ನಾನಿನ್ನೂ ಸತ್ತಿಲ್ಲ, ನೀವೆಲ್ಲಾ ಹೇಳುವಷ್ಟು ಮುದುಕಿಯೂ ಆಗಿಲ್ಲ:  ವದಂತಿಗಳಿಗೆ ಬಾಲಿವುಡ್ ನಟಿ ಮುಮ್ತಾಜ್ ತಿರುಗೇಟು

ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ್ ಸಾವಿನ ಕುರಿತಾಗಿ ಹರಡಿದ್ದ ವದಂತಿಗಳಿಗೆ ಈಗ ಸ್ವತಃ ಮುಮ್ತಾಜ್ ಅವರೇ ವೀಡಿಯೋವೊಂದರಲ್ಲಿ ಕಾಣಸಿಕೊಂಡು ತಾವು ಸತ್ತಿಲ್ಲ, ಇನ್ನು ಜೀವಂತವಾಗಿರುವುದಾಗಿ ಹೇಳಿದ್ದಾರೆ.

published : 24 May 2020

ಕ್ಯಾನ್ಸರ್ ನಿಂದ 26ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಬಾಲಿವುಡ್ ಪ್ರತಿಭಾನ್ವಿತ ನಟ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ಕಾಮಿಡಿ ನಟ ಮೋಹಿತ್ ಬಘೇಲ್ ತಮ್ಮ 26ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ, ಮಥುರಾದಲ್ಲಿ ಶನಿವಾರ ನಿಧನರಾಗಿದ್ದಾರೆ.

published : 24 May 2020

ರಣವಿಕ್ರಮ ಬೆಡಗಿ ಅದಾ ಶರ್ಮಾ ಓಪನ್ ಚಾಲೆಂಜ್, ಫೋಟೋ ನೋಡಿ ದಂಗಾದ ಅಭಿಮಾನಿಗಳು!

ರಣವಿಕ್ರಮ ಬೆಡಗಿ ಅದಾ ಶರ್ಮಾ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ್ದಾರೆ. ಆದರೆ ಅದಾ ಶರ್ಮಾರ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. 

published : 22 May 2020

ಬೋನಿ ಕಪೂರ್ ಮನೆಗೆಲಸದ ವ್ಯಕ್ತಿಗೆ ಕೊರೋನಾ ಪಾಸಿಟಿವ್, ತಂದೆ ಸಂದೇಶ ಹಂಚಿಕೊಂಡ ಜಾನ್ವಿ

ಮಹಾಮಾರಿ ಕೊರೋನಾ ವೈರಸ್ ಮುಂಬೈನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಈಗ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕುಟುಂಬಕ್ಕೂ ಕೊರೋನಾ ಕಂಟಕ ಎದುರಾಗಿದೆ.

published : 20 May 2020

ಹುಟ್ಟುಹಬ್ಬದಂದೇ ನವಾಜುದ್ದೀನ್ ಸಿದ್ಧಿಕಿಗೆ ಶಾಕ್: ಡೈವೋರ್ಸ್ ನೊಟೀಸ್ ಕಳುಹಿಸಿದ ಪತ್ನಿ

ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

published : 19 May 2020

ವೈದ್ಯಕೀಯ ಕಾರಣಕ್ಕೆ ತಾಯಿಯೊಂದಿಗೆ ಉತ್ತರ ಪ್ರದೇಶಕ್ಕೆ ಪ್ರಯಾಣ: ನಟ ನವಾಜುದ್ದೀನ್ ಸಿದ್ದಿಕಿ ಸ್ಪಷ್ಟನೆ

ನಟ  ನವಾಜುದ್ದೀನ್ ಸಿದ್ದಿಕಿ ಸೋಮವಾರ ತಮ್ಮ ಕುಟುಂಬದೊಡನೆ ತಮ್ಮ ಸ್ವಂತ ಊರಾದ ಉತ್ತರ ಪ್ರದೇಶದ ಬುಧಾನಾಗೆ ಪ್ರಯಾಣಿಸಿದ್ದು ಲಾಕ್ ಡೌನ್ ನಡುವೆಯೇ ಅಂತರ್ ರಾಜ್ಯ ಪ್ರಯಾಣ ಮಾಡಿದುದಕ್ಕಾಗಿ ವಿವಾದಕ್ಕೆ ಈಡಾಗಿದ್ದಾರೆ. ಆದರೆ ಇದಕ್ಕೀಗ ಸ್ಪಷ್ಟನೆ ನೀಡಿರುವ ನಟ ಸಿದ್ದಿಕಿ ತನ್ನ ತಾಯಿಗೆ ಅನಾರೋಗ್ಯವಿದ್ದ ಕಾರಣ ಪ್ರಯಾಣ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೆ  ರಾಜ್ಯ ಸರ್ಕಾರ

