ಪ್ರಾಣಿಗಳಲ್ಲಿ ಸಂಭೋಗದ ಸಂಕೇತಗಳು ವೇಗವಾಗಿ ಕಾಣೆಯಾಗುತ್ತಿವೆ: ಅಧ್ಯಯನ

ತಲತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಾಣಿಗಳ ಆರೋಗ್ಯಕರ ಸಂತಾನಾಭಿವೃದ್ಧಿಗಾಗಿ ಬಳವಳಿಯಾಗಿ ಬಂದಿದ್ದ ಸಂಭೋಗ ಸಂಕೇತಗಳು ಬರುಬರುತ್ತಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ತಲತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಾಣಿಗಳ ಆರೋಗ್ಯಕರ ಸಂತಾನಾಭಿವೃದ್ಧಿಗಾಗಿ ಬಳವಳಿಯಾಗಿ ಬಂದಿದ್ದ ಸಂಭೋಗ ಸಂಕೇತಗಳು ಬರುಬರುತ್ತಾ ವೇಗವಾಗಿ ಕ್ಷೀಣಿಸುತ್ತಿವೆ ಎನ್ನುತ್ತದೆ ನೂತನ ಅಧ್ಯಯನವೊಂದು.

"ಇದು ಕೆಲವು ಪ್ರಾಣಿಗಳನ್ನು ಹೆಚ್ಚು ಅಳಿವಿನಂಚಿಗೆ ದೂಕುತ್ತದೆ. ಈ ಸಂಭೋಗ ಸಂಕೇತಗಳು ಕಾಣೆಯಾಗುತ್ತ ಬಂದಂತೆ ಅಳಿವಿನ ಪಾಯವನ್ನು ಎದುರಿಸುವುದಲ್ಲದೆ, ಬೇರೆ ಜಾತಿಯ ಪ್ರಾಣಿಗಳೊಂದಿಗೆ ಮಿಶ್ರತಳಿ ಸಂತಾನಾಭಿವೃದ್ಧಿಗೆ ಎಡೆ ಮಾಡಿಕೊಡುತ್ತದೆ" ಎಂದು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಎಮಿಲಿ ವೀಗೆಲ್ ತಿಳಿಸಿದ್ದಾರೆ.

"ಆದರೆ ಈ ಸಂಕೇತಗಳು ಹಲವಾರು ಪ್ರಾಣಿವರ್ಗದಲ್ಲಿ ಕಳೆದುಹೋಗುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ" ಎಂದು ವಿವರಿಸಿದ್ದಾರೆ ವೀಗೆಲ್.

"ತಾನು ಬದುಕುತ್ತಿರುವ ಸಾಮಾಜಿಕ ಮತ್ತು ಭೌತಿಕ ಪರಿಸರದಲ್ಲಿ ಪ್ರಾಣಿವರ್ಗದ ಮೇಲಿರುವ ಒತ್ತಡ ಕೂಡ ಇದಕ್ಕೆ ಕಾರಣ ಇರಬಹುದು ಎಂದು ನಾವು ಪರಿಸರವನ್ನು ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ" ಎಂದಿದ್ದಾರೆ.

ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ ಸುತ್ತಮುತ್ತಲಿನ ವಿಪರೀತ ಶಬ್ದದ ಮಧ್ಯೆ ಈ ಸಂಭೋಗದ ಕರೆಗಳ ಶಬ್ದಗಳು ಕೇಳದೆ ಇರುವುದು ಕೂಡ ಕಾರಣವಾಗಬಹುದು ಎಂದು ಲೇಖಕರು ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com