Photos | ಗೌರಿ-ಗಣೇಶ ಹಬ್ಬದಂದು ಮಗನಿಗೆ 'ಎರೆಯ' ಎಂದು ಹೆಸರಿಟ್ಟ ನಟ ಡಾಲಿ ಧನಂಜಯ್ ದಂಪತಿ!

Ramyashree GN

ನಟ ಡಾಲಿ ಧನಂಜಯ್ ಅವರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಗನ ಮುಖವನ್ನು ರಿವೀಲ್ ಮಾಡುವುದರೊಂದಿಗೆ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗನಿಗೆ ‘ಎರೆಯ’ ಎಂದು ಹೆಸರಿಟ್ಟಿದ್ದು, ಈ ಹೆಸರಿಗೆ ಇರುವ ಅರ್ಥ ಏನೆಂಬುದನ್ನು ಕೂಡ ವಿವರಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿರುವ ಅವರು, ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತಾ ಇದ್ರಿ, ಏನು ಹೆಸರು ಅಂತ ಕೇಳ್ತಾ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ ಎಂದಿದ್ದಾರೆ.

ಎರೆಯ | EREYA. ‘ಎರೆಯ’— ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ 'ಒಡೆಯ, ಸ್ವಾಮಿ, ಅಧಿಪತಿ'- ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು.

ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ Ereya ಎಂಬ ಹೆಸರು ಕಾಣಿಸುತ್ತದೆ.

ಆ ರಾಜರ ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ… ನಮ್ಮ ಹೃದಯದ ರಾಜ… ನಮ್ಮ “ಎರೆಯ”. ನಿಮ್ಮ ಪ್ರೀತಿ , ಆಶೀರ್ವಾದ ಸದಾ ಇರಲಿ ಎಂದು ಹೇಳಿದ್ದಾರೆ.

ಡಾಲಿ ಧನಂಜಯ್ ಕುಟುಂಬ
ಮಗ ಎರೆಯನ ಜೊತೆಗೆ ಡಾ. ಧನ್ಯತಾ
ಪತ್ನಿ ಮತ್ತು ಪುತ್ರನೊಂದಿಗೆ ನಟ ಧನಂಜಯ್
ಧನಂಜಯ್-ಡಾ. ಧನ್ಯತಾ ದಂಪತಿಯ ಪುತ್ರ
ಮೊದಲ ಮಗುವಿನ ನಿರೀಕ್ಷೆ: ಡಾಲಿ-ಧನ್ಯತಾ ಬೇಬಿ ಬಂಪ್ ಫೋಟೊಶೂಟ್