ಹರ್ಷವರ್ಧನ್ ಜಾಲಾ
ಸಾಧನೆ
ಡ್ರೋಣ್ ನಿರ್ಮಾಣಕ್ಕಾಗಿ 14ರ ಬಾಲಕನೊಂದಿಗೆ 5 ಕೋಟಿ ರು. ಒಪ್ಪಂದಕ್ಕೆ ಗುಜರಾತ್ ಸಹಿ
ಗುಜರಾತ್ ಸರ್ಕಾರ ಜನವರಿ 10ರಿಂದ 13ರರವರೆಗೆ 8ನೇ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ ಆಯೋಜಿಸಿದ್ದು, ಇದರಲ್ಲಿ ದೊಡ್ಡ ದೊಡ್ಡ...
ಗುಜರಾತ್ ಸರ್ಕಾರ ಜನವರಿ 10ರಿಂದ 13ರರವರೆಗೆ 8ನೇ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ ಆಯೋಜಿಸಿದ್ದು, ಇದರಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳು ಭಾಗವಹಿಸುತ್ತವೆ. ಆದರೆ ಈ ಬಾರಿ 14 ವರ್ಷದ ಬಾಲಕೊಬ್ಬ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಲ್ಲದೆ ಡ್ರೋಣ್ ನಿರ್ಮಾಣಕ್ಕಾಗಿ ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ.
ಹರ್ಷವರ್ಧನ್ ಜಾಲಾ ಎಂಬ 14 ವರ್ಷದ ಅಸಾಮಾನ್ಯ ಬಾಲಕ 5 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಸದ್ದು ಮಾಡಿದ್ದಾನೆ.
10ನೇ ತರಗತಿಯಲ್ಲಿ ಓದುತ್ತಿರುವ ಹರ್ಷವರ್ಧನ್, ಒಟ್ಟು ಮೂರು ಬಗೆಯ ಡ್ರೋಣ್ ಗಳನ್ನು ಅವಿಷ್ಕರಿಸಿದ್ದು, ಈ ಡ್ರೋಣ್ ನೆಲದಲ್ಲಿ ಹುದುಗಿಸಿಡಲಾದ ಬಾಂಬ್ ಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಲು ನೆರವಾಗುತ್ತದೆ.
ಟಿವಿ ನೋಡುತ್ತಿದ್ದ ಸಂದರ್ಭದಲ್ಲಿ ನೆಲದಲ್ಲಿ ಹುದುಗಿಸಿಡಲಾದ ಬಾಂಬ್ ಗಳಿಂದ ಸೈನಿಕರು ಅಪಾಯ ಎದುರಿಸುತ್ತಿರುವುದನ್ನು ಮನಗಂಡು ಡ್ರೋಣ್ ಅವಿಷ್ಕಾರಕ್ಕೆ ಮುಂದಾಗಿರುವುದಾಗಿ ಹರ್ಷವರ್ಧನ್ ತಿಳಿಸಿದ್ದಾರೆ.
ಬಾಪುನಗರದ ಸವ್ರೋದಯ ಶಾಲೆಯ ವಿದ್ಯಾರ್ಥಿಯಾಗಿರೋ ಹರ್ಷವರ್ಧನ್ ಈಗಾಗಲೇ ತಮ್ಮ ಡ್ರೋಣ್ ಗಳಿಗೆ ಪೇಟೆಂಟ್ ಗಾಗಿ ನೋಂದಾಯಿಸಿದ್ದಾರೆ. ಅಲ್ಲದೆ ಎರೋಬೊಟಿಕ್ಸ್ ಎಂಬ ಸ್ವಂತ ಕಂಪನಿಯೊಂದನ್ನು ಕೂಡ ಹೊಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