Ramyashree GN
ಸ್ಟೀಲ್ ಕಟ್ ಓಟ್ಸ್, ಒಡೆದ ಗೋಧಿ, ಕ್ವಿನೋವಾ, ಬ್ರೌನ್ ರೈಸ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಫೈಬರ್ ಸೇವನೆ ಹೆಚ್ಚಿಸಿದರೆ ಮಲಬದ್ಧತೆ ದೂರಾಗುತ್ತದೆ.
ಸೇಬು, ಕಿತ್ತಳೆ, ಬೆರ್ರಿ, ದ್ರಾಕ್ಷಿ, ಕಿವಿ, ಪೇರಳೆ ಮತ್ತು ಬಾಳೆಹಣ್ಣುಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಮಲಬದ್ಧತೆಯನ್ನು ದೂರ ಮಾಡುತ್ತವೆ.
ಫೈಬರ್ ತುಂಬಿದ ತರಕಾರಿಗಳು ಜೀರ್ಣಕ್ರಿಯೆಯನ್ನು ಉತ್ತಮ ಸ್ಥಿತಿಯಲ್ಲಿಡುತ್ತವೆ. ಬ್ರೊಕೋಲಿ, ಎಲೆಕೋಸು, ಸಿಹಿ ಗೆಣಸು, ಪಾಲಕ್ ಸೊಪ್ಪು ದೇಹವನ್ನು ಹಗುರವಾಗಿ, ಉತ್ಸಾಹಭರಿತವಾಗಿ, ಆರಾಮದಾಯಕವಾಗಿಡುತ್ತವೆ.
ನೀರು, ತಾಜಾ ಹಣ್ಣಿನ ರಸಗಳು, ಆರೋಗ್ಯಕರ ತರಕಾರಿ ಬ್ಲೆಂಡ್ಸ್/ಸ್ಮೂಥಿಗಳು ಮತ್ತು ಸೂಪ್‌ಗಳು ಸುಗಮ, ಹೆಚ್ಚು ಸಮತೋಲಿತ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತವೆ.
ಇವು ಕರುಳಿನ ಚಲನೆಯನ್ನು ಸರಾಗ ಮತ್ತು ಹೆಚ್ಚು ನಿಯಮಿತವಾಗಿಸುತ್ತವೆ. ಮೊಸರು ಅಥವಾ ಒಂದು ಲೋಟ ಮಜ್ಜಿಗೆಯಂತಹ ಪ್ರೋಬಯಾಟಿಕ್-ಭರಿತ ಆಹಾರದಿಂದಾಗಿ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.
ಒಂದು ಕಪ್ ಕಾಫಿ
ಕಾಫಿ ಸೇವನೆಯು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕೆಫೀನ್ ಕರುಳಿನ ಸ್ನಾಯುಗಳನ್ನು ಸಂಕುಚಿತಗೊಳಿಸಲು ಪ್ರೋತ್ಸಾಹಿಸುತ್ತದೆ.
ಮಸೂರ, ಬೀನ್ಸ್, ಕಾಬುಲ್ ಕಡಲೆ ಮತ್ತು ಬಟಾಣಿ ಅತ್ಯುತ್ತಮ ನಾರಿನಂಶವಿರುವ ಮೂಲಗಳಾಗಿವೆ. ಇದು ಜೀರ್ಣಕ್ರಿಯೆಗೆ ಉತ್ತಮವಾಗಿರುತ್ತದೆ.
ಊಟ ಮಾಡಿದ ನಂತರವೂ ಹಸಿವಾದಾಗ, ಓಟ್ಸ್, ನಟ್ಸ್ ಮತ್ತು ಜೇನುತುಪ್ಪದಿಂದ ತಯಾರಿಸಿದ ಗ್ರಾನೋಲಾ, ನಟ್ಸ್, ಪಾಪ್‌ಕಾರ್ನ್ ಸೇವನೆಯು ದೇಹಕ್ಕೆ ಫೈಬರ್ ಲಭ್ಯವಾಗುವಂತೆ ಮಾಡುತ್ತದೆ.