• Tag results for ಸುಪ್ರೀಂಕೋರ್ಟ್

ಗಲ್ಲಿಗೇರಿಸುತ್ತಾರೆಂದರೆ ಅದಕ್ಕಿಂತಲೂ ತುರ್ತು ವಿಚಾರ ಮತ್ತೊಂದಿಲ್ಲ:  ಅಪರಾಧಿ ಮುಕೇಶ್ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಸಮ್ಮತಿ

ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ. 

published on : 27th January 2020

ಸಂಸದರು, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್'ಗೆ: ನಿರ್ಧಾರ ಕುರಿತು ಮರುಚಿಂತನೆ ನಡೆಸಲು 'ಸುಪ್ರೀಂ' ಸಲಹೆ

ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದ್ದು, ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪಗಳೂ ಕೂಡ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತ ಮಾಡಬೇಕೆಂದು ಸುಪ್ರೀಂಕೋರ್ಟ್ ಪ್ರಯತ್ನ ನಡೆಸಿದ್ದು...

published on : 21st January 2020

ಅಲಹಾಬಾದ್ ಹೆಸರು ಬದಲಾವಣೆ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್ 

ಅಲಹಾಬಾದ್ ನ್ನು ಪ್ರಯಾಗ್ ರಾಜ್ ಎಂದು ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

published on : 20th January 2020

ಪಂಜಾಬ್ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕಾರ; ಸುಪ್ರೀಂ ಮೊರೆ ಹೋಗಲು ನಿರ್ಧಾರ

ಪೌರತ್ವ ತಿದ್ದುಪಡಿ ಕಾಯ್ದೆ, 2019 ತಾರತಮ್ಯ ಮತ್ತು ದೇಶದ ಸಂವಿಧಾನದ ಜಾತ್ಯತೀತ ತತ್ವದ ವಿರುದ್ಧವಾಗಿದ್ದು, ಈ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸುವಂತೆ ಕೋರಿ ಪಂಜಾಬ್ ವಿಧಾನಸಭೆಯು ಇಂದು  ಧ್ವನಿ ಮತದಿಂದ ನಿರ್ಣಯ ಅಂಗೀಕರಿಸಿದೆ

published on : 17th January 2020

ಪೌರತ್ವ ಕಾಯ್ದೆಯಿಂದ ಸಂವಿಧಾನ, ಜಾತ್ಯಾತೀತತೆ ಉಲ್ಲಂಘನೆಯಾಗಿದೆ: 'ಸುಪ್ರೀಂ' ಮೆಟ್ಟಿಲೇರಿದ ಕೇರಳ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನ, ಜಾತ್ಯಾತೀತತೆ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಕೇರಳ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 

published on : 14th January 2020

ಸಾಲು, ಸಾಲು ಪ್ರಕರಣಗಳ ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂನತ್ತ !

ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಪುನರಾರಂಭವಾಗಲಿರುವ ಸುಪ್ರೀಂ ಕೋರ್ಟ್ ಮುಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಕರಣ,ಸೇರಿದಂತೆ ಹಲವು ಮಹತ್ವದ ಪ್ರಕಣಗಳ ವಿಚಾರಣೆ ನಡೆಯಲಿದ್ದು, ಎಲ್ಲರ ಕಣ್ಣು, ಚಿತ್ತ ಕೋರ್ಟ್ ನತ್ತ ನೆಟ್ಟಿದೆ.

published on : 6th January 2020

ಸೈರಸ್ ಮಿಸ್ತ್ರಿ ಮರು ನೇಮಕ: ಮತ್ತೆ ಕೋರ್ಟ್ ಮೆಟ್ಟಿಲೇರಿದ ಟಾಟಾ ಪುತ್ರರು

ದೇಶದ ಅತಿದೊಡ್ಡ ಕೈಗಾರಿಕಾ ಸಮೂಹ ಗುಂಪಿನ ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಸೈರಸ್ ಮಿಸ್ತ್ರಿ ಅವರು ಮರು ನೇಮಕವಾಗಿ ಹದಿನೈದು ದಿನ ಕಳೆಯುವ ಮುನ್ನವೇ ರತನ್ ಟಾಟಾ ಪುತ್ರರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

published on : 2nd January 2020

ಕರ್ನಾಟಕ ರಾಜ್ಯ ಕೆಲ ಮಟ್ಟಿಗೆ ಮಹದಾಯಿ ನೀರು ತಿರುಗಿಸಿದೆ: ಗೋವಾ ಸಿಎಂ ಆರೋಪ

ಮಹದಾಯಿ (ಕಳಸಾ-ಬಂಡೂರಿ) ವಿವಾದ ಸುಪ್ರೀಂಕೋರ್ಟ್ ನಲ್ಲಿದ್ದರೂ, ಕರ್ನಾಟಕ ರಾಜ್ಯವು ಮಹದಾಯಿ ನದಿಯನ್ನು ಕೆಲ ಮಟ್ಟಿಗೆ ತಿರುಗಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಆರೋಪಿಸಿದ್ದಾರೆ. 

