

ಮುಂಬೈ: ಅಂತಾರಾಷ್ಟ್ರೀಯ ಟಿ20 ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಖುಷಿ ಮುಖರ್ಜಿಗೆ ಬಿಗ್ ಶಾಕ್ ಎದುರಾಗಿದ್ದು, ಆಕೆಯ ವಿರುದ್ಧ ಇದೀಗ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಹೌದು.. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬೆಂಗಾಳಿ ನಟಿ, ಮಾಡೆಲ್ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಾಗಿದೆ.
ಈ ಹಿಂದೆ ಖುಷಿ ಮುಖರ್ಜಿ ನನ್ನ ಹಿಂದೆ ಹಲವಾರು ಕ್ರಿಕೆಟರ್‌ಗಳು ಬಿದ್ದಿದ್ದರು. ಇದರಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಅವರು ನನ್ನ ಜೊತೆ ಸಾಕಷ್ಟು ಮೆಸೇಜ್ ಮಾಡಿದ್ದರು ಎಂದು ಗಂಭೀರ ಹೇಳಿಕೆ ನೀಡಿದ್ದರು. ಈ ಗಂಭೀರ ಆರೋಪದ ವಿರುದ್ಧ ಸಿಡಿದೆದ್ದಿರುವ ಸೂರ್ಯಕುಮಾರ್ ಅವರ ಮುಂಬೈ ಮೂಲದ ಅಭಿಮಾನಿ, ಸೋಷಿಯಲ್ ಮೀಡಿಯಾ ಇನ್ಫ್ಲೂನ್ಸರ್ ಫೈಜಾನ್ ಅನ್ಸಾರಿ, ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದೆಮೆ ಕೇಸ್ ಹಾಕಿದ್ದಾರೆ.
ಸೂರ್ಯಕುಮಾರ್ ಅವರ ಅಭಿಮಾನಿ ಮುಂಬೈನಿಂದ ಪ್ರಯಾಣ ಮಾಡಿ ಉತ್ತರ ಪ್ರದೇಶದ ಘಾಜಿಪುರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಖುಷಿ ಮುಖರ್ಜಿ ಮಾಡಿರುವ ಆರೋಪಗಳು ಸುಳ್ಳು ಮತ್ತು ಕೇವಲ ಪ್ರಚಾರಕ್ಕಾಗಿ ಸ್ಟಾರ್ ಆಟಗಾರ್ತಿಯ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಈ ಮಟ್ಟಿಗೆ ಅವರ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಘಾಜಿಪುರ ಎಸ್ಪಿ ಡಾ. ಇರಾಜ್ ರಾಜಾ ಅವರನ್ನು ಭೇಟಿ ಮಾಡುವ ಮೂಲಕ ಮಾಡೆಲ್ ಅವರನ್ನು ತಕ್ಷಣ ಬಂಧಿಸಬೇಕೆಂದು. ಅವರ ಆರೋಪದ ಮೇಲೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಅವರು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ, "ಖುಷಿ ಮುಖರ್ಜಿ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ನಾವು ಬಯಸುತ್ತೇವೆ. ನನ್ನ ಲಿಖಿತ ದೂರಿನಲ್ಲಿಯೂ ನಾನು ಇದನ್ನು ಉಲ್ಲೇಖಿಸಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದೇನೆ. ಕನಿಷ್ಠ ಪಕ್ಷ, ಗಂಭೀರ ಆರೋಪಗಳನ್ನು ಅನ್ವಯಿಸಬೇಕು. ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರು ನನ್ನನ್ನು ಅನುಸರಿಸುತ್ತಾರೆ ಮತ್ತು ಕೋಟ್ಯಂತರ ಜನರು ನನ್ನ ವೀಡಿಯೊಗಳನ್ನು ವೀಕ್ಷಿಸುತ್ತಾರೆ.
ಈ ವಿಷಯವನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯುವುದು ನನ್ನ ಜವಾಬ್ದಾರಿ. ನಾನು ಯಾರಿಗೂ ಹೆದರುವುದಿಲ್ಲ. ನನಗೆ ನ್ಯಾಯ ಮಾತ್ರ ಬೇಕು. "ಖುಷಿ ಮುಖರ್ಜಿ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನನಗೆ ನ್ಯಾಯ ಸಿಗುವವರೆಗೆ, ನಾನು ಘಾಜಿಪುರ ನಗರದಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಏನು ಹೇಳಿದ್ದರು?
ಯಾವುದೇ ಕ್ರಿಕೆಟ್‌ರ್ ಜೊತೆಗೆ ಡೇಟ್ ಮಾಡಲು ಇಷ್ಟವಿಲ್ಲ. ನನ್ನ ಹಿಂದೆ ಹಲವಾರು ಕ್ರಿಕೆಟರ್‌ಗಳು ಬಿದ್ದಿದ್ದರು. ಇದರಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಅವರು ನನ್ನ ಜೊತೆ ಸಾಕಷ್ಟು ಮೆಸೇಜ್ ಮಾಡಿದ್ದರು. ಆದ್ರೆ ಮಾತುಕತೆ ಮಾಡಿಲ್ಲ ಎಂದು ಸ್ಫೋಟಕ ಆರೋಪ ಮಾಡಿದ್ದರು.
ಈ ಹಿಂದೆ ಇನ್‌ಸ್ಟಾಗ್ರಾಮ್ ಅನ್ನು ಹ್ಯಾಕ್ ಮಾಡಿದ್ದರು. ಮೊದಲು ಸೂರ್ಯಕುಮಾರ್ ಜೊತೆಗಿನ ಸಂದೇಶಗಳು ಫ್ರೆಂಡ್‌ಶಿಪ್ ಆಗಿತ್ತು. ಆದರೆ ಈಗ ಇಬ್ಬರ ನಡುವೆ ಯಾವುದೇ ಸಂಪರ್ಕವಿಲ್ಲ. ಇದು ವಿವಾದ ಆದ ಮೇಲೆ ಇಬ್ಬರು ಚರ್ಚೆ ಮಾಡಿಲ್ಲ ಎಂದು ಖುಷಿ ಮುಖರ್ಜಿ ಹೇಳಿದ್ದರು.
ಅಂದಹಾಗೆ ಖುಷಿ ಮುಖರ್ಜಿ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರದಲ್ಲಿ 1996ರ ನವೆಂಬರ್ 24 ರಂದು ಜನಿಸಿದ್ದರು. ಇವರು ಮೂತ್ರ ವಿಸರ್ಜನಾ ವರ್ಜಿನ್ ಹೈ, ಹಾರ್ಟ್ ಅಟ್ಯಾಕ್, ಅಂಜಲ್ ಥುರೈ ಮೂವಿಗಳಲ್ಲಿ ಅಭಿನಯ ಮಾಡಿದ್ದಾರೆ.
Advertisement