Bengaluru Rain: ರಸ್ತೆಗಳು ಜಲಾವೃತ, JCB, Tractor ಗಳಲ್ಲಿ ಅಧಿಕಾರಿಗಳ ಪರಿಶೀಲನೆ

Srinivas Rao BV

ಬೆಂಗಳೂರಿನಲ್ಲಿ ನೆನ್ನೆ ಸುರಿದ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ.

Silk board Junction ನಲ್ಲಿ ರಸ್ತೆ ಜಲಾವೃತಗೊಂಡಿದ್ದು, ಮಳೆ ನೀರನ್ನು ಜೆಸಿಬಿ ಮೂಲಕ ಹೊರ ಹಾಕುವ ಪ್ರಯತ್ನ

ರಸ್ತೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಟ್ರ್ಯಾಕ್ಟರ್, ಜೆಸಿಬಿಗಳನ್ನು ಬಳಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಜೆಸಿಬಿ ಮೇಲೆ ನಿಂತು ಪರಿಶೀಲಿಸುತ್ತಿರುವ ಬೈರತಿ ಬಸವರಾಜ್

ನಗರದ ಸಾಯಿ ಲೇಔಟ್​​ಗೆ ಜಲ ಕಂಟಕ ಎದುರಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.

ಮಳೆಯಿಂದಾಗಿ ಜಲಾವೃತಗೊಂಡಿರುವ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಜನ

ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ.

ಭಾರೀ ಮಳೆ: ನಗರದ ಸಾಯಿ ಲೇಔಟ್ ಜಲಾವೃತ