Hruthin H P
ನಾನು ಹೃತಿನ್ ಹೆಚ್.ಪಿ., ಪ್ರಸ್ತುತ kannadaprabha.com ನಲ್ಲಿ Content Editor ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು, ಉದ್ಯೋಗ, ವೈಯಕ್ತಿಕ ಹಣಕಾಸು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಅನುಭವ ಹೊಂದಿದ್ದೇನೆ.
ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, News18 ಕನ್ನಡದಲ್ಲಿ ಸಬ್-ಎಡಿಟರ್ ಹಾಗೂ Vote Marketನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮತ್ತು infosite.hubನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದರೊಂದಿಗೆ K-SET ಪರೀಕ್ಷೆಯಲ್ಲೂ ತೇರ್ಗಡೆಯಾಗಿರುವ ನಾನು, ಕೆಲ ಸಂದರ್ಭ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ.