IN PICS | ಲೆಬನಾನ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ!

Online Team

ಹಿಜ್ಬೊಲ್ಲಾ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಸೋಮವಾರ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 25, 2024, ಬುಧವಾರ, ಲೆಬನಾನ್‌ನ ದಕ್ಷಿಣ ಪಟ್ಟಣವಾದ ಜಿಯೆಹ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಹಾನಿಗೀಡಾದ ಸ್ಥಳದ ದೃಶ್ಯ.

ದಕ್ಷಿಣ ಲೆಬನಾನ್‌ನ ಮಹ್ಮೌದಿಹ್ ಪರ್ವತದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ದೃಶ್ಯ.

ಹೈಫಾ, ಉತ್ತರ ಇಸ್ರೇಲ್ ನಲ್ಲಿ, ಸೋಮವಾರ, ಸೆಪ್ಟೆಂಬರ್. 23, 2024 ರಂದು ಲೆಬನಾನ್‌ನಿಂದ ಉಡಾವಣೆಯಾದ ರಾಕೆಟ್‌ಗಳನ್ನು ಇಸ್ರೇಲಿ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯು ಪ್ರತಿಬಂಧಿಸಿದ ದೃಶ್ಯ.

ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಮಂಗಳವಾರ, ಸೆಪ್ಟೆಂಬರ್ 24, 2024 ರಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಹಾನಿಗೀಡಾದ ಸ್ಥಳವನ್ನು ನಿವಾಸಿಗಳು ಪರಿಶೀಲಿಸುತ್ತಿದ್ದ ದೃಶ್ಯ.

ಮಂಗಳವಾರ, ಸೆಪ್ಟೆಂಬರ್ 24, 2024 ರಂದು ದಕ್ಷಿಣ ಲೆಬನಾನ್‌ನ ಮಾರ್ಜಯೂನ್ ಪಟ್ಟಣದಿಂದ ಕಂಡಂತೆ, ಖಿಯಾಮ್ ಕಣಿವೆಯಲ್ಲಿ ಇಸ್ರೇಲ್ ವಾಯುದಾಳಿ ನಡೆಸಿದ ದೃಶ್ಯ.

ಲೆಬನಾನ್‌ನ ದಕ್ಷಿಣದ ಅಕ್ಬೀಹ್‌ನಲ್ಲಿ ಮಂಗಳವಾರ, ಸೆಪ್ಟೆಂಬರ್ 24, 2024 ರಂದು ಇಸ್ರೇಲಿ ವೈಮಾನಿಕ ದಾಳಿಗೆ ಸಿಲುಕಿದ ಕಟ್ಟಡದ ಅವಶೇಷಗಳ ಮೇಲೆ ನಿಂತು ವ್ಯಕ್ತಿ ಪ್ರತಿಕ್ರಿಯಿಸಿದ ದೃಶ್ಯ.

ಲೆಬನಾನ್‌, ಬೈರುತ್ ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯ ಮಧ್ಯೆ, ದಕ್ಷಿಣದ ಪಟ್ಟಣಗಳಿಂದ ನಿವಾಸಿಗಳು ತಮ್ಮ ಕಾರಿನ ಮೇಲೆ ತಮ್ಮ ಸಾಮಾನುಗಳನ್ನು ಹಾಕಿಕೊಂಡು ನಗರ ತೊರೆಯುತ್ತಿದ್ದ ದೃಶ್ಯ.

ಉತ್ತರ ಇಸ್ರೇಲ್‌ನ ಕಿರ್ಯಾತ್ ಹೈಮ್‌ನಲ್ಲಿ ಮಂಗಳವಾರ, ಸೆಪ್ಟೆಂಬರ್ 24, 2024 ರಂದು ಲೆಬನಾನ್‌ನಿಂದ ಹಾರಿಸಲಾದ ರಾಕೆಟ್‌ಗಳಿಂದ ಸುರಕ್ಷಿತವಾಗಿರಲು ಇಸ್ರೇಲಿಗಳು ವಸತಿ ಕಟ್ಟಡದ ಬಾಂಬ್ ಶೆಲ್ಟರ್ ಗಳಲ್ಲಿ ಆಶ್ರಯ ಪಡೆದ ದೃಶ್ಯ.

ಲೆಬನಾನ್‌ನ ಸಿಡಾನ್‌ನಲ್ಲಿ ಸೋಮವಾರ, ಸೆಪ್ಟೆಂಬರ್ 23, 2024 ರಂದು, ಇಸ್ರೇಲಿ ವೈಮಾನಿಕ ದಾಳಿಯ ನಡುವೆ ದಕ್ಷಿಣದ ಪಟ್ಟಣಗಳಿಂದ ನಿವಾಸಿಗಳು ನಗರ ತೊರೆಯುತ್ತಿದ್ದ ದೃಶ್ಯ. ಇದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.

ಲೆಬನಾನ್ ಬಿಟ್ಟು ಹೊರಡಿ; ನೇತನ್ಯಾಹು ಎಚ್ಚರಿಕೆ