ಹಣ್ಣು-ತರಕಾರಿಗಳಲ್ಲಿ ಹೆಚ್ಚು ಕೀಟನಾಶಕ ಅಂಶ ಪತ್ತೆ: ಸರ್ಕಾರ ವರದಿ

ತರಕಾರಿ, ಹಣ್ಣು, ಅಕ್ಕಿ, ಗೋಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಅಂಶ...
ಹಣ್ಣು-ತರಕಾರಿಗಳಲ್ಲಿ ಹೆಚ್ಚು ಕೀಟನಾಶಕ ಅಂಶ ಪತ್ತೆ: ಸರ್ಕಾರ ವರದಿ
Updated on

ನವದೆಹಲಿ: ತರಕಾರಿ, ಹಣ್ಣು, ಅಕ್ಕಿ, ಗೋಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಅಂಶ ಪತ್ತೆಯಾಗಿದೆ ಎಂದು ಸರ್ಕಾರದ ವರದಿ ಹೇಳಿದೆ.

16,790ರಷ್ಟು ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 509 ಆಹಾರಗಳಲ್ಲಿ ಹೆಚ್ಚಿನ ಕೀಟನಾಶಕ ಅಂಶವಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಹಾಲು, ಮಾಂಸ, ಮತ್ತು ನೀರಿನಲ್ಲಿ ಯಾವುದೇ ರೀತಿಯ ಕೀಟನಾಶಕ ಪತ್ತೆಯಾಗಿಲ್ಲ.

ರಾಷ್ಟ್ರಮಟ್ಟದಲ್ಲಿ ಕೀಟನಾಶಕಗಳ ಬಳಕೆ ಕಡಿತ ಯೋಜನೆಯಡಿಯಲ್ಲಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ. ತರಕಾರಿ ಮತ್ತು ಹಣ್ಣುಗಳಿಗೆ ಹೆಚ್ಚಿನ ಮಟ್ಟದಲ್ಲಿ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಈ ವರದಿ ಹೇಳುತ್ತಿದೆ.

ಸಗಟು ಮಾರಾಟ ಮಳಿಗೆಗಳಲ್ಲಿ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಂಗ್ರಹಿಸಲಾದ ಆಹಾರಗಳನ್ನು ಸಂಗ್ರಹಿಸಿ ದೇಶದ ವಿವಿಧ ಲ್ಯಾಬ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯ ಪ್ರಕಾರ, 7,591 ತರಾಕಾರಿಗಳಲ್ಲಿ 221 ತರಕಾರಿಗಳಲ್ಲಿ ಹೆಚ್ಚಿನ ಮಟ್ಟದ ಕ್ರಿಮಿನಾಶಕಗಳು ಪತ್ತೆಯಾಗಿದೆ.

ಎಲೆಕೋಸು, ಬದನೆ, ಟೊಮೆಟೋ, ಬೆಂಡಕಾಯಿ, ಬೆಂಡೆಕಾಯಿ, ಸೌತೆಕಾಯಿ, ಹಸಿರು ಬಟಾಣಿಗೆ ಹೋಲಿಸಿದರೆ, ಕೋಸು, ಕ್ಯಾಪ್ಸಿಕಂ, ಹಸಿರು ಮೆಣಸಿಕಾಯಿ, ಹೂಕೋಸುಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಪತ್ತೆಯಾಗಿದೆ.

ಇನ್ನು ಹಣ್ಣುಗಳಲ್ಲಿ 2,235ಕ್ಕೆ 36 ಹಣ್ಣುಗಳು ಹೆಚ್ಚಿನ ಕೀಟನಾಶಕ ಅಂಶ ಹೊಂದಿದೆ. ಅದರಲ್ಲೂ ದ್ರಾಕ್ಷಿಗಳಿಗೆ ಹೆಚ್ಚಿನ ಮಟ್ಟದ ಕೀಟನಾಶಕ ಬಳಸಲಾಗುತ್ತಿದೆ ಎಂಬುದು ಈ ಪರೀಕ್ಷೆಯಿಂದ ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com