ಐಶ್ವರ್ಯ ರೈ ಜೊತೆಗೆ 18 ವರ್ಷ ದಾಂಪತ್ಯ ಜೀವನ: ಅಭಿಷೇಕ್ ಬಚ್ಚನ್ ಕ್ರೆಡಿಟ್' ನೀಡಿದ್ದು ಯಾರಿಗೆ ಗೊತ್ತಾ?

ಲಿಲ್ಲಿ ಸಿಂಗ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಐಶ್ವರ್ಯಾ ರೈ, ಅವರ ಕುಟುಂಬ ಮತ್ತು ಪೋಷಕರೊಂದಿಗಿನ ಸಂಬಂಧದ ಬಗ್ಗೆ ಅಭಿಷೇಕ್ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ.
Abhishek Bachchan with Aishwarya Rai
ಐಶ್ವರ್ಯ ರೈ,ಅಭಿಷೇಕ್ ಬಚ್ಚನ್
Updated on

ದಾಂಪತ್ಯ ಜೀವನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳಿಗೆ ಕಾರಣರಾದ ಬಾಲಿವುಡ್ ಜೋಡಿಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಕೂಡ ಸೇರಿದ್ದಾರೆ. ವರ್ಷಗಳ ಕಾಲ ಅವರಿಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಚ್ಛೇದನದ ಬಗ್ಗೆ ವದಂತಿಗಳು ಹುಟ್ಟಿಕೊಂಡಿದ್ದವು.

ಲಿಲ್ಲಿ ಸಿಂಗ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಐಶ್ವರ್ಯಾ ರೈ, ಅವರ ಕುಟುಂಬ ಮತ್ತು ಪೋಷಕರೊಂದಿಗಿನ ಸಂಬಂಧದ ಬಗ್ಗೆ ಅಭಿಷೇಕ್ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಮಗಳು ಆರಾಧ್ಯ ಬಚ್ಚನ್ ನನ್ನು ಹೇಗೆ ಬೆಳೆಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ.

ಐಶ್ವರ್ಯ ರೈ ಹಿಂದೆ ಬೀಳಲು ಇದೇ ಪ್ರಮುಖ ಕಾರಣ: ಅಭಿಷೇಕ್ ಮತ್ತು ಐಶ್ವರ್ಯಾ ಸಂಬಂಧದ ಬಗ್ಗೆ ನೆಟ್ಟಿಗರು ಅನೇಕ ವರ್ಷಗಳಿಂದ ಟ್ರೋಲ್ ಮಾಡುತ್ತಲೇ ಇದ್ದಾರೆ. ಮದುವೆ ವಿಚಾರದಲ್ಲಿ ಯಾರು ಹೆಚ್ಚು ಯಶಸ್ವಿ ಹಾಗೂ ಯಾರ ಪಾತ್ರ ಹೆಚ್ಚಿನದು ಎಂಬುದರ ಬಗ್ಗೆ ಮಾತನಾಡಿದ ಅಭಿಷೇಕ್ ಬಚ್ಚನ್, ನನ್ನ ಪೋಷಕರು ಮದುವೆಯಾದಾಗ, ನನ್ನ ತಾಯಿ ನನ್ನ ತಂದೆಗಿಂತ ದೊಡ್ಡ ತಾರೆಯಾಗಿದ್ದರು. ಹಾಗಾಗಿ, ಇದು ಅಸಹಜವಾದ ವಿಷಯವಲ್ಲ. ಇದು ಯಾವಾಗಲೂ ಪಾಲುದಾರಿಕೆಯ ವಿಷಯವಾಗಿತ್ತು. ನನ್ನ ವೃತ್ತಿಜೀವನದ ಆರಂಭದಿಂದಲೂ ನಾನು ಐಶ್ವರ್ಯಾ ಅವರನ್ನು ತಿಳಿದಿದ್ದೇನೆ. ಎರಡನೇ ಚಿತ್ರವನ್ನು ಆಕೆಯೊಂದಿಗೆ ಮಾಡಿದ್ದಾಗಿ ತಿಳಿಸಿದರು.

ಎರಡನೇ ಸಿನಿಮಾ Dhaai Akshar Prem Ke (2000)ವರೆಗೂ ರಿಲೇಷನ್ ಶಿಪ್ ನಲ್ಲಿ ಇರಲಿಲ್ಲ. ಆಗ ನಾವು ಕೇವಲ ಸ್ನೇಹಿತರಾಗಿದ್ದೇವು. ನಾವು ಯಾವಾಗಲೂ ಸ್ನೇಹಿತರಾಗಿದ್ದೇವೆ ಎಂದು ಅವರು ಒಪ್ಪಿಕೊಂಡರು. ನಮ್ಮ ಪ್ರೀತಿ, ನಿಶ್ಚಿತಾರ್ಥ ಮತ್ತು ಮದುವೆ ಎಲ್ಲವೂ ಸಹಮತದ ಮೂಲಕವೇ ನಡೆಯಿತು. ನಾನು ದುಡಿಯುತ್ತೇನೆ. ನೀವು ಮನೆಯನ್ನು ನೋಡಿಕೊಳ್ಳಿ' ಎಂಬಂತಹ ಯಾವುದೇ ಚರ್ಚೆ ಇರಲಿಲ್ಲ. ಇದು ತುಂಬಾ ಸಹಜವಾಗಿರುತ್ತದೆ. ಇದು ನನಗೆ ತೀವ್ರ ಇಗೋ ಅನಿಸುತ್ತದೆ ಎಂದರು.

