"ತಾರೆ'ಯಾಗಿ ಉಳಿದರು 'ಸಿತಾರಾ'

"ತಾರೆ'ಯಾಗಿ ಉಳಿದರು 'ಸಿತಾರಾ'

ದೇಶದ ಹೆಮ್ಮೆಯ ಕಥಕ್ ನೃತ್ಯ ಸಾಮ್ರಾಜ್ಞಿ ಸಿತಾರಾ ದೇವಿ ಇನ್ನಿಲ್ಲ. ನೃತ್ಯ ಕ್ಷೇತ್ರ...

ದೇಶದ ಹೆಮ್ಮೆಯ ಕಥಕ್ ನೃತ್ಯ ಸಾಮ್ರಾಜ್ಞಿ ಸಿತಾರಾ ದೇವಿ ಇನ್ನಿಲ್ಲ. ನೃತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅವರ ನಿಧನ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.

ದೇಶ ಕಂಡ ಅತ್ಯಾದ್ಭುತ ಸಾಂಪ್ರಾದಾಯಿಕ ನೃತ್ಯಗಾರ್ತಿಯಲ್ಲಿ ಒಬ್ಬರಾದ ಸಿತಾರಾ ದೇವಿ ಅವರು ಕಥಕ್ ನೃತ್ಯಲೋಕದಲ್ಲಿ ನೆಲೆಯೂರಿದ್ದರು.

ಕಥಕ್ ನೃತ್ಯಲೋಕಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದ ಸಿತಾರಾ ದೇವಿ ಅವರ ಸಾಧನೆ ಅಪಾರ. ಕಥಕ್ ನೃತ್ಯದಲ್ಲಿ ಚಾಪನ್ನು ಮೂಡಿಸಿದ್ದ ಸಿತಾರಾ ದೇವಿ ಅವರನ್ನು 'ಕಥಕ್ ಲೋಕದ ರಾಣಿ' ಎಂದು ಕರೆಯಲಾಗುತ್ತಿತ್ತು.

ತಮ್ಮ 16 ವಯಸ್ಸಿನಲ್ಲಿ ವೇದಿಕೆ ಮೇಲೆ ಕಥಕ್ ನೃತ್ಯ ಪ್ರದರ್ಶಿಸಿ ಕವಿ ರವೀಂದ್ರನಾಥ್ ಠಾಗೂರ್ ಮೆಚ್ಚುಗೆಗೆ ಪಾತ್ರರಾದ ಇವರು, ಠಾಗೂರ್ ಅವರಿಂದ "ನೃತ್ಯ ಸಾಮ್ರಾಜ್ಞಿ' ಎಂಬ ಬಿರುದು ಪಡೆದರು.

1920ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ ಇವರಿಗೆ ಧನಲಕ್ಷ್ಮಿ ಎಂದು ಹೆಸರಿಡಲಾಗಿತ್ತು. ದೀಪಾವಳಿ ಹಬ್ಬದ ದಿನದಂದೇ ಜನಿಸಿದ ಹಿನ್ನೆಲೆಯಲ್ಲಿ ಇವರಿಗೆ ಧನಲಕ್ಷ್ಮಿ ಎಂದು ಹೆಸರಿಟ್ಟರಂತೆ. ಇವರ ತಂದೆ ಸಂಸ್ಕೃತ ವಿದ್ವಾಂಸಕ ಸುಖದೇವ್ ಮಹಾರಾಜ್ ಮತ್ತು ತಾಯಿ ಮತ್ಸ್ಯ ಕುಮಾರಿ. ತಂದೆ ವಾರಾಣಾಸಿ ಮೂಲದವರಾಗಿದ್ದು, ಕೊಲ್ಕತ್ತಾದಲ್ಲಿ ನೆಲೆಸಿದ್ದರು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರಿಗೆ ನೃತ್ಯದ ಕಲೆ ರಕ್ತಗತವಾಗಿ ಬಂದಿತ್ತು. ಸೀತಾರ ದೇವಿಯವರಿಗೆ ಅವರ ತಂದೆಯೇ ಮೊದಲ ಗುರುವಾಗಿದ್ದರು.

