Representational image
ಸಾಂದರ್ಭಿಕ ಚಿತ್ರ

ಶ್ರವಣದೋಷ ಅಸಡ್ಡೆ ಬೇಡ...

ವ್ಯಕ್ತಿಗೆ ಶ್ರವಣ ದೋಷ ಉಂಟಾದಾಗ ಸಾಮಾಜಿಕ ಕೌಶಲ್ಯ ಕೂಡ ಕಡಿಮೆಯಾಗುತ್ತದೆ. ಬೇರೆಯವರು ಅವರನ್ನು ಅಷ್ಟಾಗಿ ಮಾತನಾಡಿಸುವುದಿಲ್ಲ, ಹೀಗಾದಾಗ ಅವರು ಪ್ರತ್ಯೇಕವಾಗುತ್ತಾರೆ.
Published on

ಬೆಂಗಳೂರು: ವಯಸ್ಸಾದವರಲ್ಲಿ ಶ್ರವಣದೋಷವು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಆರಂಭದಲ್ಲಿ ಸೌಮ್ಯ ಗಾತ್ರದಿಂದ ಹಿಡಿದು ತೀವ್ರ - ಆಳವಾದ ಮಟ್ಟಗಳವರೆಗೆ ಶ್ರವಣದೋಷ ಸಮಸ್ಯೆ ಇರುತ್ತದೆ. ವಯಸ್ಸಾದವರು ಕಿವಿ ಕೇಳಿಸದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅವರ ಕುಟುಂಬದವರು ಸಹ ಅಸಡ್ಡೆ ಮಾಡುತ್ತಾರೆ. ಮನುಷ್ಯನಿಗೆ ದೃಷ್ಟಿಹೀನತೆ ಸಮಸ್ಯೆ ಬಂದರೆ ಅದನ್ನು ಹೊಂದಿರುವ ವ್ಯಕ್ತಿ ಕಡೆಗೆ ತಕ್ಷಣದ ಗಮನ ನೀಡುತ್ತಾರೆ. ಆದರೆ ವಯಸ್ಸಾದವರಲ್ಲಿ ಶ್ರವಣ ನಷ್ಟವನ್ನು ತಡವಾಗಿ ಅಥವಾ ಎಂದಿಗೂ ಪರಿಹರಿಸುವುದಿಲ್ಲ.

ವ್ಯಕ್ತಿಗೆ ಶ್ರವಣ ದೋಷ ಉಂಟಾದಾಗ ಸಾಮಾಜಿಕ ಕೌಶಲ್ಯ ಕೂಡ ಕಡಿಮೆಯಾಗುತ್ತದೆ. ಬೇರೆಯವರು ಅವರನ್ನು ಅಷ್ಟಾಗಿ ಮಾತನಾಡಿಸುವುದಿಲ್ಲ, ಹೀಗಾದಾಗ ಅವರು ಪ್ರತ್ಯೇಕವಾಗುತ್ತಾರೆ. ಶ್ರವಣದೋಷವುಳ್ಳ ಹಿರಿಯರೊಂದಿಗೆ ಸಂಭಾಷಣೆ ನಡೆಸುವಾಗ, ಸಂಭಾಷಣೆಯಲ್ಲಿ ಸ್ಪಷ್ಟತೆಯನ್ನು ಹೊಂದಲು ಸಾಧ್ಯವಾಗದಿದ್ದಾಗ ಅಥವಾ ವಿಭಿನ್ನವಾಗಿ ಉತ್ತರಿಸಲು ಸಾಧ್ಯವಾಗದಿದ್ದಾಗ ಅವರು ನಗುವುದನ್ನು ನಾವು ಅನೇಕ ಬಾರಿ ಗಮನಿಸುತ್ತೇವೆ. ದಿನನಿತ್ಯದ ಚಟುವಟಿಕೆಗಳಿಗೆ ಮಾತನಾಡುವ ಭಾಷೆ ಮತ್ತು ಸಕ್ರಿಯ ಸಂಭಾಷಣೆಗಳನ್ನು ಆಲಿಸುವ ಅಗತ್ಯವಿದೆ, ಇದು ಅವರನ್ನು ಮಾನಸಿಕವಾಗಿ ತೊಡಗಿಸಿಕೊಳ್ಳುತ್ತದೆ ಮತ್ತು ಉತ್ತಮ ಸ್ಮರಣೆಯನ್ನು ಹೊಂದಲು ಸಹಾಯ ಮಾಡುತ್ತದೆ.

ಶ್ರವಣ ನಷ್ಟದ ಸ್ವರೂಪ ಮತ್ತು ಸಂಭವನೀಯ ಪರಿಹಾರಗಳನ್ನು ಅವರು ಅರ್ಥಮಾಡಿಕೊಳ್ಳಲು ನಿರಂತರ ಸೂಕ್ತವಾದ ಶ್ರವಣ ಮೌಲ್ಯಮಾಪನದ ಅಗತ್ಯವಿದೆ. ಶ್ರವಣದ ಪರಿಹಾರಗಳು ಶ್ರವಣ ಸಾಧನದಂತೆ ಸರಳದಿಂದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯವರೆಗೆ ಇರುತ್ತದೆ. ವಯಸ್ಸಾದವರಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನ್ನು ಅವರು ಶ್ರವಣ ಸಾಧನದಿಂದ ಪ್ರಯೋಜನ ಪಡೆಯದ ಸಂದರ್ಭಗಳಲ್ಲಿ ಮಾಡಲಾಗುತ್ತದೆ.

ವಯಸ್ಸಾದವರಲ್ಲಿ ಶ್ರವಣದೋಷದಿಂದಾಗಿ ಬುದ್ಧಿಮಾಂದ್ಯತೆ ಮತ್ತು ಖಿನ್ನತೆಯು ಉಲ್ಬಣಗೊಳ್ಳಬಹುದು. ಶ್ರವಣದೋಷವುಳ್ಳವರಿಗೆ ಸರಿಯಾದ ಸಮಯದಲ್ಲಿ ಸಲಹೆ ನೀಡುವುದು ಹೆಚ್ಚು ಅಗತ್ಯವಿದೆ.

(ಲೇಖಕರು ಹಿರಿಯ ಸಲಹೆಗಾರರು - ಇಎನ್ಟಿ ಮತ್ತು ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ, ಆಸ್ಟರ್ ಆರ್ ವಿ ಆಸ್ಪತ್ರೆ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com