

ಮುಂಬೈ: ಬಹಳ ದಿನಗಳಿಂದ ಬೆಳ್ಳಿ ಚಿತ್ರರಂಗದಿಂದ ದೂರವಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಮಗಳು ಆರಾಧ್ಯ ಜೊತೆಗೆ ಕಾಣಿಸಿಕೊಂಡಿದ್ದಾರೆ.
ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ನಡೆಯುವ ಕೇನ್ ಚಲನಚಿತ್ರೋತ್ಸವಕ್ಕೆ ತೆರಳುವಾಗ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ತಾಯಿ-ಮಗಳು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
ಐಶ್ವರ್ಯಾ ರೈ ಕೇನ್ಸ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದು, ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಐಕಾನಿಕ್ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದಲೂ ಭಾರಿ ಪ್ರತಿಕ್ರಿಯೆ ಗಳಿಸುತ್ತಾ ಬಂದಿದ್ದಾರೆ.
ಈ ಹಿಂದೆ ಕುಟುಂಬದೊಂದಿಗೆ ಸಂತಸದಿಂದ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪತಿ ಅಭಿಷೇಕ್ ಜೊತೆಗಿನ 19 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಎದ್ದಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
ಮಾರ್ಚ್ 5 ರಂದು ಸಚಿನ್ ತೆಂಡೊಲ್ಕರ್ ಅವರ ಪುತ್ರ ಅರ್ಜುನ್ ತೆಂಡೊಲ್ಕರ್ ಅವರ ವಿವಾಹ ಮಹೋತ್ಸವ ಸಂದರ್ಭದಲ್ಲಿ ಅಪರೂಪಕ್ಕೆ ಎಂಬಂತೆ ಐಶ್ವರ್ಯ ಹಾಗೂ ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.
Advertisement