

ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕ ತೆಲುಗು ಮತ್ತು ಕೊಡವ ವಿಧಿವಿಧಾನಗಳೊಂದಿಗೆ ತೀರಾ ಖಾಸಗಿಯಾಗಿ ವಿವಾಹವಾದ ನಂತರ ಮಾರ್ಚ್ 4ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನ ತಾಜ್ ಕೃಷ್ಣ ಹೊಟೇಲ್ ನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ.
ರಶ್ಮಿಕಾ-ವಿಜಯ್ ದಂಪತಿ
ಹಲವು ಬಾಲಿವುಡ್-ಕಾಲಿವುಡ್ ತಾರೆಯರು ಆಗಮಿಸಿ ಸಮಾರಂಭಕ್ಕೆ ಮೆರುಗು ತುಂಬಿದರು.
ಕುರ್ತಾ ಧರಿಸಿ ಬಂದ ಅಲ್ಲು ಅರ್ಜುನ್ ಜೋಡಿಗೆ ಮನತುಂಬಿ ವಿಶ್ ಮಾಡಿ ಫೋಟೋಗೆ ಫೋಸ್ ಕೊಟ್ಟರು.
ಹೂಗುಚ್ಛದೊಂದಿಗೆ ಆಗಮಿಸಿದ ರಾಮ್ ಚರಣ್ ದಂಪತಿ, ಮಹೇಶ್ ಬಾಬು ಕುಟುಂಬ ಸಹ ಮನಸ್ಪೂರ್ತಿ ಹಾರೈಸಿದರು.
ರಾಜಕೀಯ ವಲಯದಿಂದ ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ತೆಲಂಗಾಣ ಮಾಜಿ ಸಚಿವ ಕೆ ಟಿ ರಾಮ ರಾವ್ ಹಾಜರಿದ್ದರು.
ಬಾಲಿವುಡ್ ನಿಂದ ಕರಣ್ ಜೋಹರ್, ಕೃತಿ ಸನೋನ್ ಕೂಡ ಹಾಜರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಂಡ ಕ್ಷಣಗಳು ವೈರಲ್ ಆಗಿದ್ದು, ರಶ್ಮಿಕಾ ವಿಜಯ್ ಅವರನ್ನು “ನನ್ನ ಗಂಡ” ಎಂದು ಕರೆಯುವ ದೃಶ್ಯಗಳಿಂದ ಹಿಡಿದು, ಪರಸ್ಪರ ಸಿಹಿ ತಿನ್ನಿಸುವ ಮಧುರ ಕ್ಷಣಗಳವರೆಗೆ ಎಲ್ಲವೂ ಗಮನ ಸೆಳೆದವು.
ರಶ್ಮಿಕಾ ಮಂದಣ್ಣ ಬಹುತೇಕ ತಾಯಿ ರೀತಿಯಲ್ಲೇ ಇದ್ದಾರೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು, ರಶ್ಮಿಕಾ ಅವರ ಸಹೋದರಿ ಶಿಮಾನ್ ಮಂದಣ್ಣ ಕೂಡ ಗಮನ ಸೆಳೆದರು.
ಕುಟುಂಬದ ಫೋಟೋ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಇಡೀ ಕುಟುಂಬ ಒಂದೇ ಕಡೆ ಸೇರಿತ್ತು. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇತ್ತು.
Advertisement