ಈಕೆಯ ಹೆಸರು ಶ್ರುತಿ. ಪಂಜಾಬ್‌ನ ನಾಕೋದರ್ ನಿವಾಸಿಯಾಗಿರುವ ಈಕೆ ಪಂಜಾಬ್ ಸಿವಿಲ್ ಸರ್ವೀಸ್‌ನ ನ್ಯಾಯಾಧೀಶ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಅಪ್ಪ ಸುರೇಂದರ್ ಕುಮಾರ್ ಜಲಂಧರ್ ಕೋರ್ಟ್ ಆವರಣ ಬಳಿ ಟೀ ಮಾರುತ್ತಿದ್ದಾರೆ. ಟೀ ಮಾರುವವನ ಮಗಳು ಶ್ರುತಿ ಉನ್ನತ ವಿದ್ಯಾಭ್ಯಾಸ ಪಡೆದು ನ್ಯಾಯಾಧೀಶೆಯಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಿದ್ದಾಳೆ.