
'ಮನೇಲಿ ಕುತ್ಕೊಂಡು ನೊಣ ಹೊಡೆಯೋದಾ?' ಎಂಬ ಮಾಮೂಲಿ ಡೈಲಾಗ್ ಅನ್ನು ನೀವು ಕೇಳಿರುತ್ತೀರಿ. ಆದರೆ, ಚೀನಾದ ರೌನ್ ಟ್ಯಾಂಗ್ ಎಂಬ 80ರ ಅಜ್ಜಿ ಕಳೆದ 14 ವರ್ಷದಿಂದ ಇದನ್ನು ಅಕ್ಷರಶಃ ಪಾಲಿಸುತ್ತಿದ್ದಾಳೆ. ಅಂದಹಾಗೆ, ಈಕೆ ನೊಣ ಹೊಡೆಯುತ್ತಿರುವುದು ಮನೆಯಲ್ಲಲ್ಲ, ಬೀದಿಯಲ್ಲಿ! ಈ ಅಜ್ಜಿಗೆ ನಿವೃತ್ತ ಜೀವನವನ್ನು ಸಮಾಜಸೇವೆಗೆ ಮೀಸಲಿಡುವ ಆಸೆ ಆಯಿತಂತೆ. ಹೀಗಾಗಿ, ಬೀಜಿಂಗ್ ಬೀದಿಯಲ್ಲಿ ನೊಣಗಳ ಬಲಿ ಶುರುಮಾಡಿಕೊಂಡಳು. ನೊಣ ಕೊಲ್ಲಲೆಂದೇ ಈಕೆಯ ಕೈಯಲ್ಲಿ ಎಲೆಕ್ಟ್ರಿಕ್ ಮಿಷನ್ ಇದೆ. ದಿನಾ ರಾತ್ರಿ ಇದನ್ನು ಚಾರ್ಜ್ ಮಾಡಿಕೊಂಡು, ಬೆಳಗ್ಗೆ ಮಾರಣಹೋಮ ಶುರುಮಾಡಿಕೊಳ್ಳುತ್ತಾಳೆ. ದಿನಕ್ಕೆ 1000 ನೊಣ ಹೊಡೆಯುವುದು ಈಕೆಯ ಟಾರ್ಗೆಟ್ ಅಂತೆ. ಬೀಜಿಂಗ್ ಅನ್ನು 'ನೊಣಮುಕ್ತ ನಗರ' ಆಗಿ ಪರಿವರ್ತಿಸುವುದು ಈಕೆಯ ಜೀವನೋದ್ದೇಶವಂತೆ. ವಿದೇಶಿಯರು ಎಷ್ಟು ಕ್ರೆಜಿ ನೋಡಿ... ಆದರೆ, ನಮ್ಮಲ್ಲೇ ಯಾರೋ ವಯಸ್ಸಾದವರು ಹೀಗೆ ಮಾಡಿದ್ರೆ ಅರಳೋ ಮರುಳೋ ಎನ್ನುತ್ತಿದ್ದರಷ್ಟೇ!
Advertisement