ರಾಜ್ಯ

ಕರ್ನಾಟಕವನ್ನು ಅತಿಕ್ರಮಿಸಿದ್ದಾರೆ: ಕೇರಳಿಗರ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಾಪಕ ಆಕ್ರೋಶ

ಕರ್ನಾಟಕವನ್ನು ಅತಿಕ್ರಮಿಸಿದ್ದಾರೆ: ಕೇರಳಿಗರ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಾಪಕ ಆಕ್ರೋಶ
ಪ್ರತಾಪ್ ಸಿಂಹ
Published On :

ಮೈಸೂರು: ಮೈಸೂರಿನ ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು, ಕೇರಳ ಮತ್ತು ಮಲಯಾಳಿಗಳ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳು ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇರಳೀಯರು ಕರ್ನಾಟಕದ ಭೂಪ್ರದೇಶವನ್ನು ಅತಿಕ್ರಮಿಸುತ್ತಿದ್ದು ರಾಜ್ಯದ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕೊಡಗಿನಲ್ಲಿ ಹಾಕಿ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಂಹ, ಮಲಯಾಳಿಗಳು ಕರ್ನಾಟಕದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ತಮ್ಮ ರಾಜ್ಯದ ಹೊರಗೆ ದರ್ಪದಿಂದ ವರ್ತಿಸುತ್ತಿದ್ದಾರೆ. ಗುಂಡ್ಲುಪೇಟೆಯ ಅರ್ಧ ಭಾಗವನ್ನು ಅತಿಕ್ರಮಿಸಿದ್ದಾರೆ. ಕೊಡಗಿನಲ್ಲೂ ಅವರ ದರ್ಪ ಎದ್ದು ಕಾಣುತ್ತಿದೆ ಎಂದು ಅವರು ಹೇಳಿದ್ದರು.

ಕೇರಳವನ್ನು ಲೇವಡಿ ಮಾಡಿದ ಅವರು, ನೆರೆಯ ಆ ರಾಜ್ಯದಲ್ಲಿ ತೆಂಗಿನ ಮರಗಳು ಮತ್ತು ಹಿನ್ನೀರು ಬಿಟ್ಟರೆ ಬೇರೇನೂ ಇಲ್ಲ. ಮಲಯಾಳಿಗಳು ಬುದ್ಧಿವಂತರು ಎಂದು ಹೇಳಲಾಗಿದ್ದರೂ, ನೀವು ಬೇರೆ ಸ್ಥಳಗಳಿಗೆ ಹೋದರೆ ಅದು ಕಾಣಿಸುವುದಿಲ್ಲ ಎಂದು ಹೇಳಿದ್ದರು. ಪ್ರತಾಪ್ ಸಿಂಹ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. ಇಡೀ ರಾಜ್ಯದ ಜನರ ಬಗ್ಗೆ ಅವಹೇಳನಕಾರಿ ಹಾಗೂ ಸಾಮಾನ್ಯೀಕರಿಸುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಪ್ರಾದೇಶಿಕ ವಿಭಜನೆಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಸಿಂಹ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಕೊಡಗಿನ ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಿರುಚಿ, ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ ಸಿಂಹ, ತಾವು ಮಲಯಾಳಿ ಸಮುದಾಯದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಹಿಂದೂ ಸಂಸ್ಕೃತಿಯನ್ನು ವಿರೋಧಿಸುವ ಕಳ್ಳರು ಮತ್ತು ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸಿಂಹ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ರೆಜಿತ್ ನಾಯರ್ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು, ಇಂತಹ ಮಾತುಗಳನ್ನಾಡಿ ಜನರನ್ನು ಅನಗತ್ಯವಾಗಿ ವಿಭಜಿಸಬೇಡಿ. ಕೇರಳದಲ್ಲಿ ಏನೂ ಇಲ್ಲ ಎಂದಾದರೆ, ನೀವು ಶಬರಿಮಲೆ ಮತ್ತು ಕೊಟ್ಟಿಯೂರ್‌ಗೆ ಏಕೆ ಬರುತ್ತೀರಿ ಮತ್ತು ಅಲ್ಲಿ ಸ್ಥಳವನ್ನು ಏಕೆ ಮಲಿನಗೊಳಿಸುತ್ತೀರಿ? ಇಂದು ಕರ್ನಾಟಕದವರು ಸೇರಿದಂತೆ ವಿವಿಧ ರಾಜ್ಯಗಳ ಜನರು ಕೇರಳದಲ್ಲಿ ಬಂದು ನೆಲೆಸಿದ್ದಾರೆ. ನಾವೆಲ್ಲರೂ ಭಾರತೀಯರು. ಭಾರತದ ಯಾವುದೇ ಪ್ರಜೆಗೆ ದೇಶದ ಎಲ್ಲಿ ಬೇಕಾದರೂ ವಾಸಿಸುವ ಹಕ್ಕಿದೆ. ಅನಗತ್ಯ ಹೇಳಿಕೆಗಳನ್ನು ನೀಡಿ ಜನರ ನಡುವೆ ಒಡಕು ಮೂಡಿಸಬೇಡಿ. ನಾನು ಕರ್ನಾಟಕವನ್ನು ಪ್ರೀತಿಸುವ ವ್ಯಕ್ತಿ ಮತ್ತು ಅಲ್ಲಿ ನನಗೆ ಅನೇಕ ಸಹೋದರರಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರಾದ ಮ್ಯಾಥ್ಯೂ ಕೆ. ಅವರು, ಸಿಂಹ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಲ್ಲದೆ, ಅವರನ್ನು ಮತ್ತು ಬಿಜೆಪಿಯನ್ನು ರಾಜಕೀಯವಾಗಿ ಟೀಕಿಸಿದ್ದಾರೆ. ಸಂಸ್ಕೃತಿಯ ಬಗ್ಗೆ ನಮಗೆ ಪಾಠ ಹೇಳಲು ಅವರಿಗೆ ಯಾವುದೇ ಹಕ್ಕಿಲ್ಲ. ಅವರ ಈ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.