

ಮುಂಬೈ: ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ವೇದಿಕೆ ಮೇಲಿಂದಲೇ ನಟಿ ಮಧ್ಯದ ಬೆರಳು ತೋರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಾದ ತಮ್ಮ ಕಹಿ ಅನುಭವವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸೆಲೆಬ್ರಿಟಿಯಾಗಿ ಅಲ್ಲ, ಮಹಿಳೆಯಾಗಿ ತಾವು ಎದುರಿಸಿದ ಅವಮಾನ ನನಗೆ ಬಹಳಷ್ಟು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಕಾರ್ಯಕ್ರಮದ ವಿಡಿಯೋ ತುಣುಕುಗಳು ವ್ಯಾಪಕ ವೈರಲ್ ಆಗುತ್ತಿದೆ.
ಸೊಂಟಕ್ಕೆ ಕೈಹಾಕಿದ ದುರುಳರು
ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಅತಿಥಿಗಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೌನಿ ರಾಯ್ ಹೇಳಿದ್ದಾರೆ. ವೇದಿಕೆಯ ಮೇಲೆ ಹೋಗುತ್ತಿದ್ದಾಗ, ಇಬ್ಬರು ಪುರುಷರು ಛಾಯಾಚಿತ್ರ ತೆಗೆಯುವ ನೆಪದಲ್ಲಿ ತನ್ನ ಸೊಂಟದ ಮೇಲೆ ಕೈ ಹಾಕಿದರು.
ಈ ವೇಳೆ ಮೌನಿ ನಯವಾಗಿ, "ಸರ್, ದಯವಿಟ್ಟು ನಿಮ್ಮ ಕೈಗಳನ್ನು ತೆಗೆಯಿರಿ ಎಂದು ಹೇಳಿದರು. ಆದರೆ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಇದು ತನ್ನನ್ನು ತುಂಬಾ ಅಸಹ್ಯಪಡಿಸಿತು ಎಂದು ಕೆಜಿಎಫ್ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ಲೀಲ ಸನ್ಹೆ
ಘಟನೆ ಅಲ್ಲಿಗೆ ನಿಲ್ಲಲಿಲ್ಲ ಆ ಇಬ್ಬರು ಪುರುಷರು ನಟಿ ವೇದಿಕೆಯಲ್ಲಿದ್ದಾಗಲೂ ಅಶ್ಲೀಲ ಸನ್ನೆಗಳನ್ನು ಮಾಡಿದರು ಮತ್ತು ಕಿರುಕುಳ ನೀಡಿದರು. ತಮ್ಮ ಮೊಬೈಲ್ ಗಳಲ್ಲಿ ವೀಡಿಯೊಗಳನ್ನು ತೆಗೆದುಕೊಳ್ಳುವ ಮೂಲಕ ಅವರು ತನಗೆ ಇನ್ನಷ್ಟು ಮುಜುಗರ ಉಂಟು ಮಾಡಿದರು. ಹೀಗಾಗಿ ಕಾರ್ಯಕ್ರಮವನ್ನು ಯೋಜಿಸಿದ್ದಕ್ಕಿಂತ ಮೊದಲೇ ಕೊನೆಗೊಳಿಸಬೇಕಾಯಿತು ಎಂದು ಮೌನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯದ ಬೆರಳು ತೋರಿಸಿದ ನಟಿ
ಈ ಘಟನೆ ತನಗೆ ತೀವ್ರ ನೋವುಂಟು ಮಾಡಿತ್ತು. ಅವಮಾನವನ್ನುಂಟು ಮಾಡಿದೆ ಎಂದು ಮೌನಿ ರಾಯ್ ಬೇಸರ ವ್ಯಕ್ತಪಡಿಸಿ ವೇದಿಕೆಯಿಂದ ಇಳಿಯುವಾಗ ತಮಗೆ ಅಶ್ಲೀಲ ಸನ್ಹೆ ಮಾಡಿದವರಿಗೆ ಮಧ್ಯದ ಬೆರಳು ತೋರಿ ಆಕ್ರೋಶಭರಿತವಾಗಿ ವೇದಿಕೆಯಿಂದ ಕೆಳಗಿಳಿದರು.
ಹೊಸದಾಗಿ ಬರುವ ಯುವತಿಯರ ಕಥೆ ಏನು?
"ನನ್ನಂತಹ ಸ್ಥಾಪಿತ ನಟಿಗೆ ಈ ರೀತಿ ಕಿರುಕುಳ ನೀಡಿದರೆ, ಉದ್ಯಮಕ್ಕೆ ಹೊಸದಾಗಿ ಬರುವ ಹುಡುಗಿಯರ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ ಎಂದು ಮೌನಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.
ಮೌನಿ ಬೇಸರ
ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಲಾವಿದರು. ನಾವು ಇತರ ಜನರ ಆಚರಣೆಗಳಲ್ಲಿ ಭಾಗವಹಿಸುವ ಮೂಲಕ ಸಂತೋಷವನ್ನು ಹಂಚಿಕೊಳ್ಳುತ್ತೇವೆ. ಆದರೆ, ನಾವು ಅವರ ಅತಿಥಿಗಳಾಗಿದ್ದರೂ, ಅವರು ನಮಗೆ ಈ ರೀತಿ ಕಿರುಕುಳ ನೀಡುವುದು ಎಷ್ಟು ಸರಿ? ಈ ಘಟನೆಯು ಕಲಾವಿದರಿಗೆ ಗೌರವ ಮತ್ತು ಭದ್ರತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತದೆ ಎಂದು ಅವರು ಮೌನಿ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ.
‘ಆ ವೇದಿಕೆ ಬಹಳ ಎತ್ತರದಲ್ಲಿ ಇತ್ತು. ಈ ಅಂಕಲ್ಗಳು ಕೆಳಗಿನಿಂದ ವಿಡಿಯೋ ಮಾಡುತ್ತಿದ್ದರು. ಅದನ್ನು ನಿಲ್ಲಿಸಿ ಅಂತ ಹೇಳಲು ಬಂದವರಿಗೆ ಬೈಯ್ದರು. ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಆದರೆ ಇದು? ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ನಾನು ಪೋಸ್ಟ್ ಮಾಡಲ್ಲ. ಆದರೆ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ವಧು-ವರರನ್ನು ಹರಸಲು ನಾವು ಅವರ ಅತಿಥಿಯಾಗಿ ಹೋಗಿರುತ್ತೇನೆ. ಆದರೆ ಅವರು ನಮಗೆ ಕಿರುಕುಳ ನೀಡುತ್ತಾರೆ’ ಎಂದು ಮೌನಿ ರಾಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement