ಕ್ಷೌರಿಕನ ಮಗನ 'ಚಿನ್ನ'ದಂಥ ಸಾಧನೆ!

ತಂದೆ ವೃತ್ತಿಯಲ್ಲೂ ಆಸರೆಯಾಗಿ, ತನ್ನ ಶೈಕ್ಷಣಿಕ ಹಾದಿಯಲ್ಲೂ ಗುರಿ ಸಾಧಿಸಿದ ದಾವಣೆಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ
ತನ್ನ ತಂದೆ ಹಾಗೂ ಸಹೋದರನೊಂದಿಗೆ ಜಯಪ್ರಕಾಶ್
ತನ್ನ ತಂದೆ ಹಾಗೂ ಸಹೋದರನೊಂದಿಗೆ ಜಯಪ್ರಕಾಶ್

ದಾವಣಗೆರೆ: ತಂದೆ ವೃತ್ತಿಯಲ್ಲೂ ಆಸರೆಯಾಗಿ, ತನ್ನ ಶೈಕ್ಷಣಿಕ ಹಾದಿಯಲ್ಲೂ ಗುರಿ ಸಾಧಿಸಿದ ದಾವಣೆಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ಆರ್. ಜಯಪ್ರಕಾಶ್ ನಾಲ್ಕು ಚಿನ್ನದ ಪದಕ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಘಟಿಕೋತ್ಸವದಲ್ಲಿ ಜಯಪ್ರಕಾಶ್‌ಗೆ ಪದಕ ಪ್ರದಾನ ಮಾಡಲಾಯಿತು. ಕ್ಷೌರಿಕ ಕಾಯಕ ಮಾಡುವ ತಂದೆ ಗಳಳಿಸುವ ಅಲ್ಪ ಆದಾಯದಲ್ಲೇ ಬಡ ಕುಟುಂಬ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ, ಓದಿನಲ್ಲಿ ಉತ್ತನ ಸಾಧನೆ ಮಾಡಬೇಕೆಂಬ ಗುರಿ. ಈ ಎರಡನ್ನೂ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಕಾಯಕದಲ್ಲೂ 'ಜಯ' ಪಡೆದು, ಸಾಧನೆಯಿಂದಲೂ 'ಪ್ರಕಾಶ'ಮಾನವಾಗಿದ್ದಾನೆಂಬ ಸಂಭ್ರಮ ಹೆತ್ತವರಲ್ಲಿತ್ತು.

ಬೆಳಗ್ಗೆ ಮತ್ತು ಸಂಜೆ ತಂದೆಗೆ ಅಂಗಡಿಯಲ್ಲಿ ಕೈಜೋಡಿಸುತ್ತಿದ್ದ ಜಯಪ್ರಕಾಶ ತರಗತಿಗೂ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದ. ಬಡತನದಲ್ಲೂ ಓದಿನ ಕಡೆಗಿದ್ದ ಶ್ರದ್ಧೆ ಹಾಗೂ ಸಾಧಿಸುವ ಚಲ ಈಗ ಆತನಿಗೆ ನಾಲ್ಕು ಚಿನ್ನದ ಪದಕ ತಂದುಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com