published on : 2nd January 2020

ಹೈದರಾಬಾದ್ ಎನ್ಕೌಂಟರ್: ಸುಪ್ರೀಂ ಮೆಟ್ಟಿಲೇರಿದ ಅತ್ಯಾಚಾರಿ ಕುಟುಂಬ, ಸಿಬಿಐ ತನಿಖೆಗೆ ಮನವಿ

ಸೈಬರಾಬಾದ್ ಪೊಲೀಸ ಎನ್ಕೌಂಟರ್'ನಲ್ಲಿ ಹತ್ಯೆಗೀಡಾದ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಕುಟುಂಬದ ಸಂಬಂಧಿಕರು ಈ ಎನ್ಕೌಂಟರ್ ಪ್ರಕರಣ ಸಂಬಂದ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಅಲ್ಲದೆ, ತಮ್ಮ ಪ್ರತಿಯೊಂದು ಕುಟುಂಬಕ್ಕೂ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಆರೋಪಿಗಳ ಸಂಬಂಧಿಕರು ಕೋರಿದ್ದಾರೆ. 

published on : 20th December 2019

ಪೌರತ್ವ ಕಾಯ್ದೆ ತಡೆಗೆ 'ಸುಪ್ರೀಂ' ನಕಾರ: ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದೇಶದಾದ್ಯಂತ ಪ್ರತಿಭಟನೆ, ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. 

published on : 18th December 2019

ಪೌರತ್ವ ಕಾಯ್ದೆ ವಿರುದ್ಧ 'ಸುಪ್ರೀಂ' ಮೊರೆ ಹೋದ ಕಾಂಗ್ರೆಸ್

ಪೌರತ್ವ (ತಿದ್ದುಪಡಿ) ಕಾಯ್ದೆ ಸಿಂಧುತ್ವದ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ  ಎಂದು ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಹೇಳಿದೆ. 

published on : 13th December 2019

ಹೈದರಾಬಾದ್ ಎನ್ ಕೌಂಟರ್: ತನಿಖೆಗೆ ವಿಚಾರಣಾ ಆಯೋಗ ನೇಮಿಸಿದ 'ಸುಪ್ರೀಂ'

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಪೊಲೀಸ್ ಎನ್ ಕೌಂಟರ್ ತನಿಖೆಗಾಗಿ ಸುಪ್ರೀಂ  ಕೋರ್ಟ್ ಮೂವರು ಸದಸ್ಯರ ವಿಚಾರಣಾ ಆಯೋಗ ನೇಮಕ ಮಾಡಿದೆ.

published on : 12th December 2019

ಪೌರತ್ವ ಮಸೂದೆ: 'ಸುಪ್ರೀಂ'ಗೆ ದೂರು ನೀಡಲು ವಿಪಕ್ಷಗಳ ಚಿಂತನೆ

ರಾಜ್ಯಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿರುವ ಪೌರತ್ವ ( ತಿದ್ದುಪಡಿ) ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಗೆ ದೂರು ನೀಡಲು ಪ್ರತಿಪಕ್ಷಗಳು ಚಿಂತನೆ ನಡೆಸಿವೆ.

published on : 12th December 2019

ಐಎನ್ ಎಕ್ಸ್ ಮೀಡಿಯಾ ಕೇಸ್: 105 ದಿನಗಳ ನಂತರ ಪಿ.ಚಿದಂಬರಂ ಗೆ ಷರತ್ತುಬದ್ಧ ಜಾಮೀನು

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

published on : 4th December 2019

ಸುಪ್ರೀಂಕೋರ್ಟ್ ನಲ್ಲಿ ಚಿದಂಬರಂ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಇಡಿ

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರಿಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್ ಗೆ ಇಡಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

published on : 28th November 2019
1 2 3 4 5 6 >