Los Angeles Wildfire: ಮನೆಗಳು ಭಸ್ಮ, ಸಾವಿರಾರು ಮಂದಿ ಸ್ಥಳಾಂತರ!
Srinivas Rao BV
ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಸಂಭವಿಸಿರುವ ಕಾಡ್ಗಿಚ್ಚು ಭಾರಿ ಅನಾಹುತ ಉಂಟು ಮಾಡಿದೆ.
ಕಾಡ್ಗಿಚ್ಚಿಗೆ ಮನೆಗಳು ಆಹುತಿಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿರುವ ಸ್ಥಳೀಯ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.
ಪ್ರತಿ ಗಂಟೆಗೆ 60 ಕಿ.ಮೀ ವೇಗವಾಗಿ ಬೀಸುತ್ತಿರುವ ಗಾಳಿಯೊಂದಿಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಿದೆ. ಅಗ್ನಿಶಾಮಕ ದಳ ತಂಡಗಳು ಕಾಡ್ಗಿಚ್ಚು ನಂದಿಸಲು ಹರಸಾಹಸಪಡುತ್ತಿವೆ.
ಪ್ರಕೃತಿ ಸಂರಕ್ಷಿತ ಪ್ರದೇಶವನ್ನೂ ಬೆಂಕಿ ವ್ಯಾಪಿಸಿದೆ. ಲಾಸ್ ಏಂಜಲಿಸ್ ನ ಪೆಸಿಫಿಕ್ ಪ್ಯಾಲಿಸೇಡ್ಸ್ ನೆರೆಹೊರೆಯಲ್ಲಿ 1200 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶ ಈಗಾಗಲೇ ಕಾಡ್ಗಿಚ್ಚಿನಿಂದ ನಾಶವಾಗಿವೆ.
ಕಾಡ್ಗಿಚ್ಚು ಸಂಭವಿಸಿರುವ ಪ್ರದೇಶದಿಂದ 30,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.