'ಆಡೋಕ್ ಬಿಡಿ, ಹೋಲಿಕೆ ಬೇಡ'; ವೈಭವ್ ಸೂರ್ಯವಂಶಿ ಭವಿಷ್ಯದ ಕುರಿತು ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ!

ಕೋಲ್ಕತ್ತಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿರುವ ಭಾರತದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಕುರಿತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈಭವ್ ಸೂರ್ಯವಂಶಿ ಭವಿಷ್ಯದ ಭಾರತದ ಆಟಗಾರ, ಇತರೆ ಆಟಗಾರರ ನಡುವೆ ಹೋಲಿಕೆ ಬೇಡ, ಆತನ ಆಟ ಆಡಲು ಬಿಡಿ ಎಂದು ಸೌರವ್ ಗಂಗೂಲಿ ಮನವಿ ಮಾಡಿದರು.
'ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಪ್ರತಿಭಾವಂತ ಆಟಗಾರ. ಈ ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾನೆ. ಆತ ಭಾರತೀಯ ಕ್ರಿಕೆಟ್‌ನ ಭವಿಷ್ಯವಾಗಿದ್ದು, ಈಗಲೇ ಇತರ ಆಟಗಾರರೊಂದಿಗೆ ಹೋಲಿಕೆ ಮಾಡದೆ ತನ್ನ ಆಟ ಆಡಲು ಅವಕಾಶ ನೀಡಬೇಕು' ಎಂದು ಹೇಳಿದರು.
ಹೋಲಿಕೆ ಬೇಡ, ಆತನಿಗೆ ಆಟವಾಡಲು ಬಿಡಿ
ಇದೇ ವೇಳೆ "ವೈಭವ್ ಉತ್ತಮ ಆಟಗಾರ. ಈ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಅದ್ಭುತವಾಗಿ ಆಡಿದ್ದಾನೆ. ಆತನಲ್ಲಿ ಅಪಾರ ಸಾಮರ್ಥ್ಯವಿದೆ. ಭಾರತ ತಂಡದ ಪರವೂ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ. ಆತ ಭವಿಷ್ಯದ ಆಟಗಾರ. ಆದರೆ, ಆತನನ್ನು ಬೇರೆ ಆಟಗಾರರೊಂದಿಗೆ ಹೋಲಿಕೆ ಮಾಡಬೇಡಿ. ಆತನಿಗೆ ಆಟವಾಡಲು ಬಿಡಿ" ಎಂದು ಗಂಗೂಲಿ ಹೇಳಿದ್ದಾರೆ.
ವೈಭವ್ ಎಡಗೈ ಬ್ಯಾಟರ್ ಆಗಿದ್ದು, ಆತನಿಗೆ ಈಗ ಕೇವಲ 15-16 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆತನ ಮೇಲೆ ಹೋಲಿಕೆಗಳ ಒತ್ತಡ ಹೇರುವುದು ಬೇಡ. ಆತನ ಸಹಜ ಆಟವನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿಗ್‌ಬಾಸ್ ಬಂಗಾಳ ನಿರೂಪಣೆ ಉತ್ತಮ ಅನುಭವ
ಇತ್ತ ಕ್ರಿಕೆಟ್ ಮಾತ್ರವಲ್ಲದೇ ಕಿರುತೆರೆ ಕುರಿತು ಮಾತನಾಡಿದ ಗಂಗೂಲಿ ತಮ್ಮ ನಿರೂಪಣೆಯ ಬಿಗ್‌ಬಾಸ್ ಬಂಗಾಳ ಕಾರ್ಯಕ್ರಮದ ನಿರೂಪಣೆ ಅನುಭವದ ಬಗ್ಗೆಯೂ ಮಾತನಾಡಿದ್ದಾರೆ.
"ಇದು ನನಗೆ ಉತ್ತಮ ಅನುಭವ. ಮೊದಲ ಬಾರಿಗೆ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದೇನೆ. ಕಾರ್ಯಕ್ರಮ ಇಷ್ಟೊಂದು ಜನಪ್ರಿಯವಾಗಿರುವುದು ಸಂತೋಷ ತಂದಿದೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



