ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಅವಧಿ 3 ಗಂಟೆ 20 ನಿಮಿಷ?

ಟಾಕ್ಸಿಕ್ ಪೋಸ್ಟ್-ಪ್ರೊಡಕ್ಷನ್‌ ಅಂತಿಮ ಹಂತವನ್ನು ತಲುಪಿದ್ದು, 2022ರಲ್ಲಿ ತೆರೆಕಂಡ ಕೆಜಿಎಫ್ - 2 ನಂತರ ಯಶ್ ಅಭಿಮಾನಿಗಳು ಅವರನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
Will Yash’s Toxic be a 3-hour 20-minute spectacle?
ಯಶ್
Updated on

ರಾಕಿಂಗ್ ಸ್ಟಾರ್ ಯಶ್ ಅಭಿಯನಯದ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಇದೇ ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾಗಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಟಾಕ್ಸಿಕ್ ಪೋಸ್ಟ್-ಪ್ರೊಡಕ್ಷನ್‌ ಅಂತಿಮ ಹಂತವನ್ನು ತಲುಪಿದ್ದು, 2022ರಲ್ಲಿ ತೆರೆಕಂಡ ಕೆಜಿಎಫ್ - 2 ನಂತರ ಯಶ್ ಅಭಿಮಾನಿಗಳು ಅವರನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾದ ಅವಧಿ 3 ಗಂಟೆ 20 ನಿಮಿಷ ಎಂದು ಹೇಳಲಾಗುತ್ತಿದ್ದು, ಇದು ಮತ್ತೊಮ್ಮೆ ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಸಿನಿಮಾ ಪ್ರದರ್ಶನಗಳಲ್ಲಿ ಒಂದಾಗಿದೆ.

Will Yash’s Toxic be a 3-hour 20-minute spectacle?
ಟಾಕ್ಸಿಕ್ ಸಿನಿಮಾ ಚೊಚ್ಚಲ ಹಾಡು ರಿಲೀಸ್: ಭಾರೀ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿಸಿದ 'ಜೀ ಮ್ಯೂಸಿಕ್'!

ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚಿತ್ರದ ರನ್‌ಟೈಮ್ ಕೂಡ ಬಹಳ ಮುಖ್ಯ ಎನಿಸುತ್ತಿದೆ. ಪ್ರೇಕ್ಷಕರಿಗೆ 2 ಗಂಟೆಗಿಂತ ಹೆಚ್ಚು ಹೊತ್ತು ಚಿತ್ರಮಂದಿರಗಳಲ್ಲಿ ಕೂರಲು ಕಷ್ಟ ಎನ್ನುವಂತಾಗಿದೆ. ಹಾಗಾಗಿ ಬೇಗ ಕಥೆ ಹೇಳಿ ಮುಗಿಸಬೇಕು. ಕೊಂಚ ಎಡವಟ್ಟು ಆಗಿಬಿಟ್ರು ಸಿನಿಮಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಆದಾಗ್ಯೂ ಇತ್ತೀಚೆಗೆ 3 ಗಂಟೆಗೂ ಹೆಚ್ಚು ರನ್‌ಟೈಮ್ ಇರುವ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿವೆ. 'ಅನಿಮಲ್' ಸಿನಿಮಾ ಕಾಲಾವಧಿ 3 ಗಂಟೆ 21 ನಿಮಿಷ ಅಂದಾಗ ಸಾಕಷ್ಟು ಜನ ಹುಬ್ಬೇರಿಸಿದ್ದರು. ಆದರೆ ಸಿನಿಮಾ ನೋಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗಲ್ಲ ಎಂದು ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಅದೇ ರೀತಿ 'ಪುಷ್ಪ- 2' ಸಿನಿಮಾ ರನ್‌ಟೈಮ್ ಕೂಡ ಹೆಚ್ಚು ಕಮ್ಮಿ 3 ಗಂಟೆ 20 ನಿಮಿಷ ಇತ್ತು. ಅಲ್ಲು ಅರ್ಜುನ್ ನಟಿಸಿದ ಆ ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸೂಪರ್ ಹಿಟ್ 'ಧುರಂಧರ್' ಸಿನಿಮಾ ರನ್‌ಟೈಮ್ 3 ಗಂಟೆ 34 ನಿಮಿಷ. ಆದರೂ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.

ಸದ್ಯ 'ಟಾಕ್ಸಿಕ್' ಸಿನಿಮಾ ರನ್‌ಟೈಮ್ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಇನ್ನು ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಬಳಿಕ ರನ್‌ಟೈಮ್ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತದೆ. USA ಸಿನಿಮಾ ಚೈನ್ AMC ಥಿಯೇಟರ್ಸ್ ಪ್ರಕಾರ 'ಟಾಕ್ಸಿಕ್' ಸಿನಿಮಾ ರನ್‌ಟೈನ್ 3 ಗಂಟೆ 20 ನಿಮಿಷ ಎನ್ನಲಾಗುತ್ತಿದೆ. ತನ್ನ ವೆಬ್‌ಸೈಟ್‌ನಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ರನ್‌ಟೈಮ್ ನಮೂದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com