ಕನ್ನಡದ ನಿರೂಪಕಿ ಅನುಶ್ರೀ ಅವರು ಅದ್ಧೂರಿಯಾಗಿ ದಾಂಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ.
ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಒಂದು ಹಂತದ ಜವಾಬ್ದಾರಿಗಳನ್ನು ಮುಗಿಸಿ ಸಾಧನೆ ಮಾಡಿದ ನಂತರ ಅನುಶ್ರೀ ಮದುವೆಯಾಗಿದ್ದು ರೋಷನ್ ತಾಳಿ ಕಟ್ಟುವ ವೇಳೆ ಭಾವುಕರಾದರು
ಅನುಶ್ರೀ ವಿವಾಹಕ್ಕೆ ನಟ ಶಿವರಾಜ್ ಕುಮಾರ್ ದಂಪತಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟ-ನಟಿಯರು, ಸೆಲೆಬ್ರಿಟಿಗಳು ಆಗಮಿಸಿದ್ದರು.
ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ.
ವಧು ಅನುಶ್ರೀ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ ವರ ರೋಷನ್ ಹಳದಿ ಒತ್ತಿದ ಬಿಳಿ ಬಣ್ಣದ ರೇಷ್ಮೆ ಪಂಚೆ ಮತ್ತು ಜುಬ್ಬಾ ಧರಿಸಿದ್ದರು.
ನಟಿ ಮತ್ತು ಕನ್ನಡದ ಬಲು ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ, ಕೆಲವು ವರ್ಷಗಳ ಹಿಂದೆ ರೋಷನ್ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಇಂದು ವಿವಾಹವಾಗಿದ್ದಾರೆ.
ಅನುಶ್ರೀ, ನಟ ಪುನೀತ್ ರಾಜ್ಕುಮಾರ್ ಅವರ ಬಲು ದೊಡ್ಡ ಅಭಿಮಾನಿ. ಅನುಶ್ರೀ ಹಾಗೂ ರೋಷನ್ ವಿವಾಹವಾಗುತ್ತಿರುವ ಹಾಲ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದೆ.
ಅನುಶ್ರೀ ಮದುವೆ ಫೋಟೋ
ಅನುಶ್ರೀ-ರೋಷನ್ ಮದುವೆ, ಅರಶಿನ ಶಾಸ್ತ್ರ ಹಾಗೂ ವಿವಾಹದ ಕರೆಯೋಲೆ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.