published : 18 May 2020

ಬಾಲಿವುಡ್ ನಟ ಸತ್ಯಜೀತ್ ದುಬೆ ತಾಯಿಗೆ ಕೋವಿಡ್-19 ಪಾಸಿಟಿವ್

ಪ್ರಸ್ಥಾನಂ ಚಿತ್ರದಲ್ಲಿ ಸಂಜಯ್ ದತ್, ಅಲಿ ಫಜಲ್ ಮತ್ತು ಮೊನಿಷಾ ಕೊಯಿರಾಲಾ ಅವರೊಂದಿಗೆ ಅಭಿನಯಿಸಿದ್ದ ಬಾಲಿವುಡ್ ನಟ ಸತ್ಯಜೀತ್ ದುಬೆ ಅವರ ತಾಯಿಗೆ ಕೋವಿಡ್- ಸೋಂಕು ತಗುಲಿರುವುದು ದೃಢಪಟ್ಟಿದೆ.  

published : 18 May 2020

ಒಟಿಟಿ ವೇದಿಕೆಯಲ್ಲಿ ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಚಿತ್ರ ಬಿಡುಗಡೆ

ಬಾಲಿವುಡ್‌ನಲ್ಲಿ ಗಂಭೀರ ನಟನೆಗಾಗಿ ಹೆಸರುವಾಸಿ ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

published : 15 May 2020

ಅಗಲಿದ ಬಾಲಿವುಡ್ ಹೀರೋಗೆ ಗೌರವ: ಗ್ರಾಮವೊಂದಕ್ಕೆ ನಟ ಇರ್ಫಾನ್ ಖಾನ್ ಹೆಸರಿಟ್ಟ ಗ್ರಾಮಸ್ಥರು

ಇತ್ತೀಚಿಎಗೆ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅಗಲಿಕೆಯಿಂದ ಬಾಲಿವುಡ್ ಚಿತ್ರರಂಗ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿತ್ತು. ಆದರೆ ಇರ್ಫಾನ್ ಖಾನ್ ಮೃತಪಟ್ಟಿದ್ದರೂ ಅವರ ಕೆಲಸಗಳನ್ನು ಮರೆಯಲಾಗುವುದಿಲ್ಲ.

published : 15 May 2020

ಕೆಬಿಸಿ-12: ಆನ್ ಲೈನ್ ಮೂಲಕ ಒಂದೇ ದಿನ 2.5 ಮಿಲಿಯನ್ ಜನರಿಂದ ನೋಂದಣಿ

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ ಪತಿ'(ಕೆಬಿಸಿ)ಗೆ ಬುಧವಾರ ಆನ್ ಲೈನ್ ನೋಂದಣಿ ಆರಂಭಗೊಂಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 2.5 ಮಿಲಿಯನ್ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. 

published : 14 May 2020

ಅಮಿತಾಬ್ ಬಚ್ಚನ್ ಅಭಿನಯದ 'ಗುಲಾಬೋ ಸಿತಾಬೋ' ಅಮೆಜಾನ್ ಪ್ರೈಮ್‌ನಲ್ಲಿ ಜೂನ್ 12ಕ್ಕೆ ಬಿಡುಗಡೆ!

ಕೊರೋನಾ ಮಹಾಮಾರಿ ಭಾರತೀಯ ಚಿತ್ರರಂಗವನ್ನು ಅದೋಗತಿಗೆ ತಂದಿಟ್ಟಿದೆ. ಹೌದು ಕಳೆದ ಎರಡು ತಿಂಗಳಿನಿಂದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಜೊತೆಗೆ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಇದರ ಮಧ್ಯೆ ಅದಾಗಲೇ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡೆಯಾಗಿವೆ. 

published : 14 May 2020

ಸಲ್ಮಾನ್ ಖಾನ್ ಹಾಡಿರುವ 'ತೆರೆ ಬೀನಾ' ವಿಡಿಯೋ ಸಾಂಗ್ ಬಿಡುಗಡೆ: ಜಾಕ್ವೆಲಿನ್ ಜೊತೆ ಮಸ್ತ್ ರೋಮ್ಯಾನ್ಸ್!

