• Tag results for protest

ಕೃಷಿ ಕಾಯ್ದೆಗಳ ವಿರುದ್ಧ 'ಕರಾಳ ಶುಕ್ರವಾರ' ಆಚರಿಸಲು ಶಿರೋಮಣಿ ಅಕಾಲಿ ದಳ ಕರೆ: ಗಡಿ ಮುಚ್ಚಿದ ದೆಹಲಿ ಪೊಲೀಸರು

ವಿವಾದಾತ್ಮಕ ಕೃಷಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 'ಕರಾಳ ಶುಕ್ರವಾರ' ಆಚರಿಸಲು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.

published on : 17th September 2021

ಮೈಸೂರು: ದೇವಸ್ಥಾನ ತೆರವು ವಿರುದ್ಧ ಪ್ರತಿಭಟನೆ ವೇಳೆ ಉರ್ದು ಪತ್ರಿಕೆ ಪತ್ರಕರ್ತನ ಮೇಲೆ ಹಲ್ಲೆ

ನಗರದಲ್ಲಿ ಗುರುವಾರ ದೇವಸ್ಥಾನ ತೆರವು ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಉರ್ದು ಡೈಲಿ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.

published on : 16th September 2021

ಕೃಷಿ ಸುಧಾರಣಾ ಕಾನೂನಿಗೆ ಅಡಿಪಾಯ ಹಾಕಿದ್ದು ಬಾದಲ್ ಸೋದರರು, ಕೇಂದ್ರ ಅದನ್ನು ಕಾಪಿ ಹೊಡೆದಿದೆ ಅಷ್ಟೇ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು

ಈ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಿಧು ಅವರು ಬಾದಲ್ ಅವರ ಹಳೆಯ ವಿಡಿಯೋಗಳನ್ನು ಪ್ರದರ್ಶನ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನನ್ನು ಹೊಗಳುತ್ತಿರುವುದು ಕಂಡು ಬಂದಿದೆ.

published on : 16th September 2021

ಹೊಸ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಲಘು ಲಾಠಿ ಪ್ರಹಾರ

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

published on : 14th September 2021

ರೈತರ ಪ್ರತಿಭಟನೆ ಸಂಬಂಧ 4 ರಾಜ್ಯಗಳ ಸರ್ಕಾರಗಳಿಗೆ ನೋಟೀಸ್ ಕಳಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

ರೈತರ ಪ್ರತಿಭಟನೆಯಿಂದಾಗಿ ದೇಶಾದ್ಯಂತ 9,000 ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳಿಗೆ ನಷ್ಟ ಸಂಭವಿಸಿದೆ. ಈ ಬಗ್ಗೆ ತನ್ನ ಬಳಿ ದೂರುಗಳು ಬರುತ್ತಲೇ ಇರುವುದಾಗಿ ಆಯೋಗ ತಿಳಿಸಿದೆ. 

published on : 14th September 2021

ರೈತರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಜನಸಾಮಾನ್ಯರಿಗೆ ಟ್ರಾಫಿಕ್ ಕಿರಿಕಿರಿ

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ರೈತ ಸಂಘಟನೆಗಳು ಬೆಂಗಳೂರಿನ ಹೃದಯ ಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಮಧ್ಯಾಹ್ನದವರೆ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು. 

published on : 14th September 2021

ಕಾಂಗ್ರೆಸ್ ಪ್ರತಿಭಟನೆಗೆ ಸದನದಲ್ಲಿ ಉತ್ತರ ಕೊಡುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ವಿಧಾನಮಂಡಲ ಕಲಾಪ ಆರಂಭದ ಹೊತ್ತಲ್ಲೇ ಪ್ರತಿಭಟನೆಯ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧಕ್ಕೆ ಎತ್ತಿನಗಾಡಿ ಚಲೋ ಹಮ್ಮಿಕೊಂಡಿದ್ದಾರೆ.

published on : 13th September 2021

ಎತ್ತಿನ ಗಾಡಿ ಏರಿ ವಿಧಾನ ಸೌಧಕ್ಕೆ ಕಾಂಗ್ರೆಸ್ ನಾಯಕರ ಪ್ರಯಾಣ: ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಇಳಿಕೆಗೆ ಆಗ್ರಹ

ವಿಧಾನ ಸೌಧದಲ್ಲಿ ಉಭಯ ಸದನಗಳ ಕಲಾಪ ಇನ್ನು ಕೆಲವೇ ಹೊತ್ತಿನಲ್ಲಿ ಆರಂಭವಾಗಲಿದೆ. ಅದರಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯಲ್ಲಿ ಹೊರಟಿದ್ದಾರೆ.

