ಧನಂಜಯ್ ಮೋಸ ಮಾಡಿದ್ದಾರೆ! ಡಾಲಿ ಬಗ್ಗೆ ಹಿಂಗ್ಯಾಕ್ ಅಂದ್ರು ನಟಿ ರೀಷ್ಮಾ ನಾಣಯ್ಯ?

ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರೀಷ್ಮಾ ನಾಣಯ್ಯ ಅವರು, ನಟ ಧನಂಜಯ್ ವಿರುದ್ದ ಆರೋಪ ಮಾಡಿದ್ದು, ನೃತ್ಯದ ವಿಚಾರದಲ್ಲಿ ಡಾಲಿ ತಮಗೆ ಮೋಸ ಮಾಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Dolly Dhananjaya Cheated Me on Dance Floor, Jokes Rishma Nannaya at Anna From Mexico Song Launch
ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಪೋಸ್ಟರ್Online Desk
Updated on: 

ಬೆಂಗಳೂರು: ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ ಎಂದು ನಟ ಧನಂಜಯ್ ಅವರು, ಇದೇ ಕ್ರಿಸ್‌ಮಸ್ ಹಬ್ಬಕ್ಕೆ ಅಣ್ಣ ಫ್ರಮ್ ಮೆಕ್ಸಿಕೋ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಬಡವ ರಾಸ್ಕಲ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಶಂಕರ್ ಗುರು ನಿರ್ದೇಶನದ ಚಿತ್ರದಲ್ಲಿ ಡಾಲಿಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಇನ್ನು, ಸಿನಿಮಾದ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದದರ ಬಗ್ಗೆ, ನಟಿ ರೀಷ್ಮಾ ಅವರು, ಧನಂಜಯ್ ವಿರುದ್ದ ಮಜವಾದ ಆರೋಪ ಮಾಡಿದ್ದು, ಡಾಲಿ ತಮಗೆ ಮೋಸ ಮಾಡಿದ್ದಾರೆ ಎಂದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಡಾಲಿ ಬಗ್ಗೆ ಹಿಂಗ್ಯಾಕ್ ಅಂದ್ರು ರೀಷ್ಮಾ?

ಶಂಕರ್ ಗುರು ನಿರ್ದೇಶನದ, ಡಾಲಿ ಧನಂಜಯ್ ಮತ್ತು ರೀಷ್ಮಾ ನಾಣಯ್ಯ ಅಭಿನಯದ 'ಅಣ್ಣ ಫ್ರಮ್ ಮೆಕ್ಸಿಕೋ' ಚಿತ್ರದ ಮೂರನೇ ಹಾಡು 'ಹೋಗೋಣು ಬಾರೋ ಮೆಕ್ಸಿಕೋ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರೀಷ್ಮಾ, "ನನಗೆ ಡ್ಯಾನ್ಸ್ ಬರಲ್ಲ, ಡ್ಯಾನ್ಸ್ ಬರಲ್ಲ ಅಂತ ಶುರುವಿನಿಂದಲೂ ಹೇಳಿ ಡಾಲಿ ಧನಂಜಯ್ ಸರ್ ನನಗೆ ಮೋಸ ಮಾಡಿದ್ದಾರೆ. ಆದರೆ ಸೆಟ್‌ನಲ್ಲಿ ಅವರು ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ಮೇಲೆ ಯಾರಿಗೂ ತಮಗೆ ಡ್ಯಾನ್ಸ್ ಬರಲ್ಲ ಅಂತ ಹೇಳಬೇಡಿ" ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.

ರೀಷ್ಮಾ ಎನರ್ಜಿ ಮ್ಯಾಚ್ ಮಾಡಲು..

ಇದಕ್ಕೆ ಪ್ರತಿಯಾಗಿ ಮಾತನಾಡಿದ ಡಾಲಿ ಧನಂಜಯ್, "ನಟಿ ರೀಷ್ಮಾ ನಾಣಯ್ಯ ಅವರ ಅದ್ಭುತ ಡ್ಯಾನ್ಸ್ ಎನರ್ಜಿಗೆ ಶೇ. 50ರಷ್ಟಾದರೂ ಮ್ಯಾಚ್ ಮಾಡಲು ನಾನು ಪ್ರತಿದಿನ ಪ್ರಾಕ್ಟೀಸ್ ಮಾಡುತ್ತಿದ್ದೆ" ಎಂದು ನಗುತ್ತಾ ಉತ್ತರಿಸಿದ್ದಾರೆ. ಮುಂದುವರೆದು, ಈ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ, ವಾಸುಕಿ ವೈಭವ್ ಸಂಗೀತವಿದ್ದು, ಮಾಳು ನಿಪನಾಳ್ ಮತ್ತು ಮಾಧುರಿ ಶೇಷಾದ್ರಿ ಹಾಡಿದ್ದಾರೆ. 'ಬಡವ ರಾಸ್ಕಲ್' ಯಶಸ್ಸಿನ ಬಳಿಕ ಧನಂಜಯ್ ಮತ್ತು ಶಂಕರ್ ಗುರು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಡಿಸೆಂಬರ್ 24, 2026 ರಂದು ತೆರೆಗೆ ಬರಲಿದೆ.

Dolly Dhananjaya Cheated Me on Dance Floor, Jokes Rishma Nannaya at Anna From Mexico Song Launch
ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X