A Still from megha cinema
ಮೇಘ ಸಿನಿಮಾ ಸ್ಟಿಲ್

Megha Movie Review: ಯುವ ಮನಸ್ಸುಗಳ ಆಂತರಿಕ ಸಂಘರ್ಷ; ಸ್ನೇಹ-ಸಂಬಂಧದಲ್ಲಿ ಸಂವಹನ-ನಂಬಿಕೆ ಬಹಳ ಮುಖ್ಯ!

Published on
Rating(3 / 5)
Summary

ಕಿರಣ್ ರಾಜ್ ಮತ್ತು ಕಾಜಲ್ ಕುಂದರ್ ಅಭಿನಯದ 'ಮೇಘ' ಚಿತ್ರವು ಸ್ನೇಹ ಮತ್ತು ಪ್ರೀತಿಯ ಸಂಕೀರ್ಣತೆಗಳನ್ನು ತೋರಿಸುತ್ತದೆ. ಹಿಂದಿನ ಪ್ರೀತಿಯ ದ್ರೋಹದಿಂದ ಸ್ನೇಹಿತರಾಗಿ ಇರುವುದಕ್ಕೆ ಒಪ್ಪಿಕೊಳ್ಳುವ ಅವರು, ನಿಜವಾದ ಪ್ರೀತಿ ಎದುರಾದಾಗ ಏನು ಮಾಡುತ್ತಾರೆ ಎಂಬ ಕುತೂಹಲವನ್ನು ಚಿತ್ರದಲ್ಲಿ ನೋಡಬಹುದು. ಸಂಬಂಧಗಳಲ್ಲಿ ಸಂವಹನದ ಮಹತ್ವವನ್ನು ಎತ್ತಿಹಿಡಿದಿರುವ ಈ ಸಿನಿಮಾ, ಮನುಷ್ಯನ ಭಾವನೆಗಳ ನಿಜಸ್ವರೂಪವನ್ನು ತೋರಿಸುತ್ತದೆ.

ಕಿರುತೆರೆಯಲ್ಲಿ ಮಿಂಚಿದ ಕಿರಣ್‌ ರಾಜ್‌ ಅವರ ಮೇಘ ಚಿತ್ರ ಬಿಡುಗಡೆಯಾಗಿದೆ. ಮೇಘಾ (ಕಿರಣ್ ರಾಜ್) ಮತ್ತು ಮೇಘಾ (ಕಾಜಲ್ ಕುಂದರ್) ಪ್ರೀತಿಯ ಅಸ್ತಿತ್ವವನ್ನು ನಂಬುವುದಿಲ್ಲ. ಹಿಂದಿನ ಪ್ರೀತಿಯ ದ್ರೋಹದಿಂದ, ಅವರು ಸ್ನೇಹಿತರಾಗಿರಲು ಒಪ್ಪುತ್ತಾರೆ. ಆದರೆ ನಿಜವಾದ ಪ್ರೀತಿ ಅವರ ಮನಸ್ಸು ತಟ್ಟಿದಾಗ, ಅವರು ಪ್ರೀತಿಯನ್ನು ಸ್ವೀಕರಿಸುತ್ತಾರೆಯೇ ಅಥವಾ ತಿರಸ್ಕರಿಸುತ್ತಾರೆಯೇ ಎಂಬುದನ್ನು ತಿಳಿಯಲು ಚಿತ್ರವನ್ನು ನೋಡಬೇಕು.

ಯಾವುದೇ ಸಂಬಂಧ ಗಟ್ಟಿಯಾಗಿ ಇರಬೇಕು ಎಂದರೆ ಅಲ್ಲಿ ಪರಸ್ಪರರಲ್ಲಿ ಗೌರವ ಇರಬೇಕು. ನಂಬಿಕೆ ಇರಬೇಕು..ಏನಾದರೂ ಸಮಸ್ಯೆ ಬಂದಾಗ ಮಾತನಾಡಿ ಪರಿಹರಿಸಿಕೊಳ್ಳಬೇಕು. ಪ್ರೀತಿ ಮತ್ತು ಸ್ನೇಹದಲ್ಲಿ ಸಂವಹನ ತುಂಬ ಮುಖ್ಯವಾಗಿರುತ್ತದೆ.. ಇದನ್ನೇ ʼಮೇಘಾʼ ಸಿನಿಮಾ ಎತ್ತಿಹಿಡಿದಿದೆ.

ಕಿರುತೆರೆಯಲ್ಲಿ ಮಿಂಚಿದ್ದ ಕಿರಣ್‌ ರಾಜ್‌ ನಟನೆಯ ಸಿನಿಮಾ ಮೇಘ ರಿಲೀಸ್ ಆಗಿದೆ, ಮೇಘಾ (ಕಿರಣ್ ರಾಜ್) ಮತ್ತು ಮೇಘಾ (ಕಾಜಲ್ ಕುಂದರ್) ಪ್ರೀತಿ ಎಂಬ ಪರಿಕಲ್ಪನೆಯನ್ನು ನಂಬುವುದಿಲ್ಲ. ಕಾರಣ ಇಬ್ಬರಿಗೂ ಈ ಹಿಂದೆ ನಡೆದಿರುವ ಪ್ರೀತಿಯ ದ್ರೋಹದಿಂದಾಗಿ ಪರಸ್ಪರ ಸ್ನೇಹಿತರಾಗಿ ಇರಲು ಒಪ್ಪಂದ ಮಾಡಿಕೊಳ್ಳುತ್ತಾರೆ. ಆದರೆ ನಿಜವಾದ ಪ್ರೀತಿ ಅವರ ಎದೆ ಕದ ತಟ್ಟಿದಾಗ,ಇಬ್ಬರು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆಯೇ ಅಥವಾ ಆ ಪ್ರೀತಿಯನ್ನು ದೂರ ತಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಸಂಬಂಧಗಳಲ್ಲಿ ಸಂವಹನ-ಮಾತುಕತೆ ಎಂಬುದು ಎಷ್ಟು ಮುಖ್ಯ ಎಂಬುದನ್ನ ಮೇಘಾ ಸಿನಿಮಾದಲ್ಲಿ ತೋರಿಸಲಾಗಿದೆ. ಮಾನವೀಯ ಸಂಬಂಧದ ಮಹತ್ವವನ್ನ ತಿಳಿಸುವಂಥ ಸಿನಿಮಾ ಇದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯವಾಗಿ ಸಿನಿಮಾಗಳು ಪ್ರೀತಿಗೆ ಒತ್ತು ನೀಡಿದರೆ, ಮೇಘಾದಲ್ಲಿ ಭಿನ್ನವಾಗಿ, ಸ್ನೇಹಕ್ಕೆ ಜಾಸ್ತಿ ಪ್ರಾಮುಖ್ಯತೆ ನೀಡಲಾಗಿದೆ. ಮೇಘಾ (ಕಿರಣ್ ರಾಜ್) ಮತ್ತು ಮೇಘಾ (ಕಾಜಲ್ ಕುಂದರ್) ಕಾಲೇಜು ವಿದ್ಯಾರ್ಥಿಗಳು. ತಾವು ಪ್ರೀತಿಸಿದವರಿಂದ ವಂಚನೆಗೊಳಗಾಗಿರುತ್ತಾರೆ. ಹೀಗಾಗಿ ಇಬ್ಬರು ಮತ್ತೆ ಪ್ರೀತಿಯಲ್ಲಿ ಬೀಳಬಾರದು ಎಂದು ನಿರ್ಧರಿಸುತ್ತಾರೆ. ಅಂತಿಮವಾಗಿ ಅವರಿಬ್ಬರು ಭೇಟಿಯಾದಾಗ ಫ್ರೆಂಡ್ಸ್ ಆಗಿರುವ ನಿರ್ಧಾರಕ್ಕೆ ಬರುತ್ತಾರೆ. ಏಕೆಂದರೆ ಅಲ್ಲಿ ಯಾವುದೇ ಅವಲಂಬನೆ ಇರುವುದಿಲ್ಲ, ಯಾವುದೇ ಪ್ರಶ್ನೆಗಳಿಲ್ಲ, ಯಾವುದೇ ಬೇಡಿಕೆಗಳಿಲ್ಲ, ಯಾವುದೇ ವಾದಗಳಿಲ್ಲ ಮತ್ತು ದೂರುಗಳಿರುವುದಿಲ್ಲ. ಅವರ ಕಾಲಾನಂತರದಲ್ಲಿ ಅವರಿಬ್ಬರ ಸ್ನೇಹ ತುಂಬಾ ಬಲಗೊಳ್ಳುತ್ತದೆ, ಆದರೆ ಸ್ನೇಹದ ಒಪ್ಪಂದವು ಹಾಗೇ ಉಳಿಯುತ್ತದೆ. ಆದರೆ ಅವರ ಸುತ್ತಲಿರುವ ಜನರು ಈ ಇಬ್ಬರ ಸಂಬಂಧ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ, ಅವರು ಇಬ್ಬರ ಸಂಬಂಧ ಸ್ನೇಹಕ್ಕೆ ಮೀಸಲಾಗಿರುತ್ತಾರೆ. ಮೇಘಾ ಮಾಜಿ ಪ್ರೇಮಿ ಜೀವನದಲ್ಲಿ ಮತ್ತೆ ಕಾಣಿಸಿಕೊಂಡಾಗ, ಎಲ್ಲಾ ಲೆಕ್ಕಾಚಾರಗಳು ಬದಲಾಗುತ್ತವೆ. ಅವರು ಪರಸ್ಪರ ತಮ್ಮ ದಾರಿಯನ್ನು ಕಂಡುಕೊಳ್ಳಬಹುದೇ? ಎಂಬುದು ಚಿತ್ರದ ಕುತೂಹಲ.