ಲಾಕ್ ಡೌನ್ ಸಮಯದಲ್ಲಿ ಕಿರು ವಿಡಿಯೋ ಕ್ಲಿಪ್ ಗಳ ಮೂಲಕ ಪ್ರೇಕ್ಷಕರನ್ನು ಕಿಚಾಯಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್  ಅವರ 'ತೆರೆ ಬೀನಾ' ರೋಮ್ಯಾಂಟಿಕ್ ವಿಡಿಯೋ ಟ್ರಾಕ್ ಇಂದು ಬಿಡುಗಡೆಯಾಗಿದೆ.

published : 12 May 2020

350 ವಲಸೆ ಕಾರ್ಮಿಕರನ್ನು ಬಸ್ ಗಳಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಳುಹಿಸಿದ ಬಾಲಿವುಡ್ ನಟ ಸೋನು ಸೂದ್!

ಕುರುಕ್ಷೇತ್ರ, ವಿಷ್ಣುವರ್ಧನ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ  ಕನ್ನಡಿಗರ ಮನಸ್ಸು ಕದ್ದಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ಮುಂಬೈನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಕರುನಾಡಿನ ವಲಸೆ ಕಾರ್ಮಿಕರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

published : 12 May 2020

ಲಾಕ್ ಡೌನ್ ನಿಯಮ ಮುರಿದ ಹಿನ್ನಲೆ: ಪೂನಂ ಪಾಂಡೆ ವಿರುದ್ಧ ಪ್ರಕರಣ ದಾಖಲು

ಲಾಕ್ ಡೌನ್ ನಿಯಮ ಮುರಿದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ.

published : 11 May 2020

'ಸಬ್ ಠೀಕ್ ಹೋ ಜಾಯೇಗಾ': ಕ್ವಾರಂಟೈನ್ ಹಾಡು ಹಾಡಿದ ಶಾರೂಖ್ ಖಾನ್!

ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. 

published : 04 May 2020

ಈ ಬಾರಿ ಕೌನ್ ಬನೇಗಾ ಕರೋಡ್ ಪತಿ ಆಯ್ಕೆ, ಸ್ಕ್ರೀನಿಂಗ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ

ಹಿಂದಿಯ ಜನಪ್ರಿಯ ಗೇಮ್ ಶೋ ಕೌನ್ ಬನೇಗ ಕರೋಡ್ ಪತಿಯ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ವಾಹಿನಿ ಸಂಪೂರ್ಣವಾಗಿ ಡಿಜಿಟಲೀಕರಣ ಮೂಲಕ ನಡೆಸಲಿದೆ.

published : 04 May 2020

ಗೋಧಿಹಿಟ್ಟಿನ ಚೀಲದಲ್ಲಿ ಹಣ ಹಂಚಿದ್ದು ನಾನಲ್ಲ: ನಟ ಅಮೀರ್ ಖಾನ್ ಸ್ಪಷ್ಟನೆ

ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯ ನಿರ್ಗತಿಕರಿಗೆ ದೇಣಿಗೆಯಾಗಿ ಹಣವನ್ನು ಗೋಧಿಹಿಟ್ಟಿನ ಚೀಲಗಳಲ್ಲಿಟ್ಟು ಹಂಚಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದು ಇದಕ್ಕೀಗ ನಟ ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.ಗೋಧಿಹಿಟ್ಟು ಚೀಲಗಳಲ್ಲಿ ನಾನು ಹಣವನ್ನು ಹಂಚಿಲ್ಲ ಎಂದು ವದಂತಿಯನ್ನು ತಳ್ಳಿಹಾಕಿದ್ದಾರೆ. 

published : 04 May 2020

ಕುಟುಂಬಸ್ಥರಿಂದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಸ್ಥಿ ವಿಸರ್ಜನೆ

ಮೊನ್ನೆಯಷ್ಟೇ ನಿಧನರಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನೆರವೇರಿದ್ದು, ಕುಟುಂಬಸ್ಥರು ಭಾಗಿಯಾಗಿದ್ದರು.
 

