ಮೈಸೂರು ಬಿಜೆಪಿಯಲ್ಲಿ ತಾರಕಕ್ಕೇರಿದ ಮುಸುಕಿನ ಗುದ್ದಾಟ: ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲಿಗನಿಗೆ ಕೊಲೆ ಬೆದರಿಕೆ!

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಆಂತರಿಕ ಭಿನ್ನಮತ ಮತ್ತೊಮ್ಮೆ ತಾರಕಕ್ಕೇರಿದೆ. ಮಾಜಿ ಶಾಸಕ ಎಲ್. ನಾಗೇಂದ್ರ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಬೆಂಬಲಿಗರ ನಡುವಿನ ಶೀತಲ ಸಮರವು ಇದೀಗ ಕೊಲೆ ಬೆದರಿಕೆ ಆರೋಪದ ಹಂತಕ್ಕೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:
Pratap Simha Supporter Threatened Over Omission at BJP Meet, Mysuru Internal Feud Escalates
ಮೈಸೂರು ಬಿಜೆಪಿಯಲ್ಲಿ ತಾರಕಕ್ಕೇರಿದ ಮುಸುಕಿನ ಗುದ್ದಾಟOnline Desk
Updated on: 

ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಆಂತರಿಕ ಭಿನ್ನಮತ ಮತ್ತೊಮ್ಮೆ ತಾರಕಕ್ಕೇರಿದೆ. ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಲ್. ನಾಗೇಂದ್ರ ಬೆಂಬಲಿಗರ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ಬೀದಿಗೆ ಬಂದಿದ್ದು, ಕಾರ್ಯಕರ್ತನೊಬ್ಬನಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಸ್ವರೂಪಕ್ಕೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಅಧಿಕೃತ ಸಮಾವೇಶವೊಂದರಲ್ಲಿ, ಸ್ವಾಗತ ಭಾಷಣ ಮಾಡುವಾಗ ವೇದಿಕೆಯಲ್ಲಿದ್ದ ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರು. ಇದನ್ನು ಅಲ್ಲೇ ಇದ್ದ ಪ್ರತಾಪ್ ಸಿಂಹ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತ ರಾಜಚಾರಿ ಎಂಬುವವರು ತೀವ್ರವಾಗಿ ಪ್ರಶ್ನಿಸಿ, ಸಭೆಯಲ್ಲಿ ಗೊಂದಲ ಮೂಡಿಸಿದ್ದರು. ಆದರೆ, ಇದೇ ವಿಚಾರ ಸದ್ಯ ಮೈಸೂರು ಬಿಜೆಪಿಯಲ್ಲಿ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Pratap Simha Supporter Threatened Over Omission at BJP Meet, Mysuru Internal Feud Escalates
ರಾಜ್ಯದಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್: ಕಾಂಗ್ರೆಸ್-BJP ನಡುವೆ ತೀವ್ರ ವಾಕ್ಸಮರ..!

ಕೊಲೆ ಬೆದರಿಕೆ ಆರೋಪ

ಸಮಾವೇಶದಲ್ಲಿ ಗಲಾಟೆ ನಡೆದ ಬೆನ್ನಲ್ಲೇ, ಮಾಜಿ ಶಾಸಕ ಎಲ್. ನಾಗೇಂದ್ರ ಅವರ ಬೆಂಬಲಿಗರು ತನ್ನನ್ನು ಅಡ್ಡಗಟ್ಟಿ ತೀವ್ರವಾಗಿ ಬೆದರಿಸಿದ್ದಾರೆ ಎಂದು ರಾಜಚಾರಿ ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. "ನನ್ನನ್ನು ಕೂಡಿ ಹಾಕಿ, ಹೆದರಿಸಿ, ಬಲವಂತವಾಗಿ ಮೊಬೈಲ್‌ನಲ್ಲಿ ತಪ್ಪೊಪ್ಪಿಗೆಯ ವೀಡಿಯೋ ಹೇಳಿಕೆ ರೆಕಾರ್ಡ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಾಪ್ ಸಿಂಹ ಪರವಾಗಿ ಮಾತನಾಡಿದರೆ ಜೀವಸಹಿತ ಉಳಿಸುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ" ಎಂದು ರಾಜಚಾರಿ ಗಂಭೀರವಾಗಿ ದೂರಿದ್ದಾರೆ.

'ಚಾಮರಾಜ' ಕ್ಷೇತ್ರಕ್ಕಾಗಿ ಮುಸುಕಿನ ಗುದ್ದಾಟ

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರವು ಸದ್ಯ ಇಬ್ಬರು ನಾಯಕರ ಪ್ರತಿಷ್ಠೆಯ ಕಣವಾಗಿದೆ. ಯಾಕಂದ್ರೆ, ಮುಂದಿನ ದಿನಗಳಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಎಲ್. ನಾಗೇಂದ್ರ ಇಬ್ಬರೂ ತೀವ್ರ ಆಕಾಂಕ್ಷೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ತೀವ್ರ ಆಂತರಿಕ ಕಚ್ಚಾಟ ನಡೆಯುತ್ತಲೇ ಇತ್ತು. ಕೆಲವು ದಿನಗಳ ಹಿಂದೆ ನಡೆದ ಪ್ರತಿಭಟನೆಯೊಂದರಲ್ಲಿ, ಇಬ್ಬರು ನಾಯಕರು ರಾಜ್ಯ ಬಿಜೆಪಿ ಮುಖಂಡರ ಸಮ್ಮುಖದಲ್ಲೇ ಬಹಿರಂಗವಾಗಿ ನೂಕಾಟ-ತಳ್ಳಾಟ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X