published on : 13th September 2021

ಕರ್ನಾಲ್‌ ಘಟನೆ ತನಿಖೆಗೆ ಆದೇಶಿಸಿದ ಹರಿಯಾಣ ಸರ್ಕಾರ; ಪ್ರತಿಭಟನೆ ಕೈಬಿಟ್ಟ ರೈತರು

ಐಎಎಸ್ ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಮತ್ತು ರೈತರ ಮೇಲಿನ ಪೋಲಿಸ್ ಲಾಠಿ ಚಾರ್ಜ್ ಸೇರಿದಂತೆ ಕರ್ನಾಲ್ ಘಟನೆಯನ್ನು ಹರಿಯಾಣ ಸರ್ಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ.

published on : 11th September 2021

ಅಫ್ಘಾನಿಸ್ತಾನ: ಮಹಿಳೆಯರ ಪ್ರತಿಭಟನೆ ವರದಿ ಮಾಡಿದ್ದ ಇಬ್ಬರು ಪತ್ರಕರ್ತರಿಗೆ ತಾಲಿಬಾನಿಗಳಿಂದ ಥಳಿತ

ತಾಲಿಬಾನಿಗಳು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ ಇತ್ತೀಚಿನ ಘಟನೆಗಳು ಅವರ ಭರವಸೆಯನ್ನು ಶಂಕಿಸುವಂತೆ ಮಾಡಿವೆ.

published on : 11th September 2021

ಕಬ್ಬು ಎಫ್ಆರ್'ಪಿ ಅವೈಜ್ಞಾನಿಕವಾಗಿದ್ದು, ಮರುಪರಿಶೀಲನೆ ನಡೆಸಿ: ಸರ್ಕಾರಕ್ಕೆ ಕಬ್ಬು ಬೆಳೆಗಾರರ ಸಂಘ ಆಗ್ರಹ

ಕಬ್ಬು ಬೆಳೆಗೆ ನೀಡಲಾಗಿರುವ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್ಆರ್'ಪಿ) ಅವೈಜ್ಞಾನಿಕವಾಗಿದ್ದು, ಸರ್ಕಾರ ಕೂಡಲೇ ಇದನ್ನು ಮರುಪರಿಸೀಲಿಸಬೇಕು. ಇಲ್ಲದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕಬ್ಬು ಬೆಳೆಗಾರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

published on : 8th September 2021

ರೈತರ ಪ್ರತಿಭಟನೆ ರಾಹುಲ್ ಗಾಂಧಿ ಬೆಂಬಲ; ಕಾಂಗ್ರೆಸ್ ನಾಯಕನ ವಿರುದ್ಧ ಬಿಜೆಪಿ ವಾಗ್ದಾಳಿ

ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ರೈತರು 'ಮಹಾಪಂಚಾಯತ್' ನಡೆಸಿದ ಒಂದು ದಿನದ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು 'ನಿರ್ಭೀತರು' ಹಾಗೂ 'ದೃಢಸಂಕಲ್ಪ'ವುಳ್ಳವರು ಆಗಿದ್ದಾರೆ...

published on : 7th September 2021

ರೈತರ ಘರ್ಜನೆ ಮುಂದೆ ಬಿಜೆಪಿಯ ಅಧಿಕಾರದ ಮದ ನಿಲ್ಲದು: ಕಿಸಾನ್ ಮಹಾಪಂಚಾಯತ್ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್

ಸಂಯುಕ್ತ ಕಿಸಾನ್ ಮೋರ್ಚಾ ಇಂದು ಕಿಸಾನ್ ಮಹಾಪಂಚಾಯತ್ ಹಮ್ಮಿಕೊಂಡಿತ್ತು. ಸಾವಿರಾರು ಮಂದಿ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

published on : 5th September 2021

'ರೈತರು ನಮ್ಮ ಆಪ್ತ ಬಂಧುಗಳು, ಅವರ ನೋವು ಅರ್ಥಮಾಡಿಕೊಳ್ಳಬೇಕು: ಬಿಜೆಪಿ ನಾಯಕ ವರುಣ್‌ ಗಾಂಧಿ

ಕೃಷಿ ಕಾಯ್ದೆ ಜಾರಿ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಹಗ್ಗ-ಜಗ್ಗಾಟ ಮುಂದುವರೆದಿರುವಂತೆಯೇ ಇತ್ತ ಬಿಜೆಪಿ ಸಂಸದ ವರುಣ್‌ ಗಾಂಧಿ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. 

published on : 5th September 2021

ಕಾಬೂಲ್ ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ 

ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. 

published on : 5th September 2021
1 2 3 4 5 6 >