ಗೌರವ ಧನ 2 ಸಾವಿರ ಹೆಚ್ಚಳಕ್ಕೆ ಸರ್ಕಾರದ ಭರವಸೆ: ಪ್ರತಿಭಟನೆ ಹಿಂಪಡೆದ ಆಶಾ ಕಾರ್ಯಕರ್ತೆಯರು

ಬೆಂಗಳೂರು: ಆಶಾ ಕಾರ್ಯಕರ್ತೆಯರೊಂದಿಗಿನ ಮುಖ್ಯಮಂತ್ರಿಗಳ ಸಂಧಾನ ಯಶಸ್ವಿಯಾಗಿದ್ದು ಪ್ರತಿಭಟನೆಯನ್ನು ಕಾರ್ಯಕರ್ತೆಯರು ಹಿಂಪಡೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಆಶಾ ಕಾರ್ಯಕರ್ತೆಯರ ವೇತದಲ್ಲಿ (ಗೌರವಧನ) 2 ಸಾವಿರ ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿರುವುದಾಗಿ ಘೋಷಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಕೈಬಿಟ್ಟು, ಕರ್ತವ್ಯಕ್ಕೆ ಮರಳಿ: ಸಿಎಂ ಮನವಿ; ಬೇಡಿಕೆಗಳ ಈಡೇರಿಕೆಯ ಭರವಸೆ! Video
ಪ್ರತಿಭಟನಾನಿರತರೊಂದಿಗೆ ಸಿಎಂ ಮಾತುಕತೆ ನಡೆಸಿದ್ದು ಆಶಾ ಕಾರ್ಯಕರ್ತೆಯರ ಮನವೊಲಿಕೆ ಮಾಡಿದ್ದಾರೆ. ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯುವುದಕ್ಕೆ ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರ 2 ಸಾವಿರ ಕೊಡುತ್ತಿದೆ ರಾಜ್ಯ 5 ಸಾವಿರ ಕೊಡುತ್ತಿದೆ. ಕಳೆದ 2-3 ವರ್ಷದಿಂದ ಗೌರವ ಧನ ಹೆಚ್ಚಳ ಮಾಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಸಿದ್ದರಾಮಯ್ಯ ಅವರೂ ಸಹ ಗೌರವ ಧನ ಹೆಚ್ಚಳದ ಬಗ್ಗೆ ಮಾತು ಕೊಟ್ಟಿದ್ದರು, ರಾಜ್ಯ ಸರ್ಕಾರ ಈಗ ಗೌರವ ಧನವನ್ನು 2 ಸಾವಿರ ಹೆಚ್ಚಿಸಿದೆ. ಜನವರಿಯಿಂದ ಇದು ಜಾರಿಗೆ ಬರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರು 12 ದಿನಗಳ ಹೋರಾಟ ಮಾಡಿದ್ದರು. 15 ಸಾವಿರಕ್ಕೆ ಮನವಿ ಮಾಡಿದ್ದರು. ರಾಜ್ಯದಿಂದ ಈಗ 5, ಕೇಂದ್ರದಿಂದ 2 ಸಾವಿರ, ಪ್ರೋತ್ಸಾಹ ಧನ 1 ಸಾವಿರ ಬರುತ್ತಿದೆ. ಕೆಲಸ ಆಧಾರಿತ ಇನ್ಸೆಂಟಿವ್ ಸಹ ಬರುತ್ತಿದೆ. ಮೂರು ವರ್ಷದಿಂದ ಹೆಚ್ಚಳ ಆಗಿಲ್ಲ. ಅನೇಕ ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಸಹ ಇವರ ಬಗ್ಗೆ ಸಹನೆ ವಹಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಧ್ಯದಲ್ಲಿ ಕೆಲವರು ಇವರ ಪ್ರತಿಭಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರು. ಇವರು ಯಾರಿಗೂ ಬಗ್ಗಲಿಲ್ಲ. ಕೆಲವರು ಇವರ ಥರದ ಬಟ್ಟೆ ಹಾಕಿಕೊಂಡು ಬಂದು ಇವರ ಜತೆ ಸೇರಿಕೊಂಡಿದ್ದರು. ಅವರನ್ನ ಇವರು ಪತ್ತೆ ಮಾಡಿದ್ದಾರೆ. ಇವರಿಗೆ ಜಯ ಸಿಕ್ಕಿದೆ, ಒಟ್ಟಿಗೆ ಕೆಲಸ ಮಾಡೋಣ ಎಂದು ಸಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


