ರಾಜಕೀಯ

'ಮಾರ್ಕ್ ಬಿಜೆಪಿಬರ್ಗ್', 'ಮೆಟಾ ಬಿಜೆಪಿಯ ಬೇಟಾ': Meta ವಿರುದ್ಧ ಯುವ ಕಾಂಗ್ರೆಸ್‌ನಿಂದ ಬ್ಯಾನರ್ ಅಭಿಯಾನ; ರಾಜಕೀಯ ಪಕ್ಷಪಾತ ಆರೋಪ; Video

'ಮಾರ್ಕ್ ಬಿಜೆಪಿಬರ್ಗ್', 'ಮೆಟಾ ಬಿಜೆಪಿಯ ಬೇಟಾ': Meta ವಿರುದ್ಧ ಯುವ ಕಾಂಗ್ರೆಸ್‌ನಿಂದ ಬ್ಯಾನರ್ ಅಭಿಯಾನ; ರಾಜಕೀಯ ಪಕ್ಷಪಾತ ಆರೋಪ; Video
ಮೆಟಾದ ರಾಜಕೀಯ ಪಕ್ಷಪಾತವನ್ನು ಟೀಕಿಸುವ ಬ್ಯಾನರ್‌ಗಳಲ್ಲಿ ಜುಕರ್‌ಬರ್ಗ್ ರನ್ನು ಆರ್‌ಎಸ್‌ಎಸ್‌ ಉಡುಪಿನಲ್ಲಿ ಚಿತ್ರಿಸಲಾಗಿದೆ
Published On :

ರಾಜಕೀಯ ಪಕ್ಷಪಾತ ತೋರುತ್ತಿದೆ ಎಂದು ಆರೋಪಿಸಿ ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಮೆಟಾ ವಿರುದ್ಧ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಬೆಂಗಳೂರಿನಾದ್ಯಂತ ಇಂದು ಅಭಿಯಾನ ಆರಂಭಿಸಿದೆ.

ನಕಲಿ ಸುದ್ದಿ, ದ್ವೇಷ ಭಾಷಣ ಮತ್ತು ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೆಟಾ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ಕಾಂಗ್ರೆಸ್‌ನ ಯುವ ಘಟಕ ಆರೋಪಿಸಿದೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನದ ಭಾಗವಾಗಿ, ಮೆಟಾ ಮತ್ತು ಅದರ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯಭರಿತ ಬ್ಯಾನರ್‌ಗಳನ್ನು ನಗರದ ವಿವಿಧೆಡೆ ಅಳವಡಿಸಲಾಗಿದೆ.

ಮೆಟಾದ ರಾಜಕೀಯ ಪಕ್ಷಪಾತವನ್ನು ಟೀಕಿಸುವ ಉದ್ದೇಶದಿಂದ ಈ ಬ್ಯಾನರ್‌ಗಳಲ್ಲಿ ಜುಕರ್‌ಬರ್ಗ್ ಅವರನ್ನು ಆರ್‌ಎಸ್‌ಎಸ್‌ ಉಡುಪಿನಲ್ಲಿ ಚಿತ್ರಿಸಲಾಗಿದೆ. ಅಲ್ಲದೆ, ಸಿಇಒ ಅವರನ್ನು 'ಮಾರ್ಕ್ ಬಿಜೆಪಿಬರ್ಗ್' ಎಂದು ವ್ಯಂಗ್ಯವಾಡಿ, "ಮೆಟಾ ಬಿಜೆಪಿಯ ಕಂದ" ಎಂಬ ಘೋಷಣೆಯನ್ನು ಬಳಸಲಾಗಿದೆ.

ರಾಜಕೀಯ ಗುಂಪುಗಳ ವಿಷಯದಲ್ಲಿ ಮೆಟಾ ತನ್ನ ಕಂಟೆಂಟ್ ಮಾಡರೇಷನ್ ನೀತಿಗಳನ್ನು ಸಮಾನವಾಗಿ ಜಾರಿಗೊಳಿಸುತ್ತಿಲ್ಲ ಎಂಬ ಆರೋಪವನ್ನು ಈ ಘೋಷಣೆಯ ಮೂಲಕ ಎತ್ತಿಹಿಡಿಯಲು ಯುವ ಕಾಂಗ್ರೆಸ್ ಉದ್ದೇಶಿಸಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದ್ವೇಷ ಭಾಷಣದ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್, ಕಂಪನಿಯ ಧೋರಣೆಯಿಂದ ನಕಲಿ ಸುದ್ದಿಗಳ ಹರಡುವಿಕೆಗೆ ಅವಕಾಶವಾಗುತ್ತಿದೆ ಎಂದು ಆರೋಪಿಸಿದೆ.

ಕಂಪನಿಯ ಇಂತಹ ಧೋರಣೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾರಕವಾಗಿದ್ದು, ಇದನ್ನು ಸಹಿಸಬಾರದು ಎಂದು ಆರೋಪಿಸಿರುವ ಯುವ ಕಾಂಗ್ರೆಸ್, ಬಳಕೆದಾರರ ಖಾಸಗಿತನದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

ಯಾವುದೇ ಕಂಪನಿಗಳು ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಬಾರದು ಎಂದು ಪ್ರತಿಪಾದಿಸಿರುವ ಯುವ ಕಾಂಗ್ರೆಸ್, ಮೆಟಾ ತನ್ನ ಕಾರ್ಯಚಟುವಟಿಕೆಗಳಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಎಎನ್‌ಐ ವರದಿ ಪ್ರಕಾರ, ಬೆಂಗಳೂರಿನ ವಿವಿಧ ಸ್ಥಳಗಳಲ್ಲದೆ, ನ್ಯೂ ಏರ್‌ಪೋರ್ಟ್ ರಸ್ತೆಯ ಸದಹಳ್ಳಿ ಗೇಟ್ ಬಳಿ, ಟೋಲ್ ಪ್ಲಾಜಾ ಸಮೀಪ ಹಾಗೂ ಚಿಕ್ಕಜಾಲದಲ್ಲಿಯೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯು ಈ ಬ್ಯಾನರ್‌ಗಳ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, "ಬಿಜೆಪಿಯ ಕಂದ ಮೆಟಾ ನಮ್ಮ ಬೆಂಗಳೂರಿಗೆ ಕಾಲಿಟ್ಟಿದೆ! ಮಾರ್ಕ್ ಬಿಜೆಪಿಬರ್ಗ್ ಈಗ ಮೆಟಾಗಿಂತಲೂ ಹೆಚ್ಚು ಪ್ರಸಿದ್ಧಿಯಾಗುತ್ತಿದ್ದಾರೆ" ಎಂದು ಬರೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.