಗಲಿದೆ.

published : 03 Mar 2021

ಕೆಲವರು ಸಣ್ಣ ಚಿಲ್ಲರೆ ಗಲಾಟೆಯಿಂದ ಹಲ್ಲೆ, ಕೊಲೆಯವರೆಗೂ ಹೋಗುತ್ತಾರೆ: ನವರಸ ನಾಯಕ ಜಗ್ಗೇಶ್

ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ನ ನವರಸನಾಯಕ ಜಗ್ಗೇಶ್ ಅವರ ಮಧ್ಯೆ ಸಣ್ಣ ಮನಸ್ತಾಪ ನಡೆದಿದ್ದು, ಎಲ್ಲವೂ ಬಗೆಹರಿದಿದೆ. ಈ ಬೆನ್ನಲ್ಲೇ ಇದೀಗ ಜಗ್ಗೇಶ್ ಅವರು ವಿಮರ್ಶಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ಹರಿಬಿಟ್ಟಿದ್ದಾರೆ.

published : 02 Mar 2021

ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಳ್ಳದಿದ್ದಲ್ಲಿ ಈ ಸಿನಿಮಾ ಆಗುತ್ತಿರಲಿಲ್ಲ: 'ಹೀರೋ' ನಿರ್ದೇಶಕ ಭರತ್ ರಾಜ್

ಲಾಕ್ ಡೌನ್ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಮಾಡಿಕೊಂಡವರ ಪೈಕಿ ಸ್ಯಾಂಡಲ್ ವುಡ್ ಚೊಚ್ಚಲ ನಿರ್ದೇಶಕ ಎಂ.ಭರತ್ ರಾಜ್ ಕೂಡ ಸೇರಿದ್ದಾರೆ.

published : 02 Mar 2021

ಬಿಗ್ ಬಾಸ್ ಮನೆಗೆ ರಾಜಕೀಯ ರಂಗು: ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಎಂಟ್ರಿ?

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಅದಾಗಲೇ ಎಲ್ಲಾ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

published : 01 Mar 2021

'ದೃಶ್ಯಂ-2' ಚಿತ್ರ ಮೆಚ್ಚಿಕೊಂಡ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ತಮ್ಮ ಬಿಡುವಿನ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಥ್ರಿಲ್ಲರ್‌ ಚಿತ್ರವೊಂದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

published : 01 Mar 2021

ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಅವಘಡ: ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.

published : 01 Mar 2021

ಬೆಳ್ಳಿ ಪರದೆಯ ಮೇಲೆ ಪ್ರತಿ ಫ್ರೇಮ್‌ನ ಭವ್ಯತೆ ಮತ್ತು ಉತ್ಕೃಷ್ಟತೆಯ ಅಂಶವನ್ನು ಹೊರತರುವ ಉದ್ದೇಶ ನನ್ನದು: 'ರಾಬರ್ಟ್' ಡಿಒಪಿ ಸುಧಾಕರ್ ಎಸ್ ರಾಜ್

ಸಿನಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರಿಗೆ "ಚೌಕ" ಚಿತ್ರದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆಗೆ ಒಡನಾಟ ಪ್ರಾರಂಭವಾಗಿತ್ತು.  ಆ ಚಿತ್ರದಲ್ಲಿ ಅವರು ಅತಿಥಿ ಕಲಾವಿದ ದರ್ಶನ್ ಅವರನ್ನು ಚಿತ್ರೀಕರಿಸುವ ಅವಕಾಶ ಪಡೆದಿದ್ದರು.

published : 01 Mar 2021

ವಿವಿಧ ಚಿತ್ರೋದ್ಯಮದ ಗಣ್ಯರಿಂದ 'ಮಡ್ಡಿ' ಟೀಸರ್ ರಿಲೀಸ್

ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾ ಕ್ಷೇತ್ರದ ಅನೇಕ ಸ್ಟಾರ್ ಗಳು "ಮಡ್ಡಿ: ಸಿನಿಮಾದ ಟೀಸರ್ ಅನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದ್ದಾರೆ.

published : 01 Mar 2021

ಸುದೀಪ್ ಭೇಟಿ ಮಾಡಿದ 'ಸಾಹೋ' ನಿರ್ದೇಶಕ: ಕಿಚ್ಚನಿಗೆ ಹೊಸ ಕಥೆ ಹೇಳಿದ ಸುಜಿತ್?

