Priyanka Chopra with brother and mother
ಪ್ರಿಯಾಂಕಾ ಚೋಪ್ರಾ ತನ್ನ ಸೋದರ ಮತ್ತು ತಾಯಿ ಜೊತೆ

Priyanka Chopra: ಪ್ರಿಯಾಂಕಾ ಚೋಪ್ರಾ ಯಶಸ್ಸು ಸೋದರ ಸಿದ್ಧಾರ್ಥ್ ಬದುಕಿಗೆ ಮುಳುವಾಯಿತೇ: ತಾಯಿ ಮಧು ಚೋಪ್ರಾ ಹೀಗಂದಿದ್ದು ಏಕೆ?

ತಮ್ಮ ಹಳೆಯ ದಿನಗಳನ್ನು ಹಿಂತಿರುಗಿ ನೋಡುತ್ತಾ, ಮಧು ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಹೇಗೆ ಸಾಧಿಸಿದರು ಎಂಬುದನ್ನು ಹಂಚಿಕೊಂಡರು. ಪ್ರಿಯಾಂಕಾ ಅವರ ಸಹೋದರ ಸಿದ್ಧಾರ್ಥ ಒಂಟಿಯಾಗಿಯೇ ಸ್ವಂತ ಬಲದ ಮೇಲೆ ಬೆಳೆದರು ಎಂದು ಹೇಳಿಕೊಂಡಿದ್ದಾರೆ.
Published on

ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಅವರು ತಮ್ಮ ಮಕ್ಕಳ ಬಾಲ್ಯದ ವಿವರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.ತಮ್ಮ ಮಗಳ ಯಶಸ್ಸಿನ ಹಾದಿಯಲ್ಲಿ ಮಗನ ಜೀವನಕ್ಕೆ ಹಾನಿಯುಂಟಾಯಿತು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಹಳೆಯ ದಿನಗಳನ್ನು ಹಿಂತಿರುಗಿ ನೋಡುತ್ತಾ, ಮಧು ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಹೇಗೆ ಸಾಧಿಸಿದರು ಎಂಬುದನ್ನು ಹಂಚಿಕೊಂಡರು. ಪ್ರಿಯಾಂಕಾ ಅವರ ಸಹೋದರ ಸಿದ್ಧಾರ್ಥ ಒಂಟಿಯಾಗಿಯೇ ಸ್ವಂತ ಬಲದ ಮೇಲೆ ಬೆಳೆದರು ಎಂದು ಹೇಳಿಕೊಂಡಿದ್ದಾರೆ.

ನನ್ನ ಪತಿ ಡಾ ಅಶೋಕ್ ಚೋಪ್ರಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದರು. ನಾನು ಪ್ರಿಯಾಂಕಾ ಜೊತೆಗೆ ಬಹುತೇಕ ಸಮಯಗಳನ್ನು ಕಳೆಯುತ್ತಿದ್ದೆ. ಹೀಗಾಗಿ ಮಗ ಸಿದ್ಧಾರ್ಥ ಒಬ್ಬಂಟಿಯಾಗಿಯೇ ಬೆಳೆದುಬಿಟ್ಟ. ಮಗಳ ಭವಿಷ್ಯ ರೂಪಿಸುವುದರಲ್ಲಿ ಮಗ ಸಿದ್ಧಾರ್ಥನ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲೇ ಇಲ್ಲ ಎಂದು ಮಧು ಚೋಪ್ರಾ ಸಮ್‌ಥಿಂಗ್ ಬಿಗ್ಗರ್ ಕಾರ್ಯಕ್ರಮದಲ್ಲಿ ನೋವು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸೋದರ ಸಿದ್ಧಾರ್ಥ್ 2024ರಲ್ಲಿ ವಿವಾಹವಾದರು. ಅವರ ಬಗ್ಗೆ ಮಾತನಾಡಿರುವ ತಾಯಿ ಮಧು ಚೋಪ್ರಾ, ಅವನು ಪ್ರತಿದಿನ ಕಷ್ಟಪಡುವುದನ್ನು ನಾನು ನೋಡುತ್ತೇನೆ, ನನಗೆ ಇಬ್ಬರು ಒಳ್ಳೆಯ ಮಕ್ಕಳಿದ್ದಾರೆ, ಅವರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನನ್ನನ್ನು ನೋಡಿಕೊಳ್ಳುತ್ತಾರೆ ಎಂದರು.

