ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆ 

ಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ.

published : 17 Mar 2022

ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆ

ಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'.

published : 28 Feb 2022

ಪ್ರತಿ ಸಿಪ್ಪಲ್ಲೂ ಕ್ರಿಯೇಟಿವಿಟಿಯ ಕಿಕ್ಕು: 'ಓಲ್ಡ್ ಮಾಂಕ್' ಚಿತ್ರವಿಮರ್ಶೆ 

ನಡೆಯದ ಕಥೆಯೇ ಆದರೂ ಬಿಲೀವೆಬಲ್ ಆಗಿ ಸ್ಟೋರಿ ಟೆಲ್ಲಿಂಗ್ ಮಾಡೋದು ಶ್ರೀನಿ ಸಿನಿಮಾಗಳ ವೈಶಿಷ್ಟ್ಯತೆ. 'ಓಲ್ಡ್ ಮಾಂಕ್' ಸಿನಿಮಾದಲ್ಲೂ ಈ ತಂತ್ರಗಾರಿಕೆಯನ್ನು ಕಾಣಬಹುದು. ಅಲ್ಲದೆ ಎಷ್ಟೊಂದು ಕ್ರಿಯೇಟಿವ್ ಆಗಲು ಸಾಧ್ಯವೋ ಅವೆಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿರುವುದು ಸಿನಿಮಾದ ಹೆಗ್ಗಳಿಕೆ.

published : 25 Feb 2022

ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ

ಗ್ಲಾಮರ್ ಮಾತ್ರವಲ್ಲದೆ ನಟನಾ ಚಾತುರ್ಯವನ್ನು ಹೊರಗೆಡಹುವ ಪಾತ್ರ ಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸು. ಧನ್ವೀರ್- ಶ್ರೀಲೀಲಾ ಇಬ್ಬರಿಗೂ ಆ ಕನಸು 'Bytwo ಲವ್' ಸಿನಿಮಾ ಮೂಲಕ ನನಸಾಗಿದೆ. ಆಧುನಿಕ ಕಾಲದ ಪ್ರೇಮಿಗಳ ತಾಕಲಾಟವನ್ನು ಹಾಗೂ ದಾಂಪತ್ಯದ ತೊಳಲಾಟವನ್ನು ನಿರ್ದೇಶಕ ಹರಿಸಂತೋಷ್ ಸೊಗಸಾಗಿ ತೋರ್ಪಡಿಸಿದ್ದಾರೆ.

published : 19 Feb 2022

ಸಿಕ್ಸ್ ಪ್ಯಾಕ್ ಸಿನಿಮಾಗಳ ನಡುವೆ ಹೊಟ್ಟೆ ತುಂಬಾ ನಗಿಸುವ ಅತೃಪ್ತ ಆತ್ಮ: ಫ್ಯಾಮಿಲಿ ಪ್ಯಾಕ್ ಚಿತ್ರವಿಮರ್ಶೆ

ಪ್ರೇಕ್ಷಕರಿಗೆ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ಕಾಮಿಕ್ ರಿಲೀಫ್ ಅನ್ನು ಲಿಖಿತ್ ಶೆಟ್ಟಿ- ಅಮೃತಾ ಅಯ್ಯಂಗಾರ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ನೀಡುತ್ತದೆ. ತಿರುವುಗಳನ್ನು ಹೊಂದಿರುವ ಕಥೆಯೇ ಹಾಸ್ಯವನ್ನು ಒದಗಿಸಿರುವುದರಿಂದ, ಡಬಲ್ ಮೀನಿಂಗ್ ಸಂಭಾಷಣೆಗೆ ಒತ್ತು ಕೊಡಲಾಗಿಲ್ಲ ಎನ್ನುವುದು ಸಿನಿಮಾದ ಪ್ಲಸ್ ಪಾಯಿಂಟ್.

published : 18 Feb 2022

ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆ 

ಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. 'ಬಹುಕೃತ ವೇಷಂ' ಈ ಸಾಲಿಗೆ ಹೊಸ ಸೇರ್ಪಡೆ. ಸಿನಿಮಾದಲ್ಲಿ ಶಶಿಕಾಂತ್ ಮತ್ತು ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್.

published : 18 Feb 2022

ಅಂಜದ ಗಂಡು ಕಥಾನಾಯಕ ಮೀಟ್ಸ್ ಬಿಗ್ ಬಾಸ್ ರೌಡಿ: 'ರೌಡಿ ಬೇಬಿ' ಚಿತ್ರವಿಮರ್ಶೆ

ನಾಯಕ ನಟ ರವಿ ಗೌಡ ಸೇರಿದಂತೆ ಹಲವು ಹೊಸ ಪೋಷಕಪಾತ್ರಧಾರಿಗಳಿಂದ ನಟನೆಯನ್ನು ಪಡೆದುಕೊಳ್ಳಲು ನಿರ್ದೇಶಕರು ಪಟ್ಟಿರುವ ಶ್ರಮ ಪ್ರಶಂಸಾರ್ಹ. ಪಾತ್ರಧಾರಿಗಳ ನಟನಾ ನ್ಯೂನತೆಯನ್ನು ಮರೆಸಲು ಸಿನಿಮಾ, ಕಾಮಿಡಿ ಮತ್ತು ಸಂಭಾಷಣೆ ಮೊರೆ ಹೊಕ್ಕಿದೆ.

published : 12 Feb 2022

ನಾಯಕನಿಗೆ ಸವಾಲೆಸೆಯಬಲ್ಲ conflict ಮತ್ತು ವಿಲನ್ ಇಲ್ಲದಿರುವುದೇ ಈ ಸಿನಿಮಾದ ಪ್ರಾಬ್ಲಮ್ಮು: ಶ್ಯಾಮ್ ಸಿಂಘ ರಾಯ್ ತೆಲುಗು ಚಿತ್ರವಿಮರ್ಶೆ

ನ್ಯಾಚುರಲ್ ಸ್ಟಾರ್ ನಾನಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿದ್ದು ಪುನರ್ಜನ್ಮದ ಕಥೆಯನ್ನು ಹೊಂದಿದ್ದ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ. ಇದೀಗ 'ಶ್ಯಾಮ್ ಸಿಂಘ ರಾಯ್' ಮೂಲಕ ನಾನಿ ತಮಗೆ ಚಿತ್ರರಂಗದಲ್ಲಿ ಹೊಸ ಹುಟ್ಟು ನೀಡಿದ್ದ ಪುನರ್ಜನ್ಮ ಕಥಾಪ್ರಕಾರಕ್ಕೆ ಮೊರೆ ಹೋಗಿದ್ದಾರೆ.

published : 28 Jan 2022

ನಿರ್ಮಾಪಕ ಕೋಟಿ ರಾಮು ಸಿನಿಮಾ ಪರಂಪರೆಗೊಂದು ಪರ್ಫೆಕ್ಟ್ ಸೆಲ್ಯೂಟ್: ಅರ್ಜುನ್ ಗೌಡ ಚಿತ್ರವಿಮರ್ಶೆ

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸಿನಿಮಾ ಪರಂಪರೆಯನ್ನು ಹುಟ್ಟುಹಾಕಿದವರು ನಿರ್ಮಾಪಕ ​ಕೋಟಿ ರಾಮು. ಅವರು ಕಂಡ ಕಡೆಯ ಕನಸು, ಲಕ್ಕಿ ಶಂಕರ್ ನಿರ್ದೇಶನದ 'ಅರ್ಜುನ್ ಗೌಡ'. ವೈಭವೋಪೇತ ಆಕ್ಷನ್ ದೃಶ್ಯಗಳು, ರಾಕ್ಷಸ ಕುಲದ ಖಳನಟರು, ಆಪತ್ಬಾಂಧವ ನಾಯಕರು ರಾಮು ಸಿನಿಮಾಗಳ ವೈಶಿಷ್ಟ್ಯ. ಈ ಸಿನಿಮಾದಲ್ಲೂ ಅವುಗಳನ್ನು ಕಾಣಬಹುದು.

