ನನ್ನ ಅನುಮತಿ ಪಡೆಯದೇ ಗರ್ಭಕೋಶ ತೆಗೆಸಿದ್ದಾರೆ: ಗಾಯಕ ಉದಿತ್ ನಾರಾಯಣ್ ವಿರುದ್ಧ ಮೊದಲ ಪತ್ನಿ ದೂರು!

ಬಾಲಿವುಡ್ ನ ಖ್ಯಾತ ಗಾಯಕ ಉದಿತ್ ನಾರಾಯಣ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.
Ranjhana Jha-Udit Narayan
ರಂಜನಾ ನಾರಾಯಣ್ ಝಾ-ಉದಿತ್ ನಾರಾಯಣ್
Updated on

ಬಾಲಿವುಡ್ ನ ಖ್ಯಾತ ಗಾಯಕ ಉದಿತ್ ನಾರಾಯಣ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ನಾರಾಯಣ್ ಝಾ ಅವರು ಸುಪೌಲ್‌ನಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಚಿಕಿತ್ಸೆಯ ನೆಪದಲ್ಲಿ ತಮ್ಮ ಗರ್ಭಕೋಶವನ್ನು ವಂಚನೆಯಿಂದ ತೆಗೆದಿದ್ದಾರೆ ಎಂದು ಉದಿತ್ ನಾರಾಯಣ್ ಅವರ ಪತ್ನಿ ರಂಜನಾ ನಾರಾಯಣ್ ಆರೋಪಿಸಿದ್ದಾರೆ. ಗರ್ಭಕೋಶ ತೆಗೆಸುವ ವಿಚಾರ ನನಗೆ ತಿಳಿದಿರಲಿಲ್ಲ. ಚಿಕಿತ್ಸೆಯ ನೆಪದಲ್ಲಿ ತಮ್ಮ ವಿರುದ್ಧ ಪಿತೂರಿ ನಡೆಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಉದಿತ್ ನಾರಾಯಣ್ ಮತ್ತು ರಂಜನಾ 1984ರ ಡಿಸೆಂಬರ್ 7ರಂದು ವಿವಾಹವಾಗಿದ್ದರು. ಆದರೆ ರಂಜನಾ ಈಗ ಉದಿತ್ ನಾರಾಯಣ್ ವಿರುದ್ಧ ಕಿರುಕುಳ ಮತ್ತು ಭರವಸೆ ಉಲ್ಲಂಘನೆ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅವರು ಪ್ರಸ್ತುತ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ನ್ಯಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ. ಮದುವೆಯಾದ ಸ್ವಲ್ಪ ಸಮಯದ ನಂತರ ಉದಿತ್ ಮುಂಬೈಗೆ ವೃತ್ತಿಜೀವನ ಮುಂದುವರಿಸಲು ತೆರಳಿದರು. ಇದು ಅವರ ಮತ್ತು ರಂಜನಾ ನಡುವಿನ ಅಂತರವನ್ನು ಹೆಚ್ಚಿಸಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

Ranjhana Jha-Udit Narayan
ಕೇರಳದ Instagram ಪ್ರಭಾವಿ Chinnu Pappu ನಿಗೂಢ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ರೇಷ್ಮಾ ಶವಪತ್ತೆ!

ನಂತರ ಉದಿತ್ ನಾರಾಯಣ್ ಮುಂಬೈನಲ್ಲಿ ಮರುಮದುವೆಯಾದರು. ಮಾಧ್ಯಮಗಳ ಮೂಲಕ ಈ ಬಗ್ಗೆ ತಿಳಿದುಕೊಂಡೆ, ಈ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರಂಜನಾ ತಮ್ಮ ದೂರಿನಲ್ಲಿ ಉದಿತ್ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. 1996ರಲ್ಲಿ ತಮ್ಮನ್ನು ತೀವ್ರವಾಗಿ ವಂಚಿಸಲಾಯಿತು ಎಂದು ರಂಜನಾ ಹೇಳಿದ್ದಾರೆ. ಚಿಕಿತ್ಸೆಯ ನೆಪದಲ್ಲಿ ದೆಹಲಿಯ ಪ್ರಮುಖ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತಮ್ಮ ಅನುಮತಿಯಿಲ್ಲದೆ ಗರ್ಭಕೋಶವನ್ನು ತೆಗೆದುಹಾಕಲಾಯಿದೆ. ಮತ್ತೊಂದು ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದಾಗ ಈ ಬಗ್ಗೆ ತಿಳಿದುಕೊಂಡೆ ಎಂದು ರಂಜನಾ ಹೇಳಿದ್ದಾರೆ.

Ranjhana Jha-Udit Narayan
Video viral: ಲೈವ್ ಶೋನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳೆಯ ತುಟಿಗೆ ಚುಂಬಿಸಿದ ಗಾಯಕ ಉದಿತ್ ನಾರಾಯಣ್!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com