Masala Dosa: ಮಸಾಲೆ ದೋಸೆಗೆ ಈಗ ವಿಶ್ವಮನ್ನಣೆ

Sumana Upadhyaya

ದೋಸೆ ಸರಳ ಅಷ್ಟೇ ವಿಶೇಷ ತಿನಿಸು. ಅಕ್ಕಿ ಮತ್ತು ಬೇಳೆಯನ್ನು ರುಬ್ಬಿ ಹಿಟ್ಟಿನಿಂದ ತಯಾರಿಸಲ್ಪಡುವ ಈ ದಕ್ಷಿಣ ಭಾರತೀಯ ಆಹಾರ ಗರಿಗರಿ, ಸ್ವಲ್ಪ ಹುಳಿ ರುಚಿ ಮತ್ತು ವೈವಿಧ್ಯತೆಗೆ ಪ್ರಸಿದ್ಧ.

ಆಲೂಗಡ್ಡೆ, ಈರುಳ್ಳಿ, ಬಟಾಣಿ ಮಸಾಲೆಯನ್ನು ತೆಳು, ಗರಿ ದೋಸೆಯೊಳಗೆ ತುಂಬಿ ಚಟ್ನಿ ಮತ್ತು ಸಾಂಬಾರದೊಂದಿಗೆ ತಿಂದರೆ ಸ್ವರ್ಗ ಸುಖ.

ಈಗ ಇದು ಜಾಗತಿಕ ಮಾನ್ಯತೆ ಪಡೆಯುತ್ತಿದೆ. TasteAtlas ವಿಶ್ವದ ಅತ್ಯುತ್ತಮ 50 ಪ್ಯಾನ್ ಕೇಕ್ ಗಳ ಪಟ್ಟಿಯಲ್ಲಿ, ದೋಸೆ ತನ್ನ ಹಲವು ರೂಪಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆ.

ಮಸಾಲ ದೋಸೆ 4.3 ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ರೇಟ್ ಪಡೆದ ಖಾರದ ಪ್ಯಾನ್ ಕೇಕ್ ಗಳಲ್ಲಿ ಒಂದಾಗಿದೆ. ದೋಸೆ 4.2 ರೇಟಿಂಗ್‌ನೊಂದಿಗೆ 15ನೇ ಸ್ಥಾನದಲ್ಲಿದ್ದು, ಅತ್ಯಂತ ಗರಿಗರಿ ಪೇಪರ್ ದೋಸೆ 4.1 ರೇಟಿಂಗ್‌ನೊಂದಿಗೆ 35ನೇ ಸ್ಥಾನ ಪಡೆದಿದೆ.

ಇದು ಭಾರತೀಯ ಅಡುಗೆ ಪದ್ಧತಿಗೆ ಮಹತ್ವದ ಕ್ಷಣವಾಗಿದೆ.

ದಕ್ಷಿಣ ಭಾರತೀಯ ತಿನಿಸು ದೋಸೆ, ಆರೋಗ್ಯ ಮತ್ತು ರುಚಿಯ ದೃಷ್ಟಿಯಿಂದಲೂ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗರಿಗರಿಯಾದ ಈ ದಕ್ಷಿಣ ಭಾರತೀಯ ಪ್ರಿಯ ತಿನಿಸು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.