ವಯಸ್ಸಾದವರಲ್ಲಿ ಶ್ರವಣದೋಷವು ಸಾಮಾನ್ಯ ಸಮಸ್ಯೆಯಾಗಿದೆ. ಮೊದಲಿಗೆ ಸ್ವಲ್ಪದರಲ್ಲಿ ಪ್ರಾರಂಭವಾಗಿ ನಂತರ ತೀವ್ರ ಮಟ್ಟದವರೆಗೆ ಸಮಸ್ಯೆ ಇರುತ್ತದೆ. .ವಯಸ್ಸಾದವರು ಕಿವಿ ಕೇಳಿಸದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅವರ ಕುಟುಂಬದವರು ಸಹ ಅಸಡ್ಡೆ ಮಾಡುತ್ತಾರೆ. .ಮನುಷ್ಯನಿಗೆ ದೃಷ್ಟಿಹೀನತೆ ಸಮಸ್ಯೆ ಬಂದರೆ ಅದರ ಕಡೆಗೆ ತಕ್ಷಣದ ಗಮನ ನೀಡುತ್ತಾರೆ. ಆದರೆ ವಯಸ್ಸಾದವರಲ್ಲಿ ಶ್ರವಣ ನಷ್ಟವನ್ನು ನಿರ್ಲಕ್ಷಿಸುತ್ತಾರೆ. .ವ್ಯಕ್ತಿಗೆ ಶ್ರವಣ ದೋಷ ಉಂಟಾದಾಗ ಸಾಮಾಜಿಕ ಕೌಶಲ್ಯ ಕೂಡ ಕಡಿಮೆಯಾಗುತ್ತದೆ. ಬೇರೆಯವರು ಅವರನ್ನು ಅಷ್ಟಾಗಿ ಮಾತನಾಡಿಸುವುದಿಲ್ಲ, ಹೀಗಾದಾಗ ಅವರು ಪ್ರತ್ಯೇಕವಾಗುತ್ತಾರೆ. .ಶ್ರವಣದೋಷವುಳ್ಳವರೊಂದಿಗೆ ಸಂಭಾಷಣೆ ನಡೆಸುವಾಗ, ಅವರಿಗೆ ಸಂಭಾಷಣೆಯಲ್ಲಿ ಸ್ಪಷ್ಟತೆ ಸಿಗದಿದ್ದಾಗ ಅವರು ಸುಮ್ಮನೆ ನಗುವುದನ್ನು ಅನೇಕ ಬಾರಿ ಗಮನಿಸುತ್ತೇವೆ. .ದಿನನಿತ್ಯದ ಚಟುವಟಿಕೆಗಳಲ್ಲಿ ಮಾತನಾಡುವ ಮತ್ತು ಸಕ್ರಿಯ ಸಂಭಾಷಣೆಗಳನ್ನು ಆಲಿಸುವ ಅಗತ್ಯವಿದೆ. ಇದು ಅವರನ್ನು ಮಾನಸಿಕವಾಗಿ ತೊಡಗಿಸಿಕೊಳ್ಳುತ್ತದೆ..ಶ್ರವಣದೋಷದಿಂದಾಗಿ ಬುದ್ಧಿಮಾಂದ್ಯತೆ ಮತ್ತು ಖಿನ್ನತೆಯು ಉಲ್ಬಣಗೊಳ್ಳಬಹುದು. ಶ್ರವಣದೋಷವುಳ್ಳವರಿಗೆ ಸರಿಯಾದ ಸಮಯದಲ್ಲಿ ಸಲಹೆ ನೀಡುವುದು ಹೆಚ್ಚು ಅಗತ್ಯ..ಶ್ರವಣ ನಷ್ಟದ ಸ್ವರೂಪ ಮತ್ತು ಸಂಭವನೀಯ ಪರಿಹಾರಗಳನ್ನು ಅವರು ಅರ್ಥಮಾಡಿಕೊಳ್ಳಲು ಸೂಕ್ತವಾದ ಶ್ರವಣ ಮೌಲ್ಯಮಾಪನದ ಅಗತ್ಯವಿದೆ..ಶ್ರವಣದೋಷಕ್ಕೆ ಪರಿಹಾರವಾಗಿ ಹಿಯರಿಂಗ್ ಏಡ್ ಸಾಧನಗಳು ಸೇರಿದಂತೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳು ಲಭ್ಯವಿವೆ. .ಶ್ರವಣದೋಷ ಅಸಡ್ಡೆ ಬೇಡ...