
ನವದೆಹಲಿ: ಸರ್ಫಿಂಗ್! ದೇಶದ ಮೂರೂ ಭಾಗಗಳನ್ನು ಸಮುದ್ರವೇ ಆವರಿಸಿದ್ದರೂ ಈ ಕ್ರೀಡೆಕುರಿತು ಹೆಚ್ಚಿನ ಭಾರತೀಯರಿಗೆ ಮಾಹಿತಿಯೇ ಇಲ್ಲ. ಯಾಕೆಂದರೆ ಇದು ವಿದೇಶಿ ಕ್ರೀಡೆ. ಆದರೆ, ಮುಂಬಾ ಮೂಲದ ಸದ್ಯ ಉಡುಪಿ ನಿವಾಸಿ ಇಶಿತಾ ಮಾಳವಿಯಾಗೆ ಸರ್ಫಿಂಗೇ ಕನಸು ಮುಂಬೈನಂಥ ಮಹಾನಗರ ವನ್ನು, ಕೈ ತುಂಬ ಸಂಬಳ ಕೊಡುವ ಉದ್ಯೋಗ ಬಿಟ್ಟು ಈಗ ಆಕೆ ಈ ಕನಸಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಸರ್ಫಿಂಗ್ ಅನ್ನೇ ವೃತ್ತಿ ಮಾಡಿ ಕೊಂಡಿದ್ದಾರೆ. ದೇಶದ ಮೊದಲ ವೃತ್ತಿಪರ ಮಹಿಳಾ ಸರ್ಫರ್ ಎಂದು ಕರೆಸಿ ಕೊಂಡಿರುವ ಇಶಿತಾ ಉಡುಪಿಯಕೋಡಿ ಬೆಂಗ್ರೆಯ ಸಮುದ್ರ ಕಿನಾರೆ ಯಲ್ಲಿ ತಮ್ಮದೇ ಆದ ಸರ್ಫಿಂಗ್ ಕ್ಲಬ್ ವೊಂದನ್ನು ಆರಂಭಿಸಿದ್ದಾರೆ. ತಮ್ಮ ಗೆಳೆಯ ತುಷಾರ್ ಪಥಿಯಾನ್ ಜತೆಗೆ ಆರಂಬಿsಸಿರುವ ಈ `ಶಾಕಾ ಸರ್ಫಿಂಗ್ ಕ್ಲಬ್' ಈಗ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಜತೆಗೆ, ಸ್ಥಳೀಯರಲ್ಲೂ ಸರ್ಫಿಂಗ್ ಕುರಿತು ಕ್ರೇಜ್ ಹುಟ್ಟಿ ಸುತ್ತಿದೆ. ವಿದೇಶಿಗರನ್ನೂ ಉಡುಪಿಯ ಕಡಲ ಕಿನಾರೆಯತ್ತ ಆಕರ್ಷಿಸುತ್ತಿದೆ. ಈ ಕ್ಲಬ್ ಆಸಕ್ತರಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಮಾಳವಿಯಾ ಮಣಿಪಾಲದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆಯುತ್ತಿ ದ್ದಾಗ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ವೇಳೆ ಜರ್ಮನಿಯವಿದ್ಯಾರ್ಥಿಯೊಬ್ಬರ ಮೂಲಕ ಸರ್ಫಿಂಗ್ ಕುರಿತು ಆಸಕ್ತಿ ಬೆಳೆಸಿ ಕೊಂಡಿದ್ದರು. ಆ ವಿದ್ಯಾರ್ಥಿ ಬಳಿ ಇದ್ದ ಸರ್ಫ್ ಬೋರ್ಡ್ ಕಂಡು ಅಚ್ಚರಿಪಟ್ಟಿದ್ದರು. ಆ ಬಳಿಕ ಸರ್ಫಿಂಗ್ ಕುರಿತು ಆಸಕ್ತಿ ಬೆಳೆಯಿತು ಎನ್ನುತ್ತಾರೆ ಇಶಿತಾ. ಈಗ ಸರ್ಫಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಇಶಿತಾ ರಾಕ್ಸಿ ಸರ್ಫ್ ವೇರ್ ಎನ್ನುವ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
Advertisement