ನುಂಗಂಬಾಕ್ಕಂ ಹೋಟಲ್‌ನಲ್ಲಿ ನಟ ವಿಜಯ್-ತ್ರಿಷಾ ಒಟ್ಟಿಗೆ ಇದ್ದಿದ್ದನ್ನು ನೋಡಿದ್ದೇನೆ; Video Viral!

ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿರುವ ನಟ ವಿಜಯ್ ಅವರ ಕುಟುಂಬ ಸಂಬಂಧದ ಕುರಿತು ಯೂಟ್ಯೂಬ್ ಚಾನೆಲ್‌ಗೆ BJP ಮಾಜಿ ಕಾರ್ಯಕಾರಿಣಿ ತಿರುಚ್ಚಿ ಸೂರ್ಯ ನೀಡಿದ ಸಂದರ್ಶನ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Vijay-Trisha
ವಿಜಯ್-ತ್ರಿಷಾ
Updated on

ಚೆನ್ನೈ: ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿರುವ ನಟ ವಿಜಯ್ (Vijay) ಅವರ ಕುಟುಂಬ ಸಂಬಂಧದ ಕುರಿತು ಯೂಟ್ಯೂಬ್ ಚಾನೆಲ್‌ಗೆ BJP ಮಾಜಿ ಕಾರ್ಯಕಾರಿಣಿ ತಿರುಚ್ಚಿ ಸೂರ್ಯ ನೀಡಿದ ಸಂದರ್ಶನ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡು ರಾಜಕೀಯದಲ್ಲಿ 'ಕಮಾಂಡರ್' ಆಗಿ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವ ವಿಜಯ್ ಗೆ ಈಗ ವೈಯಕ್ತಿಕ ವಿಚಾರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಮತ್ತೊಂದೆಡೆ ನಟನ ವಿರುದ್ಧ ತಿರುಚ್ಚಿ ಸೂರ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಾನು ಪ್ರತಿ ವಾರ ಪಾರ್ಟಿಗಳಲ್ಲಿ ಭಾಗವಹಿಸಲು ತಿರುಚ್ಚಿಯಿಂದ ಚೆನ್ನೈಗೆ ವಿಮಾನದಲ್ಲಿ ಹೋಗುತ್ತಿದ್ದೆ. ಆಗ ನಡೆದ ಎಲ್ಲಾ ಘಟನೆಗಳು ನನಗೆ ತಿಳಿದಿವೆ. ಆ ನಟಿ ಸ್ಟಾರ್ ಹೋಟೆಲ್‌ನ ಕಾರ್ ಪಾರ್ಕ್‌ನಲ್ಲಿ ಕುಡಿದ ಅಮಲಿನಲ್ಲಿ ಮಾಡಿದ ಎಲ್ಲಾ ಗದ್ದಲವನ್ನು ನಾನು ನೇರವಾಗಿ ನೋಡಿದ್ದೇನೆ ಎಂದು ತಿರುಚ್ಚಿ ಸೂರ್ಯ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ವಿಜಯ್ ಹಾಗೂ ತ್ರಿಷಾ (Trisha) ಅವರನ್ನು ಒಂದೇ ಹೋಟೆಲ್​​​ನಲ್ಲಿ ನೋಡಿದ್ದೇನೆ. ಈ ಹೇಳಿಕೆ ಬಳಿಕ ವಿಜಯ್ ಹಾಗೂ ತ್ರಿಷಾ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ನಾನು ಅವರನ್ನು ಎಲ್ಲಿ ನೋಡಿದ್ದೇನೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನಾನು ಅದನ್ನು ಕೋರ್ಟ್​​ಗೆ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಮತ್ತಷ್ಟು ಪ್ರಶ್ನೆಗಳನ್ನು ಎತ್ತಿದ ತಿರುಚ್ಚಿ ಸೂರ್ಯ, ವಿಜಯ್ ಮನೆಯಲ್ಲಿ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಇರುವುದಿಲ್ಲ ಎಂದು ಅವರ ಆಪ್ತರು ಹೇಳುತ್ತಾರೆ. ಸುಜಿ ಲೀಕ್ಸ್‌ನಲ್ಲಿ ಮಾಡಲಾದ ಆರೋಪಗಳ ವಿರುದ್ಧ ವಿಜಯ್ ಇಲ್ಲಿಯವರೆಗೆ ಯಾವುದೇ ಮಾನನಷ್ಟ ಮೊಕದ್ದಮೆ ಹೂಡಿಲ್ಲ ಏಕೆ? ಎಂದು ಕೇಳಿದ್ದಾರೆ. ಈ ಘಟನೆಗಳು ಸೆಪ್ಟೆಂಬರ್ 2022ರಲ್ಲೇ ಆರಂಭವಾಗಿತ್ತು. ನಟಿಯಿಂದ ದೂರವಿರುವಂತೆ ವಿಜಯ್ ಗೆ ಸಂಗೀತಾ ಹೇಳಿದ್ದರು. ಅಂದಿನಿಂದ ವಿಜಯ್ ಪತ್ನಿಯನ್ನು ಆರ್ಥಿಕವಾಗಿ ಬಂಧಿಸಿದರು. ಪತ್ನಿಯ ಚಲನವಲನಗಳನ್ನು ನಿರ್ಬಂಧಿಸುವುದು ಆಕೆಯನ್ನು ಕೋಣೆಯಲ್ಲಿ ಬಂಧಿಸುವುದು...ಸಾಮಾಜಿಕ ನ್ಯಾಯದ ಬಗ್ಗೆ ನೀವು ಮಾತನಾಡುತ್ತಿರುವುದು ಇದೇನಾ? ಎಂದು ಸೂರ್ಯ, ವಿಜಯ್ ಅವರ ರಾಜಕೀಯ ನೀತಿಗಳನ್ನು ಟೀಕಿಸಿದರು.

Vijay-Trisha
ಪತ್ನಿ ಡಿವೋರ್ಸ್ ಗೆ ಅರ್ಜಿ ಹಾಕಿದ ಬೆನ್ನಲ್ಲೇ ತ್ರಿಷಾ ಕೃಷ್ಣನ್ ಜೊತೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ದಳಪತಿ ವಿಜಯ್; Video

ನೀವು ಕಟ್ಟಿಕೊಂಡ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ನೀವು ದೇಶವನ್ನು ಹೇಗೆ ಆಳುತ್ತೀರಿ?" ಇದು ಕೇವಲ ವದಂತಿಯಲ್ಲ. ಡಿಸೆಂಬರ್‌ನಲ್ಲಿಯೇ ಸಂಗೀತಾ ಕಡೆಯಿಂದ ಕ್ರಮಗಳು ಪ್ರಾರಂಭವಾದವು. ಈಗ ನ್ಯಾಯಾಲಯದ ಮೂಲಕ ವಿಜಯ್‌ಗೆ ನೋಟಿಸ್ ಕಳುಹಿಸಲಾಗಿದೆ. ಈ 'ಕುಬ್ಜ' ಜನಸಮೂಹಕ್ಕೆ ಸತ್ಯ ಅರ್ಥವಾಗುತ್ತದೆ. ಇದು 'ತಮಿಳಗ ವೆಟ್ರಿ ಕಳಗಂ' ಕಾರ್ಯಕರ್ತರಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com