ಕೊಚ್ಚಿ ವಿಮಾನನಿಲ್ದಾಣಕ್ಕೆ ಸೌರ ವಿದ್ಯುಚ್ಛಕ್ತಿ

ಕೊಚ್ಚಿ ವಿಮಾನನಿಲ್ದಾಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ೧೨ ಮೆಗಾ ವ್ಯಾಟ್ ಸೌರ ವಿದ್ಯುಚ್ಛಕ್ತಿ ಕೇಂದ್ರವನ್ನು ಮುಖ್ಯಮಂತ್ರಿ ಒಮನ್ ಚ್ಯಾಂಡಿ ಉದ್ಘಾಟಿಸಿದ್ದು, ಈಗ ಈ
ಸೌರ ವಿದ್ಯುಚ್ಛಕ್ತಿ ಕೇಂದ್ರದ ಒಂದು ದೃಶ್ಯ
ಸೌರ ವಿದ್ಯುಚ್ಛಕ್ತಿ ಕೇಂದ್ರದ ಒಂದು ದೃಶ್ಯ

ಕೊಚ್ಚಿ: ಕೊಚ್ಚಿ ವಿಮಾನನಿಲ್ದಾಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ೧೨ ಮೆಗಾ ವ್ಯಾಟ್ ಸೌರ ವಿದ್ಯುಚ್ಛಕ್ತಿ ಕೇಂದ್ರವನ್ನು ಮುಖ್ಯಮಂತ್ರಿ ಒಮನ್ ಚ್ಯಾಂಡಿ ಉದ್ಘಾಟಿಸಿದ್ದು, ಈಗ ಈ ವಿಮಾನನಿಲ್ದಾಣ ಸೌರಶಕ್ತಿ ಚಾಲಿತವಾಗಿದೆ.

ಕಾರ್ಗೋ ಕಾಂಪ್ಲೆಕ್ಸಿನ ೪೫ ಎಕರೆ ಜಾಗದಲ್ಲಿ ೪೬೧೫೦ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗಿದ್ದು, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಇದು ಪ್ರತಿ ದಿನದ ಚಟುವಟಿಕೆಗಳಿಗಾಗಿ ೫೦,೦೦೦ ದಿಂದ ೬೦,೦೦೦ ಯುನಿಟ್ ಸೌರ ವಿದ್ಯುಚ್ಛಕ್ತಿಯನ್ನು ಒದಗಿಸಲಿದೆ.

ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೨೦೧೩ ರಲ್ಲೇ ಸಣ್ಣ ಮಟ್ಟದ ಸೌರಶಕ್ತಿ ಕೇಂದ್ರವನ್ನು ಸ್ಥಾಪಿಸಿತ್ತು. ಇದು ಗ್ರಿಡ್ ಕೊಂಡಿಯುಳ್ಳ ಸೌರಶಕ್ತಿ ವಿದ್ಯುತ್ ಕೇಂದ್ರವಾಗಿದ್ದು, ವಿದ್ಯುಚ್ಛಕ್ತಿಯನ್ನು ಕ್ರೋಢೀಕರಿಸಲು ಯಾವುದೇ ಬ್ಯಾಟರಿ ಅವಶ್ಯಕತೆ ಇರುವುದಿಲ್ಲ.

ಕೋಲ್ಕತ್ತಾ ಮೂಲದ ವಿಕ್ರಮ್ ಸೋಲಾರ್ ಪ್ರೈವೇಟ್ ಲಿಮಿಟೆಡ್ ಈ ಸೌರಶಕ್ತಿ ಕೇಂದ್ರವನ್ನು ಸ್ಥಾಪಿಸಿದೆ.

ಮುಂದಿನ ೨೫ ವರ್ಷಗಳಲ್ಲಿ ಈ ಹಸಿರು ವಿದ್ಯುಚ್ಛಕ್ತಿ ಕೇಂದ್ರ, ಕಲ್ಲಿದ್ದಲು ವಿದ್ಯುಚ್ಛಕ್ತಿ ಕೇಂದ್ರ ಹೊರಸೂಸುವ ಮೂರು ಲಕ್ಷ ಮೆಟ್ರಿಕ್ ಟನ್ ನಷ್ಟು ಇಂಗಾಲಾಮ್ಲವನ್ನು ತಡೆಯಲಿದೆ. ಇದು ೩೦ ಲಕ್ಷ ಮರಗಳನ್ನು ಬೆಳೆಸುವುದಕ್ಕೆ ಸಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com