ಸಿನಿಮಾದಲ್ಲಿ ಕಿರಣ್‌ ರಾಜ್‌ ಅವರು ಟೈಟಲ್‌ ರೋಲ್‌ ಅಂದರೆ ಮೇಘಾ ಪಾತ್ರವನ್ನ ನಿಭಾಯಿಸಿದ್ದಾರೆ. ರೌಡಿಗಳೊಂದಿಗೆ ಗೂಂಡಾಗಳ ಗುಂಪಿನೊಂದಿಗೆ ಹೋರಾಡುವುದರೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಆಗಷ್ಟೇ ಮೇಘಾ ತನ್ನ ಪ್ರೇಯಸಿಯಾಗಿದ್ದ ಹುಡುಗಿ ಪ್ರಿಯಾ (ಶ್ರೀವಿದ್ಯಾ)ಳೊಂದಿಗೆ ಬ್ರೇಕ್‌ಅಪ್‌ ಮಾಡಿಕೊಂಡಿರುತ್ತಾನೆ. ಆಕೆಯನ್ನ ಇನ್ನೆಂದೂ ನೋಡಲೇಬಾರದು ಎಂದು ಅಂದುಕೊಂಡಿರುತ್ತಾನೆ. ಆಂತರಿಕವಾಗಿ ತನ್ನ ಬ್ರೇಕ್‌ಅಪ್‌ ವಿಚಾರವಾಗಿ ತುಂಬ ಸಂಕಟ-ನೋವು ಪಡುತ್ತಿರುವ ಹೊತ್ತಲ್ಲೇ ಅವರ ಮೇಲೆ ಗೂಂಡಾಗಳು ಅಟ್ಯಾಕ್‌ ಮಾಡಿರುತ್ತಾರೆ. ಮೇಘಾ ಹೊಡೆದಾಡುತ್ತಾನೆ.

