ಬಹುಕೋಟಿ ವಂಚನೆ ಪ್ರಕರಣ: ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್, ಪತ್ನಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್!

ವಿವಾದವು ಹೆಚ್ಚಾಗಿ ವ್ಯಾಪಾರ- ವಹಿವಾಟಿನಿಂದ ಉಂಟಾದಂತೆ ತೋರುತ್ತಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಪ್ರಕರಣವು ಮುಂದುವರಿಯುತ್ತಿರುವಾಗ ನಿರಂತರ ಕಸ್ಟಡಿ ಬಂಧನ ಸಮರ್ಥಿಸುವುದಿಲ್ಲ ಎಂದು ಹೇಳಿದೆ.
Vikram Bhatt and wife Shwetambari
ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್ ದಂಪತಿ
Updated on

ಚೆನ್ನೈ: 30 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್ ಮತ್ತು ಅವರ ಪತ್ನಿ ಶ್ವೇತಾಂಬರಿ ಭಟ್ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ಈ ಹಿಂದೆ ರಾಜಸ್ಥಾನ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ನಿರಾಕರಿಸಿತ್ತು. ಆದರೆ, ಅವರ ಬಿಡುಗಡೆಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡುವ ಮೂಲಕ ಬಿಗ್ ರಿಲೀಫ್ ನೀಡಿದೆ.

ವಿವಾದವು ಹೆಚ್ಚಾಗಿ ವ್ಯಾಪಾರ- ವಹಿವಾಟಿನಿಂದ ಉಂಟಾದಂತೆ ತೋರುತ್ತಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಪ್ರಕರಣವು ಮುಂದುವರಿಯುತ್ತಿರುವಾಗ ನಿರಂತರ ಕಸ್ಟಡಿ ಬಂಧನ ಸಮರ್ಥಿಸುವುದಿಲ್ಲ ಎಂದು ಹೇಳಿದೆ.

Vikram Bhatt and wife Shwetambari
30 ಕೋಟಿ ರೂ ವಂಚನೆ ಆರೋಪ: ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಬಂಧನ!

ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, ದಂಪತಿಗಳ ಮೇಲ್ಮನವಿಯನ್ನು ಅಂಗೀಕರಿಸಿತು. ಆರೋಪಗಳು ಗಂಭೀರವಾಗಿದ್ದರೂ, ಈ ಹಂತದಲ್ಲಿ ದೀರ್ಘಕಾಲದ ಸೆರೆವಾಸವನ್ನು ಸಮರ್ಥಿಸುವ ಅಪರಾಧಗಳಿಗಿಂತ ಹೆಚ್ಚಾಗಿ ಹಣಕಾಸಿಗೆ ಸಂಬಂಧಿಸಿದಂತೆ ನಡೆದಿರುವುದಂತೆ ತೋರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ಪ್ರಕರಣದ ಅರ್ಹತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲ್ಲ ಎಂದಿದ್ದು, ತನಿಖೆ ಮತ್ತು ವಿಚಾರಣೆಯು ಕಾನೂನಿನ ಪ್ರಕಾರ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com