ವಿಚ್ಛೇದನ ಅರ್ಜಿ: ಸಂಗೀತಾಗೆ ಬರೋಬ್ಬರೀ 250 ಕೋಟಿ ರೂಪಾಯಿ ಜೀವನಾಂಶ ನೀಡಲು ವಿಜಯ್ ನಿರ್ಧಾರ!?

ಪತಿ ವಿಜಯ ವಿವಾಹೇತರ ಸಂಬಂಧ ಹೊಂದಿದ್ದಾರೆ. ಹೀಗಾಗಿ ವಿವಾಹ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ವಿವಾಹ ವಿಚ್ಛೇದನವನ್ನು ಕೋರ್ಟ್ ನ ಆಚೆಗೆ ಬಗೆಹರಿಸಿಕೊಳ್ಳಲು ನಟ ವಿಜಯ ಆಸಕ್ತಿ ಹೊಂದಿದ್ದಾರೆ.
Vijay and sangeetha
ವಿಜಯ್ ಮತ್ತು ಪತ್ನಿ ಸಂಗೀತಾ
Updated on

ತಮಿಳು ನಟ ದಳಪತಿ ವಿಜಯ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಈಗಾಗಲೇ ವಿವಾಹ ವಿಚ್ಛೇದನ ಕೋರಿ ಚೆಂಗಲ್ ಪಟ್ಟು ಕೌಟುಂಬಿಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಪತಿ ವಿಜಯ ವಿವಾಹೇತರ ಸಂಬಂಧ ಹೊಂದಿದ್ದಾರೆ. ಹೀಗಾಗಿ ವಿವಾಹ ವಿಚ್ಛೇದನ ಮಂಜೂರು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ವಿವಾಹ ವಿಚ್ಛೇದನವನ್ನು ಕೋರ್ಟ್ ನ ಆಚೆಗೆ ಬಗೆಹರಿಸಿಕೊಳ್ಳಲು ನಟ ವಿಜಯ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿ ಸಂಗೀತಾ ಈಗ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ವಿಜಯ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಪತ್ನಿ ಸಂಗೀತಾ, ಪುತ್ರ ಜಾಸನ್ ಸಂಜಯ್, ದಿವ್ಯಾ ಶಾಸಾಗೆ 250 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದ್ದಾರಂತೆ. ಈ 250 ಕೋಟಿ ರೂಪಾಯಿ ಹಣವನ್ನು ಹೆಂಡತಿ ಮತ್ತು ಇಬ್ಬರ ಮಕ್ಕಳ ನಡುವೆ ಹಂಚಿಕೆ ಮಾಡುತ್ತಾರೆ ಎನ್ನಲಾಗಿದೆ.

ಸುಮಾರು 27 ವರ್ಷಗಳ ಕಾಲ ಜೊತೆಯಾಗಿದ್ದ ದಳಪತಿ ವಿಜಯ್ ಮತ್ತು ಸಂಗೀತಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗೀತಾ ಅವರ ಅರ್ಜಿಯ ಪ್ರತಿಗಳ ಪ್ರಕಾರ, ವಿಜಯ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

Vijay and sangeetha
ಪತ್ನಿ ಡಿವೋರ್ಸ್ ಗೆ ಅರ್ಜಿ ಹಾಕಿದ ಬೆನ್ನಲ್ಲೇ ತ್ರಿಷಾ ಕೃಷ್ಣನ್ ಜೊತೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ದಳಪತಿ ವಿಜಯ್-Video

ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಮತ್ತು ಏಪ್ರಿಲ್ 2021ರಲ್ಲಿ ತನಗೆ ಈ ವಿಷಯ ತಿಳಿಯಿತು ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ. ನಟಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಭರವಸೆ ನೀಡಿದ್ದರೂ ವಿಜಯ್ ಅದನ್ನು ಮುಂದುವರಿಸಿದರು. ಇದರಿಂದ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ. ದಳಪತಿ ವಿಜಯ್ ಅವರು 1999ರ ಆಗಸ್ಟ್ 25ರಂದು ಸಂಗೀತಾ ಜೊತೆ ವಿವಾಹವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com