ಸಾಹೋ ನಿರ್ದೇಶಕ ಸುಜಿತ್ ನಟ ಸುದೀಪ್ ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಿದ್ದಾರೆ. ಸುದೀಪ್  ಆಪ್ತ ರಾಮ್ ಸುಜೀತ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

published : 01 Mar 2021


ಸಿಂಗಲ್ ಶಾಟ್ ನಲ್ಲಿ ತಯಾರಾಯ್ತು' ರಕ್ತ ಗುಲಾಬಿ'

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೇಕಿಂಗ್‌ನಲ್ಲಿ ಆಗಾಗ್ಗೆ ಒಂದಷ್ಟು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಈಗ ಇಲ್ಲೊಂದು ಚಿತ್ರತಂಡ ಸಿಂಗಲ್‌ ಶಾಟ್‌ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿ, ತೆರೆಮೇಲೆ ತರಲು ಹೊರಟಿದೆ.  ಆ ಚಿತ್ರದ ಹೆಸರು “ಕೆಂಗುಲಾಬಿ’.

published : 01 Mar 2021

ಮುಂದಿನ ವರ್ಷದ ಏಪ್ರಿಲ್ 14ರಂದು ಪ್ರಶಾಂತ್ ನೀಲ್, ಪ್ರಭಾಸ್ ಜೋಡಿಯ ಸಲಾರ್ ಬಿಡುಗಡೆ

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೋಡಿಯ ಬಹು ನಿರೀಕ್ಷಿತ ಚಿತ್ರ ಸಲಾರ್ ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

published : 28 Feb 2021

"ದಾರಿ ಯಾವುದಯ್ಯ ವೈಕುಂಠಕೆ" 6 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ!

"ದಾರಿ ಯಾವುದಯ್ಯ ವೈಕುಂಠಕೆ" ಚಿತ್ರವು ಬರೋಬ್ಬರಿ 6 ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳು ಆಯ್ಕೆಯಾಗಿದೆ. 

published : 28 Feb 2021

ಸಿನಿಮಾ ನನ್ನ ಗುರುತು, ಬಿಗ್ ಬಾಸ್ ನನ್ನ ಹೃದಯಕ್ಕೆ ಹತ್ತಿರವಾದದ್ದು:  ಬಿಗ್ ಬಾಸ್ ಅನುಭವ ಹಂಚಿಕೊಂಡ ಸುದೀಪ್

ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

published : 27 Feb 2021

ಮಾರ್ಚ್ 3 ರಿಂದ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಶೂಟಿಂಗ್ ಪುನಾರಂಭ

ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಸ್ಥಗಿತಗೊಂಡಿದ್ದ ಕಬ್ಜ ಸಿನಿಮಾ ಶೂಟಿಂಗ್ ಮಾರ್ಚ್ 3 ರಿಂದ ಪುನಾರಂಭಗೊಳ್ಳಲಿದೆ. 

published : 27 Feb 2021

'ಶಾಸ್ತ್ರಿ' ಬೆಡಗಿ ಮಾನ್ಯಾಗೆ ಪಾರ್ಶ್ವವಾಯು!