published : 31 Dec 2021

ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ

ಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. 

published : 24 Dec 2021

ಭೋರ್ಗರೆವ ಘರ್ಜನೆ ನಡುವೆ ಮಾನವೀಯ ಎಳೆಗಳ ಸಿಂಚನ, ಫಾರ್ಮುಲಾಗಳ ಅನುರಣನ: ಮದಗಜ ಚಿತ್ರ ವಿಮರ್ಶೆ

ಸ್ಯಾಂಡಲ್ ವುಡ್ ನಲ್ಲಿ ಉಗ್ರಂ, ಕೆ.ಜಿ.ಎಫ್ ಸಿನಿಮಾಗಳ ಮೂಲಕ ತಮ್ಮದೇ genre ಅನ್ನು ಹುಟ್ಟು ಹಾಕಿದವರು ನಿರ್ದೇಶಕ ಪ್ರಶಾಂತ್ ನೀಲ್. 'ಮದಗಜ' ನಿರ್ದೇಶಕ ಎಸ್. ಮಹೇಶ್ ಕುಮಾರ್ ಅದೇ ಹಾದಿಯಲ್ಲಿ ಸಾಗಿದ್ದಾರೆ. ಮುರಳಿ ನಟನೆಯ ಈ ಸಿನಿಮಾ ಅವರ ಫ್ಯಾನ್ಸ್ ಗೆ ಮಾತ್ರವಲ್ಲದೆ ಮನೆಮಂದಿಗೆ ಇಷ್ಟವಾಗಲು ಹಲವು ಕಾರಣಗಳಿವೆ. 

published : 06 Dec 2021

ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ

ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಯವರನ್ನು ನೋಡಿ ನಕ್ಕಿದ್ದವರು, ಈ ಸಿನಿಮಾ ನೋಡಿ ಗಂಭೀರವದನ ತಾಳುವುದರಲ್ಲಿ ಸಂಶಯವೇ ಇಲ್ಲ. ತಾವು ಸೀರಿಯಸ್ ಆಕ್ಟರ್ ಅಂಡ್ ಡೈರೆಕ್ಟರ್ ಎನ್ನುವುದನ್ನು ರಾಜ್ ಬಿ. ಶೆಟ್ಟಿ ಈ ಸಿನಿಮಾ ಮೂಲಕ ಸಾಬೀತುಪಡಿಸಿದ್ದಾರೆ.

published : 20 Nov 2021

ಮನುರಂಜನ್ ರೂಪದಲ್ಲಿ ರವಿಚಂದ್ರನ್ ಈಸ್ ಬ್ಯಾಕ್: ಮುಗಿಲ್ ಪೇಟೆ ಸಿನಿಮಾದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ: ಚಿತ್ರ ವಿಮರ್ಶೆ

ಮನುರಂಜನ್ ಅವರಲ್ಲಿ ರವಿಚಂದ್ರನ್ ರನ್ನು ತೋರಿಸಲು ನಿರ್ದೇಶಕರು ಪ್ರಯತ್ನಿಸಿರುವುದು ಸಿನಿಮಾದಲ್ಲಿ ಕಾಣುತ್ತದೆ. ಈ ಪ್ರಯತ್ನ ರವಷ್ಟೂ ಚ್ಯುತಿ ಬಾರದಂತೆ ಯಶಸ್ವಿಯಾಗಿದೆ ಕೂಡಾ.

