2026ರ ಕಾನ್ ಚಿತ್ರೋತ್ಸವ ಕಳೆಕಟ್ಟಿದೆ. ಕಾನ್ ಚಿತ್ರೋತ್ಸವದ ಸ್ಟಾರ್ ಅಟ್ರ್ಯಾಕ್ಷನ್ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಆಗಮನವಾಗಿದೆ.
ಕಾನ್ ಚಿತ್ರೋತ್ಸವಕ್ಕೆ ಕ್ವೀನ್ ಆಗಮನವಾಗಿದೆ ಎಂದು ಐಶ್ವರ್ಯಾ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ನಟಿಯ ಫೋಟೋ, ವಿಡಿಯೊಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಬಾರಿ ಚಲನಚಿತ್ರೋತ್ಸವದಲ್ಲಿ ಆಕರ್ಷಿಸಿದ್ದು ಕೇವಲ ಐಶ್ವರ್ಯಾ ಮಾತ್ರವಲ್ಲ, ಜೊತೆಗೆ ಪುತ್ರಿ ಆರಾಧ್ಯಾ ಬಚ್ಚನ್.
ಆರಾಧ್ಯಾ ತಾಯಿ ಜೊತೆ ಕಾನ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ರೆಡ್ ಡ್ರೆಸ್ ನಲ್ಲಿ ಎಂಟ್ರಿ ನೀಡಿದರು. ಇದನ್ನೇ ಹಲವರು ಅವರ ‘ರೆಡ್ ಕಾರ್ಪೆಟ್ ಡೆಬ್ಯೂ’ ಎಂದು ಕರೆಯುತ್ತಿದ್ದಾರೆ.
ಆರಂಭದಲ್ಲೇ ರಾಜಮನೆತನದ ಶೈಲಿಯ ರಾಯಲ್ ಬ್ಲೂ ಕೌಟ್ಯೂರ್ ಉಡುಪಿನಲ್ಲಿ ಐಶ್ವರ್ಯಾ ಅಲೆಎಬ್ಬಿಸಿದರು.
ಬಳಿಕ L'Oréal Paris ಆಯೋಜಿಸಿದ್ದ ವಾರ್ಷಿಕ “Lights On Women’s Worth” ಕಾರ್ಯಕ್ರಮಕ್ಕೆ ಮತ್ತೊಮ್ಮೆ ಹಾಜರಾದರು.
ಗಾಢ ಗ್ಲಾಮರ್‌ಗಿಂತ ಮೃದುವಾದ ರೊಮ್ಯಾಂಟಿಕ್ ಲುಕ್ ಆಯ್ದುಕೊಂಡು, ಪಾಸ್ಟೆಲ್ ಪಿಂಕ್ ಬಣ್ಣದ Sophie Couture ಗೌನ್‌ನಲ್ಲಿ ಮಿಂಚಿದರು.
ಈ ಅದ್ಭುತ ಉಡುಪಿನಲ್ಲಿ ಕಾರ್ಸೆಟ್ ಶೈಲಿಯ ಸ್ಟ್ರಾಪ್‌ಲೆಸ್ ಬಾಡಿಸ್, ನಾಜೂಕಾದ Fortuny pleating ಮತ್ತು Swarovski ಕ್ರಿಸ್ಟಲ್ ಹೂವಿನ ಅಲಂಕಾರಗಳಿತ್ತು.
ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕಾನ್ಸ್‌ಗೆ ನಿಯಮಿತವಾಗಿ ಹಾಜರಾಗುತ್ತಿರುವ ಐಶ್ವರ್ಯಾ, ಮೊದಲ ಬಾರಿಗೆ 2002ರಲ್ಲಿ ದೇವದಾಸ್ ಚಿತ್ರದ ಪ್ರೀಮಿಯರ್‌ಗೆ ಶಾರೂಕ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಭಾಗವಹಿಸಿದ್ದರು.
ಬಳಿಕ ಅವರು L'Oréal Paris ಬ್ರ್ಯಾಂಡ್‌ನ ಜಾಗತಿಕ ರಾಯಭಾರಿಯಾಗಿ ಸೇರಿ, ನಂತರ ಕಾನ್ಸ್ ರೆಡ್ ಕಾರ್ಪೆಟ್‌ನ ಪ್ರಮುಖರಾಗಿ ಹೊರಹೊಮ್ಮಿದರು.
ಆರಾಧ್ಯಾ ಬಾಲ್ಯದಿಂದಲೇ ತಾಯಿಯೊಂದಿಗೆ ಕಾನ್ಸ್‌ಗೆ ತೆರಳುತ್ತಿದ್ದರೂ, ತಾಯಿಯೊಂದಿಗೆ ಅಧಿಕೃತವಾಗಿ ಪೋಸ್ ನೀಡಿದ್ದು ಇದೇ ಮೊದಲ ಬಾರಿ.