Anchor Anushree Marriage: ರೋಷನ್ ಜೊತೆ ಸಪ್ತಪದಿ ತುಳಿದ ಆ್ಯಂಕರ್ ಅನುಶ್ರೀ

ಇಷ್ಟು ದಿನ ಅನುಶ್ರೀ ಹೋದಲ್ಲಿ ಬಂದಲ್ಲಿ ಅವರ ಅಭಿಮಾನಿಗಳು, ಮಾಧ್ಯಮದವರು ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು.
Anchor Anushree-Roshan marriage
ಆ್ಯಂಕರ್ ಅನುಶ್ರೀ-ರೋಷನ್ ವಿವಾಹ
Updated on

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಇಂದು ವಿವಾಹವಾಗಿದ್ದಾರೆ. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ. ಅನುಶ್ರೀ ಅವರು ತಾವು ಯಾವ ರೀತಿಯಲ್ಲಿ ಮದುವೆ ಆಗಬೇಕು ಎಂದು ಕನಸು ಕಂಡಿದ್ದರೋ ಅದೇ ರೀತಿಯಲ್ಲಿ ಮದುವೆ ಆಗಿದ್ದಾರೆ.

ಇಷ್ಟು ದಿನ ಅನುಶ್ರೀ ಹೋದಲ್ಲಿ ಬಂದಲ್ಲಿ ಅವರ ಅಭಿಮಾನಿಗಳು, ಮಾಧ್ಯಮದವರು ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು. ಸೂಕ್ತ ಹುಡುಗ ಸಿಕ್ಕಿದಾಗ ಎಂದು ನಗುತ್ತಲೇ ಉತ್ತರಿಸುತ್ತಿದ್ದ ಅನುಶ್ರೀ ಕೊನೆಗೂ ರೋಷನ್ ಎಂಬುವವರ ಜೊತೆ ವಿವಾಹವಾಗಿದ್ದಾರೆ.

Anchor Anushree-Roshan marriage
ಇಂದು ಹಸೆಮಣೆ ಏರಲಿರುವ ಆ್ಯಂಕರ್ ಅನುಶ್ರೀ: ಹಳದಿ ಶಾಸ್ತ್ರ-Photos

ನಿರೂಪಕಿ ಅನುಶ್ರೀ ಹಾಗೂ ರೋಷನ್​ ಅದ್ಧೂರಿ ಮದುವೆಗೆ  ಶಿವರಾಜ್ ಕುಮಾರ್, ರಾಜ್​ ಬಿ ಶೆಟ್ಟಿ, ಶರಣ್, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ. 

ತಾಳಿ ಕಟ್ಟುವ ವೇಳೆ ಭಾವುಕ

ಶಾಲಾ-ಕಾಲೇಜು ದಿನಗಳಲ್ಲಿ ಕಷ್ಟದಲ್ಲಿ ಜೀವನ ಸಾಗಿಸಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಬೆಂಗಳೂರಿಗೆ ಬಂದು ಚಿತ್ರರಂಗ, ಕನ್ನಡ ಕಿರುತೆರೆಯಲ್ಲಿ ಕಷ್ಟಪಟ್ಟು ವೃತ್ತಿ ಕಂಡುಕೊಂಡು ಇಂದು ಸ್ಟಾರ್ ನಿರೂಪಕಿಯಾಗಿ ಬೆಳೆದು ನಿಂತಿರುವ ಅನುಶ್ರೀ ವೈಯಕ್ತಿಕ ಜೀವನದಲ್ಲಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿ ವಹಿಸಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಜವಾಬ್ದಾರಿಗಳನ್ನು ನಿರ್ವಹಿಸಿ ಮದುವೆಯಾಗುವ ವೇಳೆ ಅನುಶ್ರೀ ಭಾವುಕರಾಗಿದ್ದು ಕಂಡುಬಂತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com