
ಬೆಂಗಳೂರು: ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ಪ್ರತಿಷ್ಠಿತ ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ ಸಾಮರ್ಥ್ಯಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆ ಗ್ರೀನ್ ಟ್ಯಾಲೆಂಟ್ಸ್(ಹಸಿರು ಪ್ರತಿಭೆಗಳು) ಸ್ಪರ್ಧೆಯ 27 ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಬಿಎಂಬಿಎಫ್ ಸುಸ್ಥಿರತೆ, ಹವಾಮಾನ, ಶಕ್ತಿ ನಿರ್ದೇಶನಾಲಯದ ಮುಖ್ಯಸ್ಥ ವಿಲ್‍ಫ್ರೆಡ್ ಕ್ರಾಸ್ ಅವರು 20 ದೇಶಗಳ 27 ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇವರಲ್ಲಿ ಭಾರತದ 27 ವರ್ಷದ ಅರುಣ್ ಪ್ರಸಾದ್ ಕುಮಾರ್ ಅವರು ಸೇರಿದ್ದಾರೆ.
ಅರುಣ್ ಪ್ರಸಾದ್ ಕುಮಾರ್ ಅವರು ಭೂ ದೂರ ಸಂವೇದಿ ಮತ್ತು ಭೂ ಮಾಹಿತಿ ತಂತ್ರಜ್ಞಾನ ಕುರಿತು ಪಿಎಚ್,ಡಿ ಮಾಡುತ್ತಿದ್ದು, ಅವರಿಗೆ ಜರ್ಮನಿಯ ಪ್ರವಾಸ ಕೈಗೊಂಡು ಈ ಕ್ಷೇತ್ರದಲ್ಲಿ ಮುಂಚೂಣಿಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನೀಡಲಾಗಿದೆ.
ಪ್ರಸಕ್ತ ವರ್ಷದ ಸ್ಪರ್ಧೆ 90ಕ್ಕೂ ಹೆಚ್ಚಿನ ದೇಶಗಳ 550ಕ್ಕೂ ಹೆಚ್ಚಿನ ಅರ್ಜಿದಾರರನ್ನು ಆಕರ್ಷಿಸಿತ್ತು. ನಗರ ಯೋಜನೆ, ಜೈವಿಕ ವೈವಿಧ್ಯತೆ, ನವೀಕರಿಸಬಹುದಾದ ಇಂಧನ ಮತ್ತು ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ, ಚಿಂತನೆಯ ಹಂಚಿಕೆಗಳಿಗೆ ಈ ಕಾರ್ಯಕ್ರಮ ಅವಕಾಶ ಮಾಡಿಕೊಡುತ್ತಿದೆ.
Advertisement