published : 04 May 2020

''ನಮ್ಮ ಕಥೆಯ ಅಂತ್ಯ'' ರಿಷಿ ಕಪೂರ್ ಗೆ ಭಾವನಾತ್ಮಕ ವಿದಾಯ ನುಡಿ ಬರೆದ ಪತ್ನಿ ನೀತು ಸಿಂಗ್ ಕಪೂರ್

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

published : 03 May 2020

ಸುಳ್ಳು ಸುದ್ದಿ ನಂಬಬೇಡಿ, ಕೊರೋನಾ ಅಲ್ಲ, ನನಗೆ ಬಂದಿರುವುದು ಮಲೇರಿಯಾ: ನಟಿ ಪಾಯಲ್ ಘೋಷ್

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಪಾಯಲ್ ಘೋಷ್ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಇದನ್ನು ನೋಡಿದವರು ಪಾಯಲ್‌ಗೆ ಕೊರೊನಾ ಸೋಂಕು ಬಂದಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ.

published : 03 May 2020

ಕಳೆದುಕೊಂಡಿಲ್ಲ, ಗಳಿಸಿಕೊಂಡಿದ್ದೇನೆ: ಇರ್ಫಾನ್ ಖಾನ್ ಬಗ್ಗೆ ಪತ್ನಿ ಸುತಾಪ ಸಿಕ್ದಾರ್

ಬಾಲಿವುಡ್ ನ ಕ್ರಿಯಾಶೀಲ ನಟ ಇರ್ಫಾನ್ ಖಾನ್ ತೀರಿಕೊಂಡ ನಂತರ ಅವರ ಪತ್ನಿ ಸುತಾಪ ಸಿಕ್ದರ್ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

published : 01 May 2020

ರಿಷಿ ಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮವಾದ ಪತಿಯಾಗಿದ್ದರು: ನೀತುಸಿಂಗ್

ರಿಷಿಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮ ಪತಿಯಾಗಿದ್ದರು, ಅವರೊಬ್ಬ ಅತ್ಯುತ್ತಮ ಸಂಗಾತಿಯಾಗಿದ್ದರು ಎಂದು ದಶಕಗಳ ಕಾಲ ಅವರೊಂದಿಗೆ ಸಂಸಾರ ನಡೆಸಿದ ಪತ್ನಿ ನೀತು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

published : 01 May 2020

ರಿಷಿ ಕಪೂರ್ ನಿಧನ ಬಳಿಕ ವೈರಲ್ ಆದ ವಿಡಿಯೊ, ಯಾವುದದು, ಯುವಕ ಯಾರು?

ಬಾಲಿವುಡ್ ದಂತಕಥೆ ರಿಷಿ ಕಪೂರ್ ಮರಣ ಹೊಂದಿದ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೊ ಭಾರೀ ವೈರಲ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರಿಷಿ ಕಪೂರ್ ಅವರ ನಟನೆಯ 'ದೀವಾನ' ಚಿತ್ರದ ಹಾಡನ್ನು ಯುವಕನೊಬ್ಬ ಹಾಡುತ್ತಿದ್ದಾರೆ. ಅದನ್ನು ಆಲಿಸಿ ಭಾವಪರವಶರಾಗಿ ರಿಷಿ ಕಪೂರ್ ಯುವಕನಿಗೆ ಹರಸುತ್ತಾರೆ.

published : 01 May 2020

ಮುಂಬೈ: ಚಂದನ್ ವಾಡಿ ಸ್ಮಶಾನದಲ್ಲಿ ರಿಷಿ ಕಪೂರ್ ಅಂತ್ಯಕ್ರಿಯೆ; ಕುಟುಂಬಸ್ಥರು, ಸ್ನೇಹಿತರಿಂದ ಮೌನ ವಿದಾಯ

 ಲಾಕ್ ಡೌನ್ ಮಧ್ಯೆ ಬಾಲಿವುಡ್ ನಟ ರಿಷಿ ಕಪೂರ್ ಅಂತ್ಯಕ್ರಿಯೆ ದಕ್ಷಿಣ  ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ನಡೆಯಿತು.  ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

published : 30 Apr 2020