Ramyashree GN
ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆ ಅಥವಾ ಗಟ್ಟಿಯಾದ, ಒಣ ಅಥವಾ ನೋವಿನಿಂದ ಕೂಡಿದ ಮಲವಿಸರ್ಜನೆಯನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ.
ಪ್ರತಿದಿನ 8 ರಿಂದ 10 ಕಪ್ ನೀರು ಕುಡಿಯಿರಿ. ಕಡಿಮೆ ನೀರು ಕುಡಿಯುವುದು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ.
ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಪ್ರತಿದಿನಕ್ಕೆ 25–38 ಗ್ರಾಂ ಫೈಬರ್ ಅನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳಲ್ಲಿ ಫೈಬರ್ ಅಂಶವಿರುತ್ತದೆ.
ನಿಯಮಿತ ದೈಹಿಕ ಚಟುವಟಿಕೆಯು ನಿಮ್ಮ ಕರುಳಿನಲ್ಲಿ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಶೌಚಾಲಯದಲ್ಲಿ ಮಲವಿಸರ್ಜನೆಗೆ ಕೂರುವಾಗ ಕಾಲಿನ ಕೆಳಗೆ ಸಣ್ಣ ಸ್ಟೂಲ್ ಬಳಸುವುದು ಮಲ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ.
ತೀವ್ರವಾದ, ನಿರಂತರ ಹೊಟ್ಟೆ ನೋವು. ನಿಮ್ಮ ಮಲದಲ್ಲಿ ರಕ್ತ ಅಥವಾ ಗುದನಾಳದ ರಕ್ತಸ್ರಾವ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
ಕೆಲವು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ಸ್ವ-ಆರೈಕೆಗೆ ಸ್ಪಂದಿಸದಿದ್ದರೆ ಅಥವಾ ಅತಿಯಾದ ತೂಕ ನಷ್ಟವಾದರೆ ವೈದ್ಯರನ್ನು ಸಂಪರ್ಕಿಸಿ.