ಜಿಮ್ ಟ್ರೇನರ್ ಜೊತೆ ಸದ್ದಿಲ್ಲದೆ ಮದುವೆಯಾದ ನಟಿ ರಜಿನಿ; ಇಲ್ಲಿದೆ ಅದ್ದೂರಿ ಫೋಟೋಗಳು!
Vishwanath S
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತ ವರ್ಷಿಣಿ ಮೂಲಕ ನಟನೆಗೆ ಕಾಲಿಟ್ಟ ನಟಿ ರಜಿನಿ ಅವರು, ಜಿಮ್ ಟ್ರೇನರ್ ಅರುಣ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಜಿನಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿದ್ದು, 'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇಂದಿಗೂ ರಜಿನಿ ಅವರನ್ನು ಜನರು ಅಮೃತ ಎಂದೇ ಗುರುತಿಸುವುದುಂಟು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಜಿನಿ ಅವರು, ಜಿಮ್ ಟ್ರೇನರ್ ಅರುಣ್ ಅವರೊಂದಿಗೆ ಸಾಕಷ್ಟು ರೀಲ್ಸ್ ಗಳನ್ನು ಮಾಡುತ್ತಿದ್ದರು.
ರೀಲ್ಸ್ ನೋಡಿದ ಅಭಿಮಾನಿಗಳು ಇಬ್ಬರು ಡೇಟಿಂಗ್ ನಲ್ಲಿದ್ದಾರೆಂದು ಹೇಳುತ್ತಿದ್ದರು, ಈ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಿದ್ದರೂ, ರಜಿನಿಯವರು ನಿರಾಕರಿಸುತ್ತಲೇ ಬಂದಿದ್ದರು. ಆದರೆ, ಅಂತಿಮವಾಗಿ ಅರುಣ್ ಅವರೊಂದಿಗೆ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ.
ಇಂದು ರಜಿನಿ ಹಾಗೂ ಅರುಣ್ ವಿವಾಹ ನೆರವೇರಿದೆ. ಕೇವಲ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ಶಾಸ್ತ್ರ ನಡೆದಿದೆ. ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.