1967ರಲ್ಲಿ ಲಂಡನ್‌ನ ರಾಯಲ್ ಅಲ್ಬರ್ಟ್ ಹಾಗೂ ನ್ಯೂಯಾರ್ಕ್‌ನ ಕರ್ನೀಜ್ ಹಾಲ್ ಸೇರಿದಂತೆ ವಿದೇಶ ಮತ್ತು ಭಾರತ ದೇಶದ ಮೂಲೆ ಮೂಲೆಗಳಲ್ಲೂ ಕಥಕ್ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೈವಾಹಿಕ ಜೀವನದಲ್ಲಿ ಅಷ್ಟರ ಮಟ್ಟಿಗೆ ತೃಪ್ತಿಕಾಣದ ಇವರು, ನೃತ್ಯದ ಕಡೆ ಹೆಚ್ಚು ಒಲವು ತೋರಿದ್ದರು. ನೃತ್ಯ ಲೋಕದಲ್ಲಿ ಕ್ರಿಯಾಶೀಲರಾಗಿ ತಮ್ಮನ್ನೇ ತೊಡಗಿಸಿಕೊಂಡ ಸಿತಾರಾ, ತಮ್ಮದೇ ಆದ ನೃತ್ಯ ಶೈಲಿಯನ್ನು ಬಳಸಿ ಅನೇಕ ಕಥಕ್ ನೃತ್ಯಗಳನ್ನು ಸಂಯೋಜಿಸಿದ್ದರು.

ಪ್ರಶಸ್ತಿಯ ಗರಿ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಮತ್ತು ನೃತ್ಯ ನಿಪುಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ ಸೀತಾರ ದೇವಿ, ಸರ್ಕಾರದ ವಿರುದ್ಧ ವಿಷಾಧ ವ್ಯಕ್ತಪಡಿಸಿದ್ದರು. ಕಥಕ್ ಒಂದು ಸಾಂಪ್ರಾದಾಯಿಕ ನೃತ್ಯವಾಗಿದ್ದು, ಕ್ರಿಯಾಶೀಲತೆಯಿಂದ ಕೂಡಿದ್ದಾಗಿದೆ. ಇದರಲ್ಲಿ ಸಾಧನೆ ಮಾಡಿರುವ ನನಗೆ ಭಾರತ ರತ್ನ ನೀಡುವ ಬದಲು ಕೇವಲ ಪದ್ಮ ಭೂಷಣ ಪ್ರಶಸ್ತಿ ನೀಡುತ್ತಿದೆ, ಹಾಗಾಗಿ, ನಾನು ಸ್ವೀಕರಿಸುವುದಾದರೆ ಭಾರತ ರತ್ನ ಪ್ರಶಸ್ತಿ ಮಾತ್ರ, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಶಸ್ತಿ ನೀಡಿದರೂ ಅದನ್ನು ನಾನು ತಿರಸ್ಕರಿಸುತ್ತೇನೆ ಎಂದು ಸಿತಾರ ಹೇಳಿದ್ದರು.

ಕೇವಲ ಕಥಕ್ ಅಲ್ಲದೇ, ಭರತನಾಟ್ಯ, ಪಾಶ್ಚಿಮಾತ್ಯ ನೃತ್ಯ, ರಷ್ಯನ್ ಬ್ಯಾಲೆಟ್ ನೃತಗಳಲ್ಲಿಯೂ ಪರಿಣಿತಿ ಹೊಂದಿದ್ದ ಇವರು, ಕಥಕ್ ನೃತ್ಯದ ಗುರುವಾಗಿ ಸೇವೆ ಸಲ್ಲಿಸಿದ್ದಾರೆ. ಬಾಲಿವುಡ್ ನಟಿಯರಾದ ಮಧುಬಾಲ, ರೇಖಾ, ಮಾಲಾ ಸಿನ್ಹಾ, ಕಾಜೋಲ್ ಸೇರಿದಂತೆ ಅನೇಕ ಬಾಲಿವುಡ್ ನಟ ನಟಿಯರಿಗೆ ಕಥಕ್ ನೃತ್ಯ ಕಲಿಸಿದ ಹೆಗ್ಗಳಿಗೆ ಇವರದಾಗಿದೆ.

-ಮೈನಾಶ್ರೀ.ಸಿ

Related Stories

No stories found.

Advertisement

X
Kannada Prabha
www.kannadaprabha.com