ಗೋಪೂಜೆ, ಹೋಮ ಹವನದೊಂದಿಗೆ ಸರಳವಾಗಿ ನಡೆದ ಸಿದ್ದರಾಮಯ್ಯ ಮನೆ ಗೃಹಪ್ರವೇಶ, ಇಲ್ಲಿದೆ ಫೋಟೋಗಳು!
Vishwanath S
ಗಣೇಶ ಚತುರ್ಥಿಯ ಶುಭದಿನದಂದೇ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಮಿಸಿರುವ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಸರಳವಾಗಿ ನೆರವೇರಿತು.
ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ನೂತನ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ ಹಿಂದೂ ಸಂಪ್ರದಾಯದಂತೆ ಗೋಪೂಜೆ ಮಾಡಲಾಗಿದೆ. ಅಲ್ಲದೆ ಗಣಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಿತು.
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ನಾನು ಹಣೆಗೆ ತಿಲಕ ಇಡುವುದಿಲ್ಲ. ಮೂಡನಂಬಿಕೆಗಳಿಗೆ ವಿರುದ್ಧ ಎಂದು ಹೇಳಿದ್ದರು. ಇದೀಗ ಹಿಂದೂ ಪದ್ದತಿಗಳಂತೆ ಗೃಹಪ್ರವೇಶ ಮಾಡಿರುವುದಕ್ಕೆ ನೆಟ್ಟಿಗರು ಪರ-ವಿರೋಧ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಪುರೋಹಿತರು, ಸನಾತನ ಧರ್ಮ, ಅಂದರೆ ರಾಜಕೀಯ ಸಭೆ, ಜಾತಿ ಸಮಾವೇಶಗಳಲ್ಲಿ ಉರಿದುಬೀಳುತ್ತಿದ್ದ ಮನುಷ್ಯ ತನ್ನ ಮನೆಯ ಗೃಹಪ್ರವೇಶಕ್ಕೆ ಸನಾತನ ಧರ್ಮದವರನ್ನೇ ಕರೆಸಿ ಪೂಜೆ ಮಾಡಿಸಿದ್ದಾರೆ.