
ಟೋಕಿಯೊ: ಜಪಾನಿನಲ್ಲಿ 96 ರ ಇಳಿ ವಯಸ್ಸಿನ ವೃದ್ಧರೊಬ್ಬರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆದಿರುವ ಶಿಗೆಮಿ ಹಿರಾತಾ, ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
1919 ರಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ ತಮ್ಮ ಪದವಿ ಮುಗಿಸಲು ಬರೊಬ್ಬರಿ 11 ವರ್ಷ ತೆಗೆದುಕೊಂಡಿದ್ದಾರೆ. 100 ವರ್ಷ ಬದುಕಬೇಕು ಎಂಬ ಹಂಬಲದಲ್ಲಿರುವ ಹಿರಾತಾ ಅವರು ವಿಶ್ವಮಹಾಯುದ್ದ 2ರ ಸಂದರ್ಭದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಕಳೆದ ವರ್ಷ ಜಪಾನಿನ 100ರ ಪ್ರಾಯದ ಮಿಯಿಕೊ 1,500 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಯಶಸ್ವಿಯಾಗಿ ವಿಶ್ವದಾಖಲೆ ನಿರ್ವಿುಸಿದ್ದು ಇವರ ಮತ್ತೊಂದು ಸಾಧನೆ.
Advertisement