ಸ್ಯಾಂಡಲ್ ವುಡ್ ನಟರಾದ ಡಾ. ವಿಷ್ಣುವರ್ಧನ್, ಶ್ರೀಮುರಳಿ, ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದ ನಟಿ ಮಾನ್ಯಾಗೆ ಪಾರ್ಶ್ವವಾಯು ತಗುಲಿದೆ.

published : 26 Feb 2021

ಸಿನಿಮಾ, ಸಮಾಜಮುಖಿ ಕಾರ್ಯಗಳತ್ತ ಇನ್ನು ನನ್ನ ಗಮನ: ರಾಗಿಣಿ ದ್ವಿವೇದಿ

ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿ ಜೈಲಿನಿಂದ ಹೊರಬಂದಿರುವ ನಟಿ ರಾಗಿಣಿ ದ್ವಿವೇದಿ ಎಲ್ಲ ಆತಂಕಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ಇನ್ನು ಮುಂದೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳತ್ತ ಗಮನಹರಿಸುವೆ ಎಂದು ಹೇಳಿಕೊಂಡಿದ್ದಾರೆ. 

published : 26 Feb 2021

ಭಾನುವಾರದಿಂದ 'ಬಿಗ್ ಬಾಸ್' ಕನ್ನಡ ಸೀಸನ್ 8: ಕೊರೋನಾ ನಿಯಮಗಳ ನಡುವೆ 100 ದಿನಗಳ ಆಟ ಶುರು!

ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

published : 25 Feb 2021

'ಮಹಾವೀರ್ಯರ್' ಸಿನಿಮಾ ಮೂಲಕ ಮಾಲಿವುಡ್ ಗೆ ಶಾನ್ವಿ ಶ್ರೀವಾಸ್ತವ್ ಪ್ರವೇಶ

ಮಲಯಾಳಂ ನಟ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿದ್ದಾರೆ.

published : 25 Feb 2021

ಪೊಗರು ಸಿನಿಮಾದ 16 ದೃಶ್ಯಗಳಿಗೆ ಕತ್ತರಿ: ಪರಿಷ್ಕೃತ ಆವೃತ್ತಿ ಇಂದು ಅಪ್ ಲೋಡ್

ಪೊಗರು ಚಿತ್ರದಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ 16 ಆಕ್ಷೇಪಾರ್ಹ ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ.  

published : 25 Feb 2021

ವಿಶಾಲ್ ಶೇಖರ್ ರವರ 'ಕರ್ವ-3' ಸಿನಿಮಾದಲ್ಲಿ ರಾಗಿಣಿ ದ್ವಿವೇದಿ!

ಸುಮಾರು ನಾಲ್ಕು ತಿಂಗಳ ಕಾಲ ಸ್ಯಾಂಡಲ್​ವುಡ್​ ಡ್ರಗ್​ ಲಿಂಕ್​ ಕೇಸ್​ ವಿಚಾರವಾಗಿ ಜೈಲು ಸೇರಿದ್ದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.

published : 25 Feb 2021

'ಪೊಗರು' ವಿವಾದ: ಕ್ಷಮೆ ಕೇಳಿದ ಧ್ರುವ ಸರ್ಜಾ

ಇತ್ತೀಚೆಗೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎನ್ನುವ ಆರೋಪಕ್ಕೆ ನಾಯಕ ನಟ ಧ್ರುವ ಸರ್ಜಾ ಕ್ಷಮೆ ಕೇಳಿದ್ದಾರೆ.

published : 24 Feb 2021

ಜಗ್ಗೇಶ್ ಮನೆಗೆ ಬಂದರೆ ಅತಿಥ್ಯ, ಆದರೆ, ರೇಸ್ ಅಂತ ಬಂದಾಗ ರೇಸ್ ಗೆ ನಿಲ್ತೇನೆ: ದರ್ಶನ್ ತಿರುಗೇಟು

ನವರಸ ನಾಯಕ ಜಗ್ಗೇಶ್ ಜೊತೆಗಿನ ಅಭಿಮಾನಿಗಳ ಕಿರಿಕ್ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

published : 24 Feb 2021

ಮೌನ ಮುರಿಯದ ನಟ ದರ್ಶನ್, ಹಳೆಯ ನೆನಪುಗಳನ್ನು ಕೆದಕಿ ನಟ ಜಗ್ಗೇಶ್ ಗರಂ!

ಚಿತ್ರೀಕರಣ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮುತ್ತಿಗೆ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಕುರಿತು ಮೌನ ವಹಿಸಿರುವ ನಟ ದರ್ಶನ್ ಬಗ್ಗೆ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

published : 24 Feb 2021