ಪ್ರಿಯಾಂಕಾ ಚೋಪ್ರಾ ಅವರ ತಂದೆ ಅಶೋಕ್ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ಇಬ್ಬರೂ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಿಯಾಂಕಾ ಮತ್ತು ಅವರ ಸಹೋದರ ಹೇಗೆ ಭಿನ್ನರು ಎಂಬುದರ ಕುರಿತು ಮಾತನಾಡಿರುವ ಮಧು ಚೋಪ್ರಾ, ನನ್ನನ್ನು ನೋಡಿ ಮಗಳು ಪ್ರಿಯಾಂಕಾ ಕೆಲಸದ ನೀತಿಯನ್ನು ಅಳವಡಿಸಿಕೊಂಡಿದ್ದಾಳೆ. ನಾನು ಬೇಗನೆ ಎದ್ದೇಳುವವಳು. ನಾನು ಬೆಳಗ್ಗೆ 5:30 ಕ್ಕೆ ನನ್ನ ದಿನವನ್ನು ಪ್ರಾರಂಭಿಸುತ್ತೇನೆ. ನನ್ನ ಮಗ ಅಷ್ಟು ಬೇಗನೆ ಎದ್ದೇಳುವವನಲ್ಲ, ಅವನು ಬೆಳಗ್ಗೆ 8:30 ಕ್ಕೆ ಎದ್ದೇಳುತ್ತಾನೆ. ಪ್ರಿಯಾಂಕಾ, ಅವಳು ಮಾಡುತ್ತಿರುವ ಕೆಲಸವನ್ನು ಅವಲಂಬಿಸಿ, ಅಗತ್ಯವಿದ್ದರೆ ನಸುಕಿನ ಜಾವ 4 ಗಂಟೆಗೆ ಏಳುತ್ತಾಳೆ ಎಂದರು.

ಇದಕ್ಕೂ ಮೊದಲು, ಡಾ. ಸ್ತುತಿ ಖರೆ ಶುಕ್ಲಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ, ಪ್ರಿಯಾಂಕಾ ಅವರ ವೃತ್ತಿಜೀವನ, ತಮ್ಮ ವೈದ್ಯಕೀಯ ಅಭ್ಯಾಸ ಮತ್ತು ಇತರ ಮನೆಯ ಕರ್ತವ್ಯಗಳನ್ನು ಅವರು ಹೇಗೆ ನಿರ್ವಹಿಸುತ್ತಿದ್ದರು ಎಂಬುದರ ಕುರಿತು ಮಧು ಮಾತನಾಡಿದ್ದರು, ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಯಾವಾಗಲೂ ಪ್ರಯತ್ನಿಸುತ್ತಿದ್ದರು ಎಂಬುದನ್ನು ಹಂಚಿಕೊಂಡಿದ್ದರು.

ನಾನು ಮಕ್ಕಳೊಂದಿಗೆ ಇದ್ದಾಗ, ಶೇಕಡಾ 100 ಭಾಗ ಅವರಿಗೆ ಸಮಯ ನೀಡುತ್ತಿದ್ದೆ. ಮಕ್ಕಳು ಚಿಕ್ಕವರಾಗಿದ್ದಾಗಿನ ಸಮಯ ನಿಜಕ್ಕೂ ಚೆನ್ನಾಗಿತ್ತು. ನೀವು ಏನನ್ನಾದರೂ ಸಾಧಿಸಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ನಿಮಗಾಗಿ, ನಿಮ್ಮ ಕುಟುಂಬಕ್ಕೆ ಮತ್ತು ನಿಮ್ಮ ಜೀವನಕ್ಕೆ ಸಮಯವನ್ನು ನೀಡಬೇಕು ಎಂಬ ಕೆಲಸದ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com