ಇಗೋ ಬಗ್ಗೆ ಅಭಿಷೇಕ್ ಮಾತನಾಡುವಾಗ ಅದು ನೆಗೆಟಿವ್ ಅರ್ಥದಲ್ಲಿ ಇರಲಿಲ್ಲ. ರೇಸ್‌ನಲ್ಲಿ ಗೆಲ್ಲಲು ಯಾರಾದರೂ ಹಿಂದೆ ಸರಿಯಬೇಕು ಎಂಬುದನ್ನು ನಾನು ನಂಬುವುದಿಲ್ಲ. ನನ್ನ ತಂದೆ ಅಮಿತಾಬ್ ಬಚ್ಚನ್ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಲಿಲ್ಲ, ನನಗಾಗಿ ಚಿತ್ರ ಮಾಡಲಿಲ್ಲ. ಆದರೆ 2009ರಲ್ಲಿ Paa ಸಿನಿಮಾ ಮಾಡಿದರು ಎಂದು ತಿಳಿಸಿದರು.

ರೇಸ್ ಗೆಲ್ಲಲು ನನಗಾಗಿ ಓಟ ನಿಲ್ಲಿಸಬೇಕು, ಅಥವಾ ಬೇರೆ ಏನಾದರೂ ತ್ಯಜಿಸಬೇಕು ಎಂದು ಬಯಸುವ ವ್ಯಕ್ತಿ ನಾನು ಅಲ್ಲ. ಅದು ನನ್ನ ಮಾನಸಿಕ ರಚನೆಯಾಗಿದೆ. ಮದುವೆಯಿಂದ ನನ್ನ ಹೆಂಡತಿ ಏನನ್ನಾದರೂ ಮಾಡುವುದನ್ನು ನಿಲ್ಲಿಸಬೇಕು ಅಥವಾ ಮನೆಯಲ್ಲಿ ಇರಬೇಕು ಎಂದು ಬಯಸುವುದಿಲ್ಲ. ಅದೃಷ್ಟವಶಾತ್, ನನ್ನ ಹೆಂಡತಿಯೂ ಹಾಗೆ ಯೋಚಿಸುವವಳಲ್ಲ" ಎಂದು ಅವರು ಹೇಳಿದರು.

ತಮ್ಮ ಮಗಳು ಆರಾಧ್ಯ ಬಚ್ಚನ್ ನನ್ನು ಹೇಗೆ ಬೆಳೆಸುತ್ತಿದ್ದಾರೆ ಎಂಬುದರ ಕುರಿತು ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ. ನನ್ನ ಮನೆಯಲ್ಲಿ, ನಾವಿಬ್ಬರೂ ಆರಾಧ್ಯ ಅವರಿಗೆ ಅತ್ಯುತ್ತಮ ಉದಾಹರಣೆಯಾಗಲು ಪ್ರಯತ್ನಿಸುತ್ತೇವೆ. ಅವರಿಗೆ (ಮಕ್ಕಳಿಗೆ) ಇದು ಸರಿ, ಅಥವಾ ಇದು ತಪ್ಪು ಎಂದು ಹೇಳುವ ಬದಲು, ಹಾಗೆ ಮಾಡುವ ಮೂಲಕ ಏನು ಮಾಡಬೇಕೆಂದು ಅವರಿಗೆ ತೋರಿಸಿ ಎಂದರು. ಹಾಗೆ ನೋಡಿದರೆ ಆಕೆಗೆ ಆತ್ಮರಕ್ಷಣೆ ಕಲಿಸಬೇಕು ಅಂತ ಯಾವತ್ತೂ ಅನಿಸಲಿಲ್ಲ. ಏಕಂದೆರ ನೀವು ನನ್ನ ಹೆಂಡತಿಯನ್ನು ನೋಡಿದ್ದರೆ ಸಾಕು ಆಕೆ ತನ್ನನ್ನು ತಾನೇ ನೋಡಿಕೊಳ್ಳುತ್ತಾಳೆ ಎಂದು ವ್ಯಂಗ್ಯವಾಡಿದರು.

Abhishek Bachchan with Aishwarya Rai
ಐಶ್ವರ್ಯಾ ರೈ ಗಂಡನಿಂದ ದೂರವಾದರೆ ಮತಾಂತರ ಮಾಡಿ ಮದುವೆ ಆಗುತ್ತೇನೆ: ಪಾಕಿಸ್ತಾನದ ಧಾರ್ಮಿಕ ಗುರು ಹೇಳಿಕೆ ವೈರಲ್!

ಪೋಷಕರ ಸಲಹೆಯನ್ನು ಹಂಚಿಕೊಂಡ ಅವರು, ಪೋಷಕರು ತಮ್ಮ ಜೀವನವನ್ನು ನೈತಿಕತೆ ಮತ್ತು ಮೌಲ್ಯಗಳೊಂದಿಗೆ ನಡೆಸಿದಾಗ, ಮಕ್ಕಳು ಕೂಡಾ ಅದನ್ನೇ ಅನುಸರಿಸುತ್ತಾರೆ. ತಮ್ಮ ಮಕ್ಕಳನ್ನೂ ಅದೇ ರೀತಿ ಬೆಳೆಸುತ್ತಾರೆ."ಆದ್ದರಿಂದ, ಮನೆಯಲ್ಲಿ ಯಾವುದೇ ಸ್ಪರ್ಧೆಯಿಲ್ಲ ಎಂದು ಅವರು ಹೇಳಿದರು. ಏಪ್ರಿಲ್ 20, 2007 ರಂದು ವಿವಾಹವಾದ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಈ ವರ್ಷ 19 ವರ್ಷಗಳ ದಾಂಪತ್ಯ ಜೀವನವನ್ನು ಪೂರ್ಣಗೊಳಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com