ತಮಿಳ್ನಾಡಿನ ಚೆನ್ನೈ ಬಳಿ ಮೈಲಾಪುರ್ ನಿವಾಸಿಯಾಗಿರುವ ಚಿತ್ರಾ ವಿಶ್ವನಾಥನ್ ಅವರಿಗೀಗ 76ರ ಹರೆಯ. ಮೈಲಾಪುರ್ ಮಾಮಿ ಎಂದೇ ಕರೆಯಲ್ಪಡುವ ಚಿತ್ರಾ ನೆಟ್‌ಲೋಕದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಓಹೋ..ಫೇಸ್‌ಬುಕ್, ಟ್ವಿಟರ್ ನಲ್ಲಿ ಆ್ಯಕ್ಟಿವ್ ಇದ್ದಾರಾ? ಎಂದು ಕೇಳಬೇಡಿ. ಈಕೆ ಆಕ್ಟಿವ್ ಆಗಿರುವುದು ಮೊಬೈಲ್ ಆ್ಯಪ್‌ನಲ್ಲಿ. ಹೌದು ಚಿತ್ರಾ ವಿಶ್ವನಾಥನ್ ಅವರಿಗೆ ತಮ್ಮದೇ ಆದ ಮೊಬೈಲ್ ಆ್ಯಪ್ ಇದೆ. ಅಡುಗೆಯ ರೆಸಿಪಿ ಹೊಂದಿರುವ ಈ ಆ್ಯಪ್‌ನ ಹೆಸರು Ask Chitvish. ಈ ಆ್ಯಪ್ ಮೂಲಕ ಪಾಯಸ, ಕಡುಬು, ಜಿಗರ್ ತಂಡಾ, ರವೆ ದೋಸೆ ಮೊದಲಾದ ಮನೆ ಅಡುಗೆಗಳ ಪಾಕ ವಿಧಾನಗಳನ್ನು ಅರಿಯಬಹುದು.