published : 19 Nov 2021

ದಕ್ಷಿಣ ಭಾರತೀಯರನ್ನು ಚಂದಗಾಣಿಸುವ ಯತ್ನದಲ್ಲಿ ಕರಣ್ ಜೋಹರ್ ಸಿನಿಮಾ ಯಶಸ್ವಿ: ಮೀನಾಕ್ಷಿ ಸುಂದರೇಶ್ವರ್ ಚಿತ್ರವಿಮರ್ಶೆ

ಸೌತ್ ಇಂಡಿಯನ್ ಎಂದ ಕೂಡಲೆ ಹೊರಗಿನವರಿಗೆ ಯಾವೆಲ್ಲಾ ವಸ್ತುಗಳು, ಸಂಗತಿಗಳು ನೆನಪಾಗುವವೋ ಅವೆಲ್ಲವೂ ಈ ಸಿನಿಮಾದಲ್ಲಿ ಅಡಕ. ಬಾಗಿಲ ತೋರಣ, ತೆಂಗಿನ ಕಾಯಿ, ಇಡ್ಲಿ ಸಾಂಬಾರ್, ತೊಟ್ಟಿ ಮನೆ, ಅಟ್ಟ, ರಜಿನಿಕಾಂತ್, ಜಿಗರ್ಥಂಡ ಪೇಯ, ಪಾಯಸಂ, ರೇಷಿಮೆ ಸೀರೆ, ಫಿಲ್ಟರ್ ಕಾಫಿ. You name it. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಮದುವೆ ಫೋಟೊ ಶೂಟಿನಂತೆ ಕಂಗೊಳಿಸುತ್ತದೆ.

published : 10 Nov 2021

ಪಾಪ್ಯುಲರ್ ಸಿನಿಮಾ ಆಸೆಗೆ ಬಲಿಯಾಯಿತೇ ಗ್ರೇಟ್ ಕಥಾವಸ್ತು: ಜೈಭೀಮ್ ಚಿತ್ರ ವಿಮರ್ಶೆ 

ಶೋಷಿತ ವರ್ಗದ ಮೇಲಾದ ಅನ್ಯಾಯ, ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ ಈ ವಿಚಾರಗಳ ಮೇಲೆ ಜೈ ಭೀಮ್ ಬೆಳಕು ಚೆಲ್ಲುತ್ತದೆ ಎನ್ನುವುದೆಲ್ಲಾ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ತೆರೆ ಮೇಲೆ ತೋರ್ಪಡಿಸಿರುವ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಲೈಫ್ ಈಸ್ ನಾಟ್ ಬ್ಲ್ಯಾಕ್ ಅಂಡ್ ವೈಟ್, it's also grey.

published : 06 Nov 2021

ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ

ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಈ ಭೂಮಿ ಮೇಲಿದೆ ಎನ್ನುವ ಅರ್ಥದ ಸಾಲುಗಳಿಂದ ತೆರೆದುಕೊಳ್ಳುವ ಎ. ಹರ್ಷ ನಿರ್ದೇಶನದ ಭಜರಂಗಿ2 ಸಿನಿಮಾ ನಾನಾ ವಿಧಗಳಲ್ಲಿ ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಿದೆ. ಚಿತ್ರದ ಕಡೆಯಲ್ಲಿ ಬರುವ ಹಲವು ದೃಶ್ಯಗಳು, ಸಂಭಾಷಣೆಗಳು, ಪುನೀತ್ ಅಭಿಮಾನಿಗಳಿಗೆ ಸಾಂತ್ವನ ಹೇಳುವಂತಿರುವುದು ಕಾಕತಾಳೀಯ.

published : 03 Nov 2021

ಫ್ಯಾಮಿಲಿ ಮ್ಯಾನ್ ಆಗಿ ಜಗತ್ತನ್ನು ರಕ್ಷಿಸುವ ಜೇಮ್ಸ್ ಬಾಂಡ್; ಮುಗಿದ ಡೇನಿಯಲ್ ಕ್ರೇಗ್ 007 ಅಧ್ಯಾಯ: ನೋ ಟೈಮ್ ಟು ಡೈ ಚಿತ್ರ ವಿಮರ್ಶೆ

ಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ವಿ.ಸೂ- ಆಕ್ಷನ್ ಚಿತ್ರ ಎನ್ನುವ ಖಾತರಿಯಲ್ಲಿ ಕರ್ಚೀಫ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ.

published : 30 Sep 2021

ತಲೈವಿ ಸಿನಿಮಾದಲ್ಲಿ ಎಂಜಿಆರ್ ದೇ ಹವಾ; ಮನಗೆಲ್ಲುವ ಕಂಗನಾ- ಅರವಿಂದ್ ಸ್ವಾಮಿ ಮ್ಯಾಜಿಕ್: ಚಿತ್ರವಿಮರ್ಶೆ

ನಾಯಕ ನಾಯಕಿಯ ಪಾತ್ರಗಳಲ್ಲಿ ಯಾವುದೇ ದೋಷಗಳನ್ನು ತೋರ್ಪಡಿಸಲಾಗಿಲ್ಲ. ಅದು ಪ್ರಯತ್ನಪೂರ್ವಕ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅದೊಂದೇ ಕಾರಣದಿಂದ ಸಿನಿಮಾ ಕೃತಕ ಎನ್ನಿಸಬಹುದಾದ ಅಪಾಯವೂ ಇದೆ. ಆದರೆ ತಮಿಳುನಾಡಿನಲ್ಲಿ ಎಂಜಿಆರ್, ಜಯಾ ಇಬ್ಬರನ್ನೂ ದೇವರು ಎಂದು ಆರಾಧಿಸುವುದರಿಂದ, ದೇವರಲ್ಲಿ ದೋಷ ಇರುವುದಿಲ್ಲ ಎನ್ನುವ ರಿಯಾಯ್ತಿಯನ್ನೂ ನೀಡಬಹುದು!

published : 27 Sep 2021

ಕ್ಲೀಷೆಗಳ ಹೊರತಾಗಿಯೂ ಮನರಂಜಿಸುವ ನ್ಯಾಚುರಲ್ ಸ್ಟಾರ್ ನಾನಿಯ 'ಟಕ್ ಜಗದೀಶ್': ಸಿನಿಮಾ ವಿಮರ್ಶೆ

ನಾನಿಯ ಈ ಚಿತ್ರ ನೋಡುವುದಕ್ಕೆ ಕೂರುವ ಮುನ್ನ ವೀಕ್ಷಕರಲ್ಲಿ, ಅಭಿಮಾನಿಗಳಲ್ಲಿ ಮೂಡುವ ಮೊತ್ತ ಮೊದಲ ಪ್ರಶ್ನೆ ಸಿನಿಮಾದ ಶೀರ್ಷಿಕೆ ಕುರಿತಾದದ್ದು. ಹೊಡೆದಾಟ ಬಡಿದಾಟಗಳಿದ್ದರೂ ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಮನರಂಜನೆಯ ಚಿತ್ರ.

published : 16 Sep 2021

ಪ್ರೀತಿ, ಭಾವನೆ, ನೆನಪುಗಳ ಮೇಲೆ ಸಾಗುವ ಚಿತ್ರ 'ಮರ್ಫಿ'!

ಮರ್ಫಿ” ಎಂಬ ರೊಮ್ಯಾಂಟಿಕ್ ಡ್ರಾಮಾಗಾಗಿ  ಜೊತೆಯಾಗಿರುವ “ಊರ್ವಿ” ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಮತ್ತು ನಟ ಪ್ರಭು ಮುಂಡ್ಕೂರ್ ಈಗಾಲೇ ಶೇ. 30 ರಷ್ಟು ಸಿನಿಮಾ ಶೂಟಿಂಗ್ ಪೂರ್ತಿ ಗೊಳಿಸಿದ್ದಾರೆ.

published : 05 May 2021

ರಾಶಿ ಭವಿಷ್ಯ