ಚರಣ್ ಎಚ್‌ಆರ್ ಚೊಚ್ಚಲ ನಿರ್ದೇಶನದ ಮೇಘ ಸಿನಿಮಾ ಕಥೆ ತಮ್ಮ ಸ್ನೇಹಿತರೊಬ್ಬರ ಜೀವನ ಆಧರಿಸಿದೆ ಎಂದು ಹೇಳಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಪ್ರೀತಿ ಮತ್ತು ಸ್ನೇಹದ ಭಾವನೆಗಳನ್ನು ದೊಡ್ಡ ಪರದೆಯ ಮೇಲೆ ತಂದಿದ್ದಾರೆ, ಚೊಚ್ಚಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದಾರೆ, ಆದರೆ ಮತ್ತಷ್ಟು ಹಾರ್ಡ್ ವರ್ಕ್ ಮಾಡುವ ಅವಶ್ಯಕತೆಯಿದೆ. ಎಂದಿನಂತೆ ಕಿರಣ್‌ ರಾಜ್‌ ಅಭಿನಯ ಚೆನ್ನಾಗಿದೆ. ಒಳ್ಳೊಳ್ಳೆ ಡೈಲಾಗ್‌ಗಳು ಇವೆ. ಅವರ ಡೈಲಾಗ್‌ ಡೆಲಿವರಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕಿ ಕಾಜಲ್‌ ಕೂಡ ತನ್ನ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಜೇಶ್‌ ನಟರಂಗ, ಶೋಭರಾಜ್‌ ಮತ್ತಿತರ ಕಲಾವಿದರ ನಟನೆ ಚಿತ್ರದ ಪ್ಲಸ್ ಪಾಯಿಂಟ್. ಸಿನಿಮಾದ ಸಂಗೀತ ಮೆಚ್ಚುವಂಥದ್ದು. ಕೆಲವೆಡೆ ಅನಾವಶ್ಯಕವಾಗಿ ಹಾಸ್ಯ ಸೇರಿಸಿದ್ದಾರೆ. ಸ್ನೇಹ, ಪ್ರೀತಿ ಮತ್ತು ಬಾಂಧವ್ಯದ ಸಂಕೀರ್ಣತೆಗಳನ್ನು ಸುಮಧುರ ಹಾಡುಗಳ ಮೂಲಕ ಚೆನ್ನಾಗಿ ವ್ಯಕ್ತಪಡಿಸಲಾಗಿದೆ, ಜೋಯಲ್ ಸಕ್ಕರಿ ಸರಳ ಮತ್ತು ಅರ್ಥಪೂರ್ಣ ಸಾಹಿತ್ಯ ಸಂಯೋಜಿಸಿದ್ದಾರೆ. ಛಾಯಾಗ್ರಾಹಕ ಗೌತಮ್ ನಾಯಕ್ ಮೈಸೂರಿನ ಸೌಂದರ್ಯ ಮತ್ತು ಚಿಕ್ಕಮಗಳೂರಿನ ಭೂದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಪ್ರೀತಿ, ನಷ್ಟ ಮತ್ತು ಹೆಚ್ಚಿನ ಜನರು ಜೀವನದಲ್ಲಿ ಅನುಭವಿಸುವ ಭಾವನೆಗಳ ಬಗೆಗಿನ ಕಥೆಯಾಗಿದೆ, ಚಿತ್ರದಲ್ಲಿ ಯಾವುದೇ ಸಂಬಂಧಗಳ ಸಮಸ್ಯೆಗೆ ಸುಲಭವಾದ ಉತ್ತರ ಸಿಗುವುಗಿಲ್ಲ. ಮೇಘ ಸಿನಿಮಾದಲ್ಲಿ ಪ್ರೀತಿ ಮತ್ತು ಸಂಬಂಧಗಳಲ್ಲಿ ಸಂವಹನದ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಮನುಷ್ಯನಾಗುವುದಕ್ಕೆ ಯಾವ್ಯಾವ ಗುಣಗಳು ಬೇಕು ಎಂಬದನ್ನು ವಿವರಿಸುತ್ತದೆ. ಒಟ್ಟಾರೆ ಮೇಘ ಸಿನಿಮಾ ಯುವ ಮನಸ್ಸುಗಳ ನಡುವೆ ನಡೆಯುವ ಸಂಘರ್ಷಕ್ಕೆ ಹಿಡಿದ ಕನ್ನಡಿಯಾಗಿದೆ.

X

Advertisement

X
Kannada Prabha
